ಸ್ಥಳಕ್ಕೆ ತಲುಪಿ ನೋಡಿದಾಗ ಗಂಟೆಗಳ ಕಾಲ ಜನಸಂದಣಿಯ ನಡುವೆ ಆಕೆಯ ಐಫೋನ್ ಬಿದ್ದಿದ್ದ ಜಾಗದಲ್ಲೇ ಸುರಕ್ಷಿತವಾಗಿತ್ತು. ಜಪಾನ್ ದೇಶದ ಪ್ರಾಮಾಣಿಕತೆ ಮತ್ತು ಸುರಕ್ಷಿತ ವಾತಾವರಣದಿಂದ ಮಾತ್ರ ಇದು ಸಾಧ್ಯ ಎಂದು ಬಣ್ಣಿಸಿರುವ ಪ್ರಗತಿ, ತಾವು ಐಫೋನ್ ಕಳೆದುಕೊಳ್ಳುವುದು ಇದು ಐದನೇ ಬಾರಿಯಾಗಿದ್ದು, ಪ್ರತಿ ಬಾರಿಯೂ ಫೋನ್ ಮರಳಿ ಸಿಕ್ಕಿರುವುದು ನಿಜಕ್ಕೂ ನಂಬಲಸಾಧ್ಯ ಎಂದು ಖುಷಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).