ಡಿ.31ರಂದು ಕಾಣೆಯಾಗಿದ್ದ ಭಾರತೀಯ ಮೂಲದ ಯುವತಿಯ ಮೃತದೇಹ ಮಾಜಿ ಬಾಯ್​ಫ್ರೆಂಡ್​ ಮನೆಯಲ್ಲಿ ಪತ್ತೆ! Indian Woman

ನಿಕಿತಾ ಗೋಡಿಶಾಲಾ
ನಿಕಿತಾ ಗೋಡಿಶಾಲಾ
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ವರ್ಷದ ಹಿಂದಿನ ದಿನ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಶವವಾಗಿ ಪತ್ತೆ
  • ಅಮೆರಿದಕ ಮೇರಿಲ್ಯಾಂಡ್​ನಲ್ಲಿರುವ ಮಾಜಿ ಬಾಯ್​ಫ್ರೆಂಡ್​ ಅಪಾರ್ಟ್​ಮೆಂಟ್​ನಲ್ಲಿ ಮೃತದೇಹ
  • ಮಾಜಿ ಬಾಯ್​ಫ್ರೆಂಡ್​ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪ
ನ್ಯೂಯಾರ್ಕ್​: ಹೊಸ ವರ್ಷದ ಹಿಂದಿನ ದಿನ ಅಂದರೆ, ಡಿ.31ರಂದು ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿಯ ( Indian Woman ) ಮೃತದೇಹ ಇರಿತದ ಗಾಯಗಳೊಂದಿಗೆ ಅಮೆರಿದಕ ಮೇರಿಲ್ಯಾಂಡ್​ನಲ್ಲಿರುವ ಆಕೆಯ ಮಾಜಿ ಬಾಯ್​ಫ್ರೆಂಡ್​ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿದೆ.
ಮೃತಳನ್ನು ನಿಕಿತಾ ಗೋಡಿಶಾಲಾ (27) ಎಂದು ಗುರುತಿಸಲಾಗಿದೆ. ಈಕೆ ಎಲ್ಲಿಕಾಟ್​ ನಗರದಲ್ಲಿ ಡೇಟಾ ಮತ್ತು ಸ್ಟ್ರಾಟೆಜಿ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಮೃತದೇಹ 26 ವರ್ಷದ ಮಾಜಿ ಬಾಯ್​ಫ್ರೆಂಡ್​ ಅರ್ಜುನ್​ ಶರ್ಮ ಒಡೆತನದ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿದೆ ಎಂದು ಹೋವರ್ಡ್​ ಕೌಂಟಿ ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಮಾಜಿ ಬಾಯ್​ಫ್ರೆಂಡ್​ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪ ಹೊರಿಸಿ ಬಂಧನ ವಾರಂಟ್ ಅನ್ನು ಪಡೆದಿದ್ದಾರೆ. ಇನ್ನು ಆರೋಪಿ ಶರ್ಮ ಜನವರಿ 2ರಂದೇ ನಿಕಿತಾ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದ. ಅಲ್ಲದೆ, ಆಕೆಯನ್ನು ಕೊನೆಯದಾಗಿ ಡಿ.31ರಂದು ನೋಡಿದ್ದಾಗಿ ಹೇಳಿದ್ದ. ಜನವರಿ 3 ರಂದು, ತನಿಖಾಧಿಕಾರಿಗಳು ಅದೇ ಅಪಾರ್ಟ್​ಮೆಂಟ್​ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ನಿಕಿತಾ ಗೋಡಿಶಾಲಾ ಮೃತದೇಹ ಇರಿತದ ಗಾಯಗಳೊಂದಿಗೆ ಪತ್ತೆಯಾಗಿದೆ.
ಗೋಡಿಶಾಲಾ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ದಿನವೇ ಅರ್ಜುನ್​ ಶರ್ಮ ಭಾರತಕ್ಕೆ ಎಸ್ಕೇಪ್​ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಡಿ.31 ರಂದು ಸಂಜೆ 7 ಗಂಟೆಯ ಬಳಿಕ ಶರ್ಮ, ನಿಕಿತಾಳನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಸದ್ಯ ತನಿಖೆ ಮುಂದುವರೆದಿದ್ದು, ಕೊಲೆಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಅರ್ಜುನ್​ ಶರ್ಮನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಫೆಡರಲ್ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಹೊವಾರ್ಡ್ ಕೌಂಟಿ ಪೊಲೀಸರು ಹೇಳಿದ್ದಾರೆ. ಅಲ್ಲದೆ, ನಿಕಿತಾ ಅವರ ಕುಟುಂಬದೊಂದಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net