ಐಐಟಿ ಸೋಲು, ಸಾಲು ಸಾಲು ತಿರಸ್ಕಾರ: ಎಲ್ಲವನ್ನೂ ಗೆದ್ದು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ತಾಯಿಗೆ ಜಾಗತಿಕ ಗೌರವ ತಂದುಕೊಟ್ಟ ಭಾರತೀಯ ಯುವಕ! Abhijay Arora

Abhijay Arora ಚಿತ್ರ Instagram
Abhijay Arora ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಐಐಟಿ-ಜೆಇಇ ಪ್ರವೇಶ ಪರೀಕ್ಷೆಯನ್ನು ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ
  • ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಅನೇಕ ಯುವಕರು ತಮ್ಮ ಭವಿಷ್ಯವೇ ಮುಗಿದುಹೋಯಿತು ಎಂದು ನಿರಾಶರಾಗುತ್ತಾರೆ
  • ಒಂದು ಪರೀಕ್ಷೆ ನಮ್ಮ ಇಡೀ ಜೀವನದ ಯಶಸ್ಸನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನು ಭಾರತೀಯ ಉದ್ಯೋಗಿ ತಿಳಿಸಿದ್ದಾರೆ
Abhijay Arora: ಭಾರತದಲ್ಲಿ ಐಐಟಿ-ಜೆಇಇ (IIT-JEE) ಪ್ರವೇಶ ಪರೀಕ್ಷೆಯನ್ನು ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಅನೇಕ ಯುವಕರು ತಮ್ಮ ಭವಿಷ್ಯವೇ ಮುಗಿದುಹೋಯಿತು ಎಂದು ನಿರಾಶರಾಗುತ್ತಾರೆ. ಆದರೆ, ಒಂದು ಪರೀಕ್ಷೆ ನಮ್ಮ ಇಡೀ ಜೀವನದ ಯಶಸ್ಸನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನು ಭಾರತೀಯ ಮೂಲದ ತಂತ್ರಜ್ಞಾನ ವೃತ್ತಿಪರರೊಬ್ಬರು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಐಐಟಿ ಪರೀಕ್ಷೆಯಲ್ಲಿ ಸೋತರೂ ಧೃತಿಗೆಡದೆ, ಇಂದು ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆ 'ಗೂಗಲ್' (Google) ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಯಶಸ್ಸು ಗಳಿಸಿರುವ ಅಭಿಜಯ್ ಅರೋರಾ ವುಯ್ಯುರು ಅವರ ಯಶೋಗಾಥೆ ಮತ್ತು ಅವರು ತಮ್ಮ ಒಂಟಿ ತಾಯಿಗೆ ನೀಡಿದ ಅದ್ಭುತ ಉಡುಗೊರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಘಟನೆ ಏನು?

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವೀಡಿಯೋದಲ್ಲಿ, ಅಭಿಜಯ್ ಭಾರತದಲ್ಲಿರುವ ತನ್ನ ತಾಯಿಗೆ ವೀಡಿಯೊ ಕರೆ ಮಾಡಿ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್​ನ ದೈತ್ಯ ಪರದೆಯನ್ನು ನೋಡಲು ಹೇಳಿದನು. ಕೆಲವು ಕ್ಷಣಗಳ ನಂತರ ಅವರ ಛಾಯಾಚಿತ್ರವು ಆ ಬಿಲ್​​ಬೋರ್ಡ್​ನಲ್ಲಿ ಕಾಣಿಸಿಕೊಂಡಿತು. ಆ ತಾಯಿ ಸಾವಿರಾರು ಮೈಲುಗಳಷ್ಟು ದೂರದಿಂದ ನೋಡುತ್ತಾ, ಗೌರವವು ಸಂಪೂರ್ಣವಾಗಿ ತನಗೇ ಸಮರ್ಪಿತವಾಗಿದೆ ಎಂದು ಅರಿತುಕೊಂಡು ಸಂತೋಷ ವ್ಯಕ್ತಪಡಿಸಿದರು.

ಪೋಸ್ಟ್​ನಲ್ಲೇನಿದೆ?

ವಿಡಿಯೋ ಹಂಚಿಕೊಂಡ ಅಭಿಜಯ್, ತಮ್ಮ ಯಶಸ್ಸಿನ ಹಿಂದಿರುವ ತಾಯಿಯ ಹೋರಾಟವನ್ನು ಭಾವುಕ ಸಾಲುಗಳ ಮೂಲಕ ನೆನೆದಿದ್ದಾರೆ. "ತಮ್ಮ ಸ್ವಂತ ಕನಸುಗಳಿಗಿಂತಲೂ ಹೆಚ್ಚಾಗಿ ನನ್ನ ಕನಸುಗಳನ್ನೇ ಮುಂದಿಟ್ಟುಕೊಂಡು, ವರ್ಷಗಳ ಹಿನ್ನಡೆ, ಸೋಲು ಮತ್ತು ಅನಿಶ್ಚಿತತೆಯ ಕಠಿಣ ದಿನಗಳ ನಡುವೆಯೂ ಧೃತಿಗೆಡದೆ ನನ್ನೊಂದಿಗೆ ಭರವಸೆಯಾಗಿ ನಿಂತ ಮಹಿಳೆಗೆ ಧನ್ಯವಾದ ಹೇಳಲು ಇದೊಂದು ಸಣ್ಣ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net