ಇನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಭಾರತದಲ್ಲಿ ರಕ್ತವನ್ನು ಕುದಿಯುವಂತೆ ಮಾಡುತ್ತಿವೆ. ಅದಕ್ಕಾಗಿಯೇ ದೇಶದ ರಾಜಧಾನಿಯಲ್ಲಿ ಬೀದಿಗಿಳಿದಿರುವ ಜನರು, ಬಾಂಗ್ಲಾದೇಶದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಾಂಗ್ಲಾಗೆ ತಕ್ಕಶಾಸ್ತಿ ಮಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಬಾಂಗ್ಲಾ ಎಚ್ಚೆತ್ತುಕೊಳ್ಳದೇ ಹೋದರೆ ಪರಿಸ್ಥಿತಿ ಕೂಡ ಬದಲಾಗಬಹುದು. ಈ ಬೆಳವಣಿಗೆಗಳ ಮಧ್ಯೆ ಪಾಕಿಸ್ತಾನ ಕೂಡ ಮೂಗು ತೂರಿಸುತ್ತಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಮಾರಕ ಹೊಡೆತ ಅನುಭವಿಸಿದ ಪಾಕಿಸ್ತಾನ, ಬಾಂಗ್ಲಾ ವಿಚಾರದಲ್ಲೂ ಮಧ್ಯದಲ್ಲಿ ಪ್ರವೇಶ ಮಾಡುತ್ತಿದ್ದು, ಹಿಂದು ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಭಾರತ ಏನಾದರೂ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ, ಆ ದೇಶವನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದೆ. ಬಾಂಗ್ಲಾದೇಶದ ಹಿಂದೆ ನಿಲ್ಲುವುದಾಗಿ ಪಾಕ್ ಹೆಮ್ಮೆಪಡುತ್ತಿದೆ. ಆದರೆ, ಯುದ್ಧ ಅಂತಾ ಬಂದಾಗ ಉಭಯ ದೇಶಗಳಲ್ಲಿ ಯಾವುದು ಪ್ರಬಲ ಎಂಬುದನ್ನು ನಿರ್ಧರಿಸುವುದು ಅಗತ್ಯವಾಗಿರುತ್ತದೆ.