ಎಕ್ಸ್​ಗೆ ಬಿಸಿ ಮುಟ್ಟಿಸಿದ ಭಾರತ: ಮಹಿಳೆಯರ ಅಶ್ಲೀಲ ಡೀಪ್‌ಫೇಕ್ ಪೋಸ್ಟ್ ಮಾಡಿದ್ರೆ ಕಠಿಣ ಕ್ರಮ ಎಂದ ಮಸ್ಕ್! Elon Musk

Elon Musk
Elon Musk
Published on

ಪ್ರಮುಖ ಮುಖ್ಯಾಂಶಗಳು

  • ಗ್ರೋಕ್​ನ್ನು ಬಳಸಿಕೊಂಡು ಕಾನೂನುಬಾಹಿರ ವಿಷಯವನ್ನು ರಚಿಸದಂತೆ ಎಲೋನ್ ಮಸ್ಕ್ ಎಚ್ಚರಿಕೆ
  • ಕಾನೂನುಬಾಹಿರ ವಿಷಯವನ್ನು ಅಪ್‌ಲೋಡ್ ಮಾಡಲು ಗ್ರೋಕ್​ನ್ನು ಬಳಸುವವರು ಕಠಿಣ ಪರಿಣಾಮಗಳನ್ನು ಎದುರಿಸುತ್ತಿರಿ
  • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನೋಟಿಸ್​ ಬಳಿಕ ಮ
ಅಮೆರಿಕ: ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಮೈಕ್ರೋಬ್ಲಾಗಿಂಗ್ ಸೈಟ್ X(ಟ್ವಿಟರ್​) ವೇದಿಕೆಯ AI ಸೇವೆಯಾದ ಗ್ರೋಕ್​ನ್ನು ಬಳಸಿಕೊಂಡು ಕಾನೂನುಬಾಹಿರ ವಿಷಯವನ್ನು ರಚಿಸದಂತೆ ಅಥವಾ ಕಾನೂನುಬಾಹಿರ ವಿಷಯವನ್ನು ಅಪ್‌ಲೋಡ್ ಮಾಡುವವರಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು X ಗೆ ಎಲ್ಲಾ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು, ವಿಶೇಷವಾಗಿ AI ಅಪ್ಲಿಕೇಶನ್ ಗ್ರೋಕ್‌ನ ಸಹಾಯದಿಂದ ರಚಿಸಲಾಗಿರುವ ಅಶ್ಲೀಲ ವಿಷಯವನ್ನು ತಕ್ಷಣ ತೆಗೆದುಹಾಕುವಂತೆ ನಿರ್ದೇಶಿಸಿದ ನಂತರ ಈ ಹೇಳಿಕೆ ಬಂದಿದೆ.
ಅಕ್ರಮ ವಿಷಯವನ್ನು ರಚಿಸಲು ಹಾಗೂ ಯಾರಾದರೂ ಕಾನೂನುಬಾಹಿರ ವಿಷಯವನ್ನು ಅಪ್‌ಲೋಡ್ ಮಾಡಲು ಗ್ರೋಕ್​ನ್ನು ಬಳಸುವವರು ಕಠಿಣ ಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ ಎಂದು ಮಸ್ಕ್ X (ಟ್ವಿಟರ್) ನಲ್ಲಿ ಪೋಸ್ಟ್​ ಮಾಡಿದ್ದಾರೆ.
ಗ್ರೋಕ್ ಅನುಚಿತ ಚಿತ್ರಗಳನ್ನು ರಚಿಸುತ್ತಿದೆ ಎನ್ನುವುದು ಕೆಟ್ಟದಾಗಿ ಬರೆದಿದ್ದಕ್ಕಾಗಿ ಪೆನ್ನು ದೂಷಿಸಿದಂತಾಗಿದೆ. ಪೆನ್ನು ಏನು ಬರೆಯಬೇಕೆಂದು ನಿರ್ಧರಿಸುವುದಿಲ್ಲ; ಅದನ್ನು ಹಿಡಿದಿರುವ ವ್ಯಕ್ತಿ ಅದನ್ನು ಮಾಡುತ್ತಾನೆ. ಗ್ರೋಕ್​ ಸಹ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ನೀವು ಏನನ್ನು ನಮೂದಿಸುತ್ತಿರೋ ಅದನ್ನು ಮಾತ್ರ ಗ್ರೋಕ್​ ಒದಗಿಸುತ್ತದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು X ಗೆ ಔಪಚಾರಿಕ ನೋಟಿಸ್ ನೀಡಿದ ಎಲಾನ್​ ಮಸ್ಕ್​ ಈ ಟ್ವಿಟ್​ ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ ನಿಯಮಗಳ ಅಡಿಯಲ್ಲಿ ಕೃತಕ ಬುದ್ಧಿಮತ್ತೆ ಸಾಧನವಾದ ಗ್ರೋಕ್‌ನ ದುರುಪಯೋಗದ ಕುರಿತು ಶಾಸನಬದ್ಧ ಕರ್ತವ್ಯ ಪಾಲನೆಯಲ್ಲಿ ಗಂಭೀರ ಲೋಪಗಳನ್ನು ನೋಟಿಸ್​ನಲ್ಲಿ ನಮೂದಿಸಲಾಗಿತ್ತು.
ನೋಟಿಸ್‌ನಲ್ಲಿ ಅಶ್ಲೀಲ, ಲೈಂಗಿಕ ಮತ್ತು ಅವಹೇಳನಕಾರಿ ವಿಷಯವನ್ನು ಉತ್ಪಾದಿಸಲು ಮತ್ತು ಪ್ರಸಾರ ಮಾಡಲು ಗ್ರೋಕ್​ನ್ನು ಬಳಸಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ನಮೂದಿಸಲಾಗಿದೆ. ಇದರ ದುರುಪಯೋಗದಿಂದ ಮಹಿಳೆಯರ ಘನತೆ, ಗೌಪ್ಯತೆ ಮತ್ತು ಡಿಜಿಟಲ್ ಸುರಕ್ಷತೆಗೆ ಏಟು ಬೀಳುತ್ತಿದೆ ಎಂದು ಸಚಿವಾಲಯ ವಿವರಿಸಿದೆ. ತಕ್ಷಣ ಇವುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಕಠಿಣ ಪರಿಣಾಮಗಳ ಬಗ್ಗೆ ಸಚಿವಾಲಯ ಎಚ್ಚರಿಕೆಯನ್ನು ನೀಡಿತ್ತು.
ಗ್ರೋಕ್‌ನ ತಾಂತ್ರಿಕ ವಿನ್ಯಾಸ ಮತ್ತು ಆಡಳಿತವನ್ನು ತುರ್ತಾಗಿ ಪರಿಶೀಲಿಸಿ, ಎಲ್ಲಾ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು, ಅಪರಾಧ ಮಾಡುವ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು 72 ಗಂಟೆಗಳ ಒಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಲು ಸರ್ಕಾರ X ಗೆ ನಿರ್ದೇಶನ ನೀಡಿತು. ಈ ಹಿಂದೆ, ಫ್ರೆಂಚ್ ಅಧಿಕಾರಿಗಳು ಗ್ರೋಕ್ AI ಅನ್ನು ಲೈಂಗಿಕ ಡೀಪ್‌ಫೇಕ್‌ಗಳನ್ನು ರಚಿಸಲು ಬಳಸಲಾಗುತ್ತಿದೆ ಎಂಬ ದೂರುಗಳ ನಂತರ ಫ್ರಾನ್ಸ್‌ನ ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ ವೇದಿಕೆಯ ಮೇಲೆ ತನಿಖೆಯನ್ನು ನಡೆಸಿತ್ತು.

ಗ್ರೋಕ್‌ ಎಐ ಮಹಿಳೆಯ ಗೌರವಕ್ಕೆ ಧಕ್ಕೆ ತರುತ್ತಿದೆ : ಪ್ರಿಯಾಂಕಾ ಚತುರ್ವೇದಿ

ಗ್ರೋಕ್‌ ಎಐನ್ನು ಮಹಿಳೆಯರ ಅರೆನಗ್ನ ಫೋಟೋಗಳನ್ನು ಅಪ್‌ಲೋಡ್ ಮಾಡಲು ಮತ್ತು ಅವರ ಮೈಮೇಲಿನ ಬಟ್ಟೆಗಳನ್ನು ಕಡಿಮೆ ಮಾಡಲು ಮತ್ತು ಅವರನ್ನು ಲೈಂಗಿಕವಾಗಿ ಬಿಂಬಿಸಲು AI ಬಾಟ್‌ಗೆ ಸೂಚನೆಗಳನ್ನು ನೀಡಲು ನಕಲಿ ಖಾತೆಗಳನ್ನು ಬಳಸಲಾಗುತ್ತಿದೆ. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net