5G ಬಳಕೆಯಲ್ಲಿ ವಿಶ್ವದ 'ನಂಬರ್ 2' ಸ್ಥಾನಕ್ಕೇರಿದ ಭಾರತ!..40 ಕೋಟಿ ಜನರನ್ನು ತಲುಪಿದೆ ಹೈ-ಸ್ಪೀಡ್ ಇಂಟರ್ನೆಟ್ | 5G Network

5G Network | 5G ಬಳಕೆಯಲ್ಲಿ ವಿಶ್ವದ 'ನಂಬರ್ 2' ಸ್ಥಾನಕ್ಕೇರಿದ ಭಾರತ
5G Network | 5G ಬಳಕೆಯಲ್ಲಿ ವಿಶ್ವದ 'ನಂಬರ್ 2' ಸ್ಥಾನಕ್ಕೇರಿದ ಭಾರತ
Published on
ದೆಹಲಿ: 5G ನೆಟ್​ವರ್ಕ್​ ಆರಂಭವಾದ 3 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ, ಭಾರತ 400 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ 5G ಮಾರುಕಟ್ಟೆ ಎಂದು ಘೋಷಿಸಲ್ಪಟ್ಟಿದೆ.
ಈ ವಿಷಯವನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂದಿನ ಪೀಳಿಗೆಯ ಸಂಪರ್ಕಕ್ಕಾಗಿ ಭಾರತ ಎಷ್ಟು ವೇಗವಾಗಿ ಮುಂದೆ ಬಂದಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.
ಚೀನಾದಲ್ಲಿ 5G ಬಳಕೆದಾರರು ಹೆಚ್ಚು
ಚೀನಾ ಮಾತ್ರ ಹೆಚ್ಚು 5G, ಅಂದರೆ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರಿದ್ದಾರೆ. ಭಾರತ ಈಗಾಗಲೇ ಅಮೆರಿಕ (ಸುಮಾರು 350 ಮಿಲಿಯನ್), ಯುರೋಪಿಯನ್ ಒಕ್ಕೂಟ (250 ಮಿಲಿಯನ್) ಮತ್ತು ಜಪಾನ್ (190 ಮಿಲಿಯನ್) ಗಿಂತ ಮುಂದಿದೆ.
ಇದರಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, 2025 ರ ಅಂತ್ಯದ ವೇಳೆಗೆ ಭಾರತವು 394 ಮಿಲಿಯನ್ 5G ಚಂದಾದಾರರನ್ನು ತಲುಪುವ ನಿರೀಕ್ಷೆಯಿತ್ತು, ಆದರೆ ಅದು ಈಗಾಗಲೇ ಆ ಮಟ್ಟವನ್ನು ದಾಟಿದೆ. ವಾಸ್ತವವಾಗಿ, ಭಾರತದ 5G ಬೆಳವಣಿಗೆಯು ಅತ್ಯಂತ ವೇಗವಾಗಿದೆ.

5G ಸೇವೆಗಳನ್ನು ಉದ್ಘಾಟಿಸಿದ್ದ ಪ್ರಧಾನಿ ಮೋದಿ

ಈ ಯಶಸ್ಸಿನ ಕಥೆ ನಿಜವಾಗಿಯೂ ಆರಂಭವಾಗಿದ್ದು 2022 ರ ಅಕ್ಟೋಬರ್ ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಯದಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದರು. ಅಲ್ಲಿಂದ ವೇಗದ ಇಂಟರ್ನೆಟ್ ಹೊಸ ಅಲೆಯನ್ನು ಸೃಷ್ಟಿಸಿದೆ. ಇದು ಸರ್ಕಾರದ ಡಿಜಿಟಲ್ ಇಂಡಿಯಾ ದೃಷ್ಟಿಯನ್ನು ಬಲಪಡಿಸುವತ್ತ ಮುಖ್ಯವಾಗಿ ಗಮನಹರಿಸಿತ್ತು.
  1. ರಿಲಯನ್ಸ್ ಜಿಯೋ ತನ್ನ ಜಿಯೋ ಟ್ರೂ 5G ನೆಟ್‌ವರ್ಕ್‌ನೊಂದಿಗೆ ಮೊದಲು ಹೆಜ್ಜೆ ಹಾಕಿತು.
  2. ಆ ಕೂಡಲೇ ಏರ್‌ಟೆಲ್ 5G ಪ್ಲಸ್ ಅನ್ನು ಬಿಡುಗಡೆ ಮಾಡಿ, ಚುಕ್ಕಾಣಿ ಹಿಡಿದಿತು.
  3. ವೊಡಾಫೋನ್ ಐಡಿಯಾ (Vi) ಸ್ವಲ್ಪ ಸಮಯ ತೆಗೆದುಕೊಂಡಿತು, 2024 ರಲ್ಲಿ ಸೀಮಿತ 5G ಸೇವೆಯನ್ನು ಪ್ರಾರಂಭಿಸಿತು ಮತ್ತು ಹೆಚ್ಚಿನ ಹಣವನ್ನು ಪಡೆದ ನಂತರ 2025 ರಲ್ಲಿ ವೇಗಗೊಳಿಸಲು ಯೋಜಿಸಿದೆ.
ಈ ಎಲ್ಲಾ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರು ಬೃಹತ್ ಬೆಳವಣಿಗೆಯನ್ನು ನಿಭಾಯಿಸಲು ಹೊಸ ಟವರ್‌ಗಳು, ಫೈಬರ್ ನೆಟ್‌ವರ್ಕ್‌ಗಳು ಮತ್ತು ಸ್ಟ್ಯಾಂಡ್‌ಅಲೋನ್ ಮತ್ತು ನಾನ್-ಸ್ಟ್ಯಾಂಡ್‌ಅಲೋನ್ 5G ತಂತ್ರಜ್ಞಾನ ಎರಡರಲ್ಲೂ ದೊಡ್ಡ ಹಣವನ್ನು ಹೂಡಿಕೆ ಮಾಡಿದ್ದಾರೆ.

ಅಗ್ಗದ ಮೊಬೈಲ್ ಡೇಟಾವನ್ನು ಒದಗಿಸುತ್ತಿರುವ ಭಾರತ

ಇತ್ತೀಚಿನ ಬೆಲೆ ಏರಿಕೆಗಳ ಹೊರತಾಗಿಯೂ, ಭಾರತವು ಇನ್ನೂ ವಿಶ್ವದ ಅತ್ಯಂತ ಕಡಿಮೆ ಡೇಟಾ ದರಗಳಲ್ಲಿ ಕೆಲವನ್ನು ನೀಡುತ್ತಿದೆ. 5G ಸೇರಿದಂತೆ. ಅನೇಕ ದೂರಸಂಪರ್ಕ ಪೂರೈಕೆದಾರರು ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಉಚಿತವಾಗಿ 5G ಪ್ರವೇಶವನ್ನು ನೀಡುತ್ತಿದ್ದಾರೆ, ಇದರಿಂದಾಗಿ ಬಳಕೆದಾರರು ಅಪ್‌ಗ್ರೇಡ್ ಮಾಡುವುದು ಸಹ ಸುಲಭವಾಗಿದೆ.

ಎರಿಕ್ಸನ್‌ನ ಮೊಬಿಲಿಟಿ ವರದಿ

ಮೊಬೈಲ್​ ಬಳಸುವವರ ಸಂಖ್ಯೆಗಳು ಬೆಳೆಯುತ್ತಲೇ ಹೊಗುತ್ತಿದ್ದು, ಎರಿಕ್ಸನ್‌ನ ಮೊಬಿಲಿಟಿ ವರದಿ ಪ್ರಕಾರ ಭಾರತವು 2031 ರ ವೇಳೆಗೆ 1 ಬಿಲಿಯನ್ 5G ಬಳಕೆದಾರರನ್ನು ತಲುಪುವ ಹಾದಿಯಲ್ಲಿದೆ ಎಂದು ತಿಳಿದುಬಂದಿದೆ.
ಇದು ಸುಮಾರು 80 ಪ್ರತಿಶತದಷ್ಟು ಜನಸಂಖ್ಯೆಯನ್ನು ಒಳಗೊಂಡಿದ್ದು, ಭಾರತೀಯರು ಈಗಾಗಲೇ ಬೇರೆಯವರಿಗಿಂತ ಹೆಚ್ಚಿನ ಮೊಬೈಲ್ ಡೇಟಾವನ್ನು ಬಳಸುತ್ತಾರೆ. ಪ್ರತಿ ತಿಂಗಳು ಸರಾಸರಿ 36GB ಸ್ಮಾರ್ಟ್‌ಫೋನ್‌ ಬಳಕೆಗೆ ಮೀಸಲಿಟ್ಟಿದ್ದು, ಇದು 2031 ರ ವೇಳೆಗೆ 65GB ಗೆ ಹೆಚ್ಚಾಗುವ ನಿರೀಕ್ಷೆಯಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net