ಇಮ್ರಾನ್​ ಖಾನ್​ ಆರೋಗ್ಯವಾಗಿದ್ದಾರೆ: ತಜ್ಞ ವೈದ್ಯರಿಂದ ತಪಾಸಣೆ; ಅಡಿಯಾಲಾ ಜೈಲಿಗೆ ಮರಳಿದ ಮಾಜಿ ಪ್ರಧಾನಿ! Imran Khan

ಪರೀಕ್ಷೆ ಬಳಿಕ ಅಡಿಯಾಲಾ ಜೈಲಿಗೆ ಮರಳಿದ ಇಮ್ರಾನ್​ ಖಾನ್​
ಪರೀಕ್ಷೆ ಬಳಿಕ ಅಡಿಯಾಲಾ ಜೈಲಿಗೆ ಮರಳಿದ ಇಮ್ರಾನ್​ ಖಾನ್​
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ
  • ಇಸ್ಲಾಮಾಬಾದ್​ನಲ್ಲಿ ತಜ್ಞ ವೈದ್ಯರಿಂದ ತಪಾಸಣೆ
  • ಪರೀಕ್ಷೆ ಬಳಿಕ ಅಡಿಯಾಲಾ ಜೈಲಿಗೆ ಮರಳಿದ ಇಮ್ರಾನ್​
ಇಸ್ಲಾಮಾಬಾದ್​: ಪಾಕಿಸ್ತಾನದ ಸುಪ್ರೀಂ ಕೋರ್ಟ್​ ಆದೇಶದಂತೆ ದೇಶದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ (Imran Khan) ಅವರನ್ನು ಇಸ್ಲಾಮಾಬಾದ್​ನ ಶಿಫಾ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಈಗ ಮತ್ತೆ ಅಡಿಯಾಲಾ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ಹಾಗೂ ಖ್ಯಾತ ಕ್ರಿಕೆಟ್​ ಆಟಗಾರನಾಗಿದ್ದ ಇಮ್ರಾನ್​ ಖಾನ್ ಅವರನ್ನು ಪರೀಕ್ಷಿಸಿದ ವೈದ್ಯರ ತಂಡ, ಆರೋಗ್ಯದಲ್ಲಿ ವ್ಯತ್ಯಾಸವೇನಿಲ್ಲ, ಜೈಲಿನಲ್ಲಿರಬಹುದೆಂದು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.

ತಜ್ಞ ವೈದ್ಯರಿಂದ ಪರೀಕ್ಷೆ!

ಸುಪ್ರೀಂ ಕೋರ್ಟ್​ ತನ್ನ ಆದೇಶದ 48 ಗಂಟೆಯೊಳಗೆ ಇಮ್ರಾನ್​ಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ಸರ್ಕಾರಕ್ಕೆ ಆದೇಶಿಸಿದ ಹಿನ್ನಲೆ, ಶಿಫಾ ಆಸ್ಪತ್ರೆಗೆ ಇಮ್ರಾನ್​ ರನ್ನು ದಾಖಲಿಸಲಾಗಿತ್ತು.

ಇಸ್ಲಾಮಾಬಾದ್​​ನ ಖ್ಯಾತ ಆರು ಜನ ವೈದ್ಯರ ತಂಡವು, ರಕ್ತದೊತ್ತಡ, ಹಿಮೋಗ್ಲೋಬಿನ್​​, ಹೆಪಟೈಟಿಸ್​ ಸೇರಿದಂತೆ ಎಲ್ಲಾ ಬಗೆಯ ಪರೀಕ್ಷೆಯನ್ನು ನಡೆಸಿದ್ದು, ಇಮ್ರಾನ್​ ನಾರ್ಮಲ್​ ಆಗಿದ್ದಾರೆಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ತಮ್ಮ ಬಲಗಣ್ಣಿನಲ್ಲಿ ದೃಷ್ಟಿದೋಷ ಉಂಟಾದ ಹಿನ್ನಲೆ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ಇಮ್ರಾನ್​ ಪರ ವಕೀಲರು ಕೂಡ, ಜೈಲಿನಲ್ಲಿ ಇಮ್ರಾನ್​ಗೆ ಬಹಳ ಕಷ್ಟವನ್ನು ಕೊಡಲಾಗುತ್ತಿದ್ದು, ಅಲ್ಲಿ ಅವರ ದೃಷ್ಟಿ ಸಂಪೂರ್ಣವಾಗಿ ಕ್ಷೀಣಿಸಿದೆ ಎಂದು ನ್ಯಾಯಾಲಯಕ್ಕೆ ಮನವಿಮಾಡಿದ್ದರು.


ಆದರೆ, ಈಗ ಇಮ್ರಾನ್​ ಖಾನ್​ ಅವರ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳೇನು ಇಲ್ಲ ಎಂದು ವೈದ್ಯಕೀಯ ವರದಿ ಬಂದಿರುವ ಹಿನ್ನಲೆ ಇಮ್ರಾನ್​ ಮತ್ತೆ ಅಡಿಯಾಲಾ ಜೈಲನ್ನು ಸೇರಿದ್ದಾರೆ.

ಜೈಲಿನಲ್ಲಿ ಸಾವಿರ ದಿನ ಕಳೆದ ಇಮ್ರಾನ್​!

2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದ ಇಮ್ರಾನ್ ಖಾನ್, ನಾಲ್ಕು ವರ್ಷಗಳ ಬಳಿಕ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಮತದಲ್ಲಿ ಅಧಿಕಾರ ಕಳೆದುಕೊಂಡರು. ಅಂದಿನಿಂದ ಪಾಕ್ ಮಿಲಿಟರಿ ಸ್ಥಾಪನೆ ಹಾಗೂ ಅವರ ಪಿಟಿಐ ಪಕ್ಷದ ನಡುವೆ ನಿರಂತರ ರಾಜಕೀಯ ಸಂಘರ್ಷ ನಡೆಯುತ್ತಲೇ ಇದೆ.
ಮೇ 2023ರಲ್ಲಿ ಮೊದಲಿಗೆ ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್ ಮೇಲೆ ತೋಷಖಾನಾ (ಉಡುಗೊರೆಗಳ ಅಕ್ರಮ ಮಾರಾಟ) ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು ಪಿಟಿಐ ಪಕ್ಷ ಮತ್ತು ಇಮ್ರಾನ್ ಖಾನ್ ಬೆಂಬಲಿಗರು ಆರೋಪಿಸುತ್ತಾ ಬಂದಿದ್ದಾರೆ.

ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಇಮ್ರಾನ್ ಖಾನ್ ಅವರ ಆರೋಗ್ಯ ಚೇತರಿಕೆ ಮತ್ತು ಮುಂದಿನ ರಾಜಕೀಯ ನಡೆ ಹೇಗಿರಲಿದೆ ಎಂಬುದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ, (ಏಜನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net