ಈ ಕ್ರಮವು ಜಗತ್ತಿನಾದ್ಯಂತ ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕದ ಕ್ರಮಗಳನ್ನು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕಿಡಿಕಾರಿದೆ. ಅಲ್ಲದೆ, ಮಡುರೊ ಅಪಹರಣ ಮತ್ತು ವಾಷಿಂಗ್ಟನ್ ಪ್ರದರ್ಶಿಸುತ್ತಿರುವ 19 ನೇ ಶತಮಾನದ ಸಾಮ್ರಾಜ್ಯಶಾಹಿ ಧೋರಣೆಯು ವಿನಾಶಕಾರಿ ಮತ್ತು ದೀರ್ಘಕಾಲದ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ರಷ್ಯಾ ಎಚ್ಚರಿಸಿದೆ,(ಏಜೆನ್ಸೀಸ್).