ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿ ಈಗ ಬಂಗಾರ(Gold Rate in Pakistan) ಅಕ್ಷರಶಃ ಬೆಂಕಿಯಾಗಿದೆ. ಇತ್ತೀಚಿನ ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಪಾಕಿಸ್ತಾನಿ ರೂಪಾಯಿಯ ತೀವ್ರ ಕುಸಿತದಿಂದಾಗಿ ಅಲ್ಲಿನ ಚಿನ್ನದ ದರ ಇತಿಹಾಸದಲ್ಲೇ ಕಾಣದಂತಹ ಭೀಕರ ಮಟ್ಟಕ್ಕೆ ತಲುಪಿದೆ. ಇಂದಿನ (ಫೆ.4) ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲಕ್ಕೆ (11.66 ಗ್ರಾಂ) ದಾಖಲೆಯ ₨ 5,29,162 ಕ್ಕೆ ಏರಿಕೆಯಾಗಿದೆ.