ನ್ಯೂಯಾರ್ಕ್: ಇರಾನ್‌ನಲ್ಲಿ ನಾಗರಿಕ ಪ್ರತಿಭಟನೆಗಳು ಸತತ 13ನೇ ದಿನಕ್ಕೆ ಕಾಲಿಟ್ಟಿದ್ದು, ಈ ಪರಿಸ್ಥಿತಿಯು ಒಂದು ದೊಡ್ಡ ಅಂತರಾಷ್ಟ್ರೀಯ ಬಿಕ್ಕಟ್ಟಾಗಿ ಉಲ್ಬಣಗೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಸಾಮೂಹಿಕ ಹಿಂಸಾಚಾರವನ್ನು ಆಶ್ರಯಿಸಿದರೆ, ನಾವು ಮಿಲಿಟರಿ ದಾಳಿ ಮಾಡುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.