100 ದಿನಗಳ ನಂತರವೂ ಪರಿಸ್ಥಿತಿ ಮಾತ್ರ ಸುಧಾರಣೆ ಕಂಡಿಲ್ಲ. ಈಗಲೂ, ಅದೇ ಉದ್ವಿಗ್ನತೆ ಮುಂದುವರೆದಿದೆ. ಇರಾನ್ನ ಸುಪ್ರೀಂ ಲೀಡರ್ ಅನ್ನು ಕೊಂದ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಗಿಬಿದ್ದ ಇರಾನ್, ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುವುದರ ಜೊತೆಗೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿತು. ಇಲ್ಲಿಂದಲೇ ಇಡೀ ಜಗತ್ತಿಗೆ ಶುರುವಾಗಿದ್ದು ತೈಲ, ಅನಿಲ, ಇಂಧನ ಬಿಕ್ಕಟ್ಟಿನಂತ ಅನೇಕ ಸಮಸ್ಯೆಗಳು.