"ನನಗೆ ಯಾರೂ ಇಲ್ಲ, ನೀವೇ ಬನ್ನಿ": ಅನಾಥ ವರನ ಕರೆಗೆ ಸ್ಪಂದಿಸಿದ ಜನ; ಮದುವೆ ಮಂಟಪಕ್ಕೆ ಹರಿದುಬಂದ ನೆಟ್ಟಿಗರ ಮಹಾಪೂರ! China Orphan Wedding

Bride and groom smiling at their wedding stage surrounded by strangers who attended via social media invite.
ಸಾಮಾಜಿಕ ಜಾಲತಾಣದ ಆಹ್ವಾನದ ಮೂಲಕ ಬಂದ ಅಪರಿಚಿತರಿಂದ ಸುತ್ತುವರಿಯಲ್ಪಟ್ಟ ವಧು-ವರರು
Published on: 

ಚೀನಾ: ಮದುವೆ ಎಂದರೆ ಬಂಧು-ಬಳಗ, ಕುಟುಂಬ ವರ್ಗ, ಸಂಬಂಧಿಗಳ ಸಮಾಗಮವಾಗಿರುತ್ತದೆ. ಆದರೆ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಮುಂದಾದ ಯುವಕನೊಬ್ಬ ಅನಾಥನಾಗಿದ್ದರೆ? ಏನು ಮಾಡಬೇಕು? ಯಾರಿಂದ ಆಶೀರ್ವಾದ ಪಡೆಯಬೇಕು?

ಇಂತದ್ದೆ ಒಂದು ಘಟನೆ ಚೀನಾದ ಬೀಜಿಂಗ್​ನಲ್ಲಿ ನಡೆದಿದೆ. ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತಿದ್ದೆನೆ. ಆದರೆ ನನಗೆ ಸ್ವಂತದವರು ಎನ್ನವವರು ಯಾರು ಇಲ್ಲ, ನೀವೆ ನನ್ನ ಪರಿವಾರ, ನಿಮ್ಮ ಆರ್ಶೀವಾದವೇ ನನಗೆ ಉಡುಗೊರೆ ಎಂದು ಸೋಷಿಯಲ್​ ಮೀಡಿಯಾನಲ್ಲಿ ಬರೆದುಕೊಂಡಿದ್ದಾನೆ.

ಈ ಸಂದೇಶ ಈಡೀ ಚೀನಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಮುಂದೆ ನಡೆದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಡಿಂಗ್​ ಸಂಗತಿಯಾಗಿ ಹೊರಹೊಮ್ಮಿದೆ.

ಕಣ್ಣೀರಿನ ಬಾಲ್ಯ, ಕಷ್ಟಪಟ್ಟು ಉಳಿಸಿದ ಹಣ

ಆ ಯುವಕನ ಬದುಕು ಚಿಕ್ಕಂದಿನಿಂದಲೇ ಸಂಕಷ್ಟಗಳ ಗೂಡಾಗಿತ್ತು. ಪ್ರೈಮರಿ ಶಾಲೆಯಲ್ಲಿದ್ದಾಗಲೇ ತಂದೆ ತೀರಿಕೊಂಡರು. ತಾಯಿ ಎರಡನೇ ಮದುವೆಯಾಗಿ ಹೋದ ಮೇಲೆ, ಆತ ಮತ್ತು ಆತನ ಅಣ್ಣ ಪರಸ್ಪರ ಆಸರೆಯಾಗಿ ಬೆಳೆದರು. ಜೀವನದ ಕಷ್ಟಗಳ ಮಧ್ಯೆಯೂ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ ಯುವಕ, ತಾನು ಪ್ರೀತಿಸಿದ ಹುಡುಗಿಯ ಜೊತೆ ಹಸೆಮಣೆ ಏರಲು ಪ್ರತಿಯೊಂದು ರೂಪಾಯಿಯನ್ನೂ ಕೂಡಿಟ್ಟಿದ್ದ. ಹಣವೇನೋ ಹೊಂದಿಕೆಯಾಯಿತು, ಆದರೆ ಮದುವೆಯ ದಿನ ಸಮೀಪಿಸುತ್ತಿದ್ದಂತೆ ಮದುವೆ ಮಂಟಪದಲ್ಲಿ ಆತನ ಪರವಾಗಿ ನಿಲ್ಲಲು ಒಬ್ಬನೇ ಒಬ್ಬ ಸಂಬಂಧಿಕನೂ ಇರಲಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನೋವು

ಅತಿಥಿಗಳಿಲ್ಲದ ಮದುವೆ ಮಂಟಪವನ್ನು ನೆನೆದು ಕುಗ್ಗಿಹೋಗುವ ಬದಲು, ಯುವಕ ಧೈರ್ಯಮಾಡಿ ಸೋಷಿಯಲ್ ಮೀಡಿಯಾದ ಮೊರೆಹೋದ. ತನ್ನ ಪರಿಸ್ಥಿತಿಯನ್ನು ವಿವರಿಸಿ ಒಂದು ಪುಟ್ಟ ವಿಡಿಯೋ ಮಾಡಿ ಪೋಸ್ಟ್ ಮಾಡಿದ: "ನನ್ನ ಪ್ರೇಯಸಿಯನ್ನು ಮದುವೆಯಾಗಲು ಕಷ್ಟಪಟ್ಟು ಹಣ ಕೂಡಿಟ್ಟಿದ್ದೇನೆ. ಆದರೆ ನನ್ನ ಕಡೆಯಿಂದ ಮದುವೆಗೆ ಬರಲು ಯಾರೂ ಇಲ್ಲ. ದಯವಿಟ್ಟು ಯಾರಾದರೂ ಬಂದು ನಮ್ಮನ್ನು ಆಶೀರ್ವದಿಸುತ್ತೀರಾ?" ಎಂದು ನೆಟ್ಟಿಗರಿಗೆ ಬಹಿರಂಗ ಆಹ್ವಾನ ನೀಡಿದ.

ಮಂಟಪದಲ್ಲಿ ಜಾತ್ರೆಯ ಸಂಭ್ರಮ!

ಯುವಕನ ಈ ಮನವಿಗೆ ನೆಟ್ಟಿಗರು, "ಬ್ರದರ್, ನೀವೇನೂ ಚಿಂತೆ ಮಾಡಬೇಡಿ, ನಾವೆಲ್ಲರೂ ಬರ್ತಿದ್ದೀವಿ!" ಎಂದು ಕಾಮೆಂಟ್ ಮಾಡಿ ಕೇವಲ ಬಾಯಿಮಾತಿಗೆ ಸೀಮಿತವಾಗಲಿಲ್ಲ. ಮದುವೆಯ ದಿನ ಮಂಟಪಕ್ಕೆ ಜನರ ಮಹಾಪೂರವೇ ಹರಿದುಬಂದಿತು.

ಕೇವಲ ಕೈಬೀಸಿಕೊಂಡು ಬಾರದ ನೆಟ್ಟಿಗರು, ತಾವೇ ಸ್ವಂತ ಅಣ್ಣ-ತಮ್ಮಂದಿರಂತೆ ನಿಂತು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಮದುವೆಗೆ ಬೇಕಾದ ಸಾಮಗ್ರಿಗಳು, ಆಕರ್ಷಕ ಉಡುಗೊರೆಗಳನ್ನು ಹೊತ್ತು ತಂದರು. ಊರಿನ ಖ್ಯಾತ ಬಾಣಸಿಗರು ತಾವಾಗಿಯೇ ಮುಂದೆ ಬಂದು ಅತಿಥಿಗಳಿಗೆ ಭರ್ಜರಿ ಅಡುಗೆ ತಯಾರಿಸಿದರು.

ಇಷ್ಟೇ ಅಲ್ಲ, ವಧು-ವರರನ್ನು ಮೆರವಣಿಗೆ ಮಾಡಲು ಐಷಾರಾಮಿ ಕಾರುಗಳ ಸಾಲೇ ಮಂಟಪದ ಮುಂದೆ ನಿಂತಿತು. ಒಬ್ಬ ವ್ಯಕ್ತಿಯಂತೂ ಕೋಟ್ಯಂತರ ರೂಪಾಯಿ ಬೆಲೆಯ 'ಮೇಬ್ಯಾಕ್' ಐಷಾರಾಮಿ ಕಾರನ್ನೇ ಮದುವೆಗೆ ತಂದುಕೊಟ್ಟರು. ಇಡೀ ಮನೆಯನ್ನು ತಾವೇ ನಿಂತು ಸುಂದರವಾಗಿ ಸಿಂಗರಿಸಿ, ಮೇಣದಬತ್ತಿ ಹಚ್ಚಿ ದೀಪಾಲಂಕಾರ ಮಾಡಿದರು. ಯಾರೂ ಇಲ್ಲದ ಮದುವೆ, ಕೆಲವೇ ಗಂಟೆಗಳಲ್ಲಿ ಸಾವಿರಾರು ಅಪರಿಚಿತರ ಪ್ರೀತಿಯ ಹಬ್ಬವಾಗಿ ಬದಲಾಯಿತು.

Also Read
ಸ್ಟಿಂಗ್ ಆಪರೇಷನ್ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳ ಪತ್ತೆ: "ಇದು ಟ್ರೈಲರ್ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ"; ಹೆಚ್​ಡಿಕೆ ವಿರುದ್ಧ ಕಿಡಿಕಾರಿದ ಪ್ರಿಯಾಂಕ್​ ಖರ್ಗೆ! Priyank Kharge
Bride and groom smiling at their wedding stage surrounded by strangers who attended via social media invite.

ಕಣ್ಣೀರಿಟ್ಟ ನೆಟ್ಟಿಗರು

ಈ ಅದ್ಭುತ ಪ್ರಸಂಗವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ ಕೋಟ್ಯಾಂತರ ವೀಕ್ಷಣೆ ಪಡದುಕೊಂಡಿದೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, "ಈ ದೃಶ್ಯ ನೋಡುತ್ತಿದ್ದರೆ ಕಣ್ಣಿನಲ್ಲಿ ನೀರು ತಡೆಯಲು ಸಾಧ್ಯವಾಗುತ್ತಿಲ್ಲ, ನಿಜಕ್ಕೂ ಇದೊಂದು ಅದ್ಭುತ ಎಂದು ಬರೆದುಕೊಂಡಿದ್ದಾರೆ. "ತನ್ನ ಮದುವೆಯಲ್ಲಿ ಇಷ್ಟೊಂದು ಅಪರಿಚಿತರು ಬಂದು ನಿಂತಿದ್ದನ್ನು ಕಂಡು ಆ ವರನಿಗೆ ಎಷ್ಟು ಖುಷಿಯಾಗಿರಬೇಡ!" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್​).