Hwasong 20 : ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೆರಿಕ, ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ಬೆನ್ನಲ್ಲೇ ಜಾಗತಿಕವಾಗಿ ಅನೇಕ ರಾಷ್ಟ್ರಗಳು ಅಮೆರಿಕವನ್ನು ಟೀಕಿಸುತ್ತಿವೆ. ಆದರೆ, ಉತ್ತರ ಕೊರಿಯಾ ಮಾತ್ರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ತನ್ನ ಬಲಿಷ್ಠ ಕ್ಷಿಪಣಿಗಳನ್ನು ಪರೀಕ್ಷೆ ಮಾಡುವ ಮೂಲಕ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ. ಸದ್ಯ ಜಗತ್ತಿನಲ್ಲಿ ಯುದ್ಧ ಕಾರ್ಮೋಡ ಕವಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಣ್ಣ ಸಣ್ಣ ರಾಷ್ಟ್ರಗಳ ಮೇಲೆ ತನ್ನ ಕೆಂಗಣ್ಣು ಬೀರಿರುವುದು ಇನ್ನುಳಿದ ವಿಶ್ವ ನಾಯಕರ ಕಣ್ಣನ್ನು ಕೆಂಪಾಗಿಸಿದೆ.