ಎಚ್​​1ಬಿ ವಿಸಾಗೆ ಭರ್ಜರಿ ಬೇಡಿಕೆ: ತೆರೆದ ಅವಕಾಶದ ಬಾಗಿಲು!

ಡೊನಾಲ್ಡ್​ ಟ್ರಂಪ್​
ಡೊನಾಲ್ಡ್​ ಟ್ರಂಪ್​
Published on

ನ್ಯೂಯಾರ್ಕ್​: ಅಮೆರಿಕದ ತಂತ್ರಜ್ಞಾನ ಕಂಪನಿಗಳು ವಿದೇಶಿ ನೌಕರರನ್ನು ನೇಮಿಸಿಕೊಳ್ಳಲು ಎಚ್1ಬಿ ಸೌಲಭ್ಯವನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತವೆ. ಈ ಎಚ್1ಬಿ ವೀಸಾದ ಅತಿ ದೊಡ್ಡ ಫಲಾನುಭವಿಗಳು ಭಾರತೀಯರೇ ಆಗಿದ್ದಾರೆ. ಆದರೆ, ಎಚ್1ಬಿ ವೀಸಾಗಾಗಿ 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2025ರ ಸೆಪ್ಟೆಂಬರ್​ನಲ್ಲಿ ಹೊರಡಿಸಿದ್ದ ಆದೇಶ ಭಾರಿ ಕಳವಳ ಸೃಷ್ಟಿಸಿತ್ತು. ಈಗ ಈ ಆದೇಶವನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದೆ.

‘ಇದೊಂದು ಅಕ್ರಮ ತೆರಿಗೆ. ಇಂತಹ ತೆರಿಗೆ ವಿಧಿಸುವ ಅಧಿಕಾರ ಕೇವಲ ಅಮೆರಿಕದ ಸಂಸತ್ತಿಗೆ ಮಾತ್ರ ಇದೆ, ಅಧ್ಯಕ್ಷರಿಗಲ್ಲ’ ಎಂದು ತೀರ್ಪು ನೀಡಿದೆ. ಈ ತೀರ್ಪು ಭಾರತೀಯ ಸಮುದಾಯಕ್ಕೆ ಸಮಾಧಾನ ತಂದಿದೆ. ನಾವೀನ್ಯ ಹಾಗೂ ಉದ್ಯಮಶೀಲತೆಯಲ್ಲಿ ಅಮೆರಿಕದ ಸ್ಪರ್ಧಾಕತೆಯನ್ನು ಕಾಪಾಡಿಕೊಳ್ಳಲು ಇದರಿಂದ ನೆರವಾಗಲಿದೆ. ಎಚ್1ಬಿ ವೀಸಾ ಎನ್ನುವುದು ಅಮೆರಿಕದಲ್ಲಿ ಕೆಲಸ ಮಾಡಲು ಜಗತ್ತಿನಾದ್ಯಂತ ಇರುವ ತಂತ್ರಜ್ಞರು ಮತ್ತು ವೃತ್ತಿಪರರು ಸದಾ ಎದುರುನೋಡುವ ಅತ್ಯಂತ ಜನಪ್ರಿಯ ವೀಸಾವಾಗಿದೆ. ಗೂಗಲ್, ಮೈಕ್ರೋಸಾಫ್ಟ್, ಆಪಲ್, ಅಮೆಜಾನ್​ನಂತಹ ವಿಶ್ವದ ದೈತ್ಯ ತಂತ್ರಜ್ಞಾನ ಕಂಪನಿಗಳಲ್ಲಿ ನೇರವಾಗಿ ಅಮೆರಿಕಕ್ಕೆ ಹೋಗಿ ಕೆಲಸ ಮಾಡುವ ಸುವರ್ಣ ಅವಕಾಶ ಇದರ ಮೂಲಕ ಸಿಗುತ್ತದೆ. 

ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಸಿಗುವ ಪ್ಯಾಕೇಜ್ (ಸಂಬಳ) ಮತ್ತು ಡಾಲರ್ ಮೌಲ್ಯ ಹೆಚ್ಚಾಗಿರುತ್ತದೆ. ಇದು ವೃತ್ತಿಪರರ ಆರ್ಥಿಕ ಸ್ಥಿತಿಯನ್ನೇ ಬದಲಾಯಿಸುತ್ತದೆ. ಅಲ್ಲದೆ, ಜಗತ್ತಿನ ಅತ್ಯಾಧುನಿಕ ಸಂಶೋಧನೆಗಳು ಮತ್ತು ತಂತ್ರಜ್ಞಾನದ ಪ್ರಾಜೆಕ್ಟ್​ಗಳ ಭಾಗವಾಗಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಎಚ್1ಬಿ ವೀಸಾದ ಅತಿ ದೊಡ್ಡ ಫಲಾನುಭವಿಗಳು ಭಾರತೀಯರೇ ಆಗಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಎಚ್1ಬಿ ವೀಸಾ ಹೊಂದಿರುವ ಒಟ್ಟು ವಿದೇಶಿಗರ ಸಂಖ್ಯೆ ಅಂದಾಜು 7.3 ಲಕ್ಷ. ಆ ಪೈಕಿ ಶೇಕಡ 70ರಷ್ಟು ಮಂದಿ ಅಂದರೆ 5.11 ಲಕ್ಷದಷ್ಟು ಜನ ಭಾರತೀಯರು. ಜತೆಗೆ ಎಚ್1ಬಿ ಹೊಂದಿರುವ ಉದ್ಯೋಗಿಗಳ ಸಂಗಾತಿಗಳು ಹಾಗೂ ಅವರ 21 ವರ್ಷದ ಒಳಗಿನ ಅವಿವಾಹಿತ ಮಕ್ಕಳಿಗೆ ನೀಡಲಾದ ಎಚ್-4 ವೀಸಾಗಳು 5 ಲಕ್ಷದಷ್ಟಿವೆ. 

ಅಮೆರಿಕದ ತಂತ್ರಜ್ಞಾನ ವಲಯವು ಭಾರತೀಯ ಪ್ರತಿಭೆಗಳ ಮೇಲೆ ಅಪಾರವಾಗಿ ಅವಲಂಬಿತವಾಗಿದೆ ಮತ್ತು ಭಾರತೀಯ ಐಟಿ ವೃತ್ತಿಪರರಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಎಚ್11ಬಿ ವೀಸಾ ಅವಕಾಶದ ಹೆಬ್ಬಾಗಿಲಾಗಿದೆ. ಅಮೆರಿಕವು ಭಾರತಕ್ಕೆ ಒಂದು ವರ್ಷದಲ್ಲಿ ಸರಾಸರಿ 85 ಸಾವಿರ ಎಚ್1ಬಿ ವೀಸಾಗಳನ್ನು ನೀಡುತ್ತದೆ. ಡ್ಯುಯಲ್ ಇಂಟೆಂಟ್: ಇದು ಈ ವೀಸಾದ ಬಹುದೊಡ್ಡ ಸಕಾರಾತ್ಮಕ ಅಂಶ. ಇದರರ್ಥ, ನೀವು ತಾತ್ಕಾಲಿಕವಾಗಿ ಕೆಲಸ ಮಾಡಲು ಅಮೆರಿಕಕ್ಕೆ ಹೋದರೂ, ಅಲ್ಲಿರುವಾಗಲೇ ಅಮೆರಿಕದ ಕಾಯಂ ನಿವಾಸಿ ಹಕ್ಕು ಅಥವಾ ಗ್ರೀನ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಇದು ಕಾನೂನುಬದ್ಧವಾಗಿ ಅವಕಾಶ ನೀಡುತ್ತದೆ.

ವೀಸಾ ಅವಧಿ

ಒಮ್ಮೆ ನೀಡಿದ ಎಚ್1ಬಿ ವೀಸಾ ಅವಧಿ ಸಾಮಾನ್ಯವಾಗಿ ಮೂರು ವರ್ಷಗಳವರೆಗೆ ಇರುತ್ತದೆ. ಈ ಅವಧಿಯನ್ನು ವಿಸ್ತರಿಸಬಹುದಾದರೂ ಅದು ಆರು ವರ್ಷಗಳನ್ನು ಮೀರುವಂತಿಲ್ಲ. ಗ್ರೀನ್ ಕಾರ್ಡ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೆ 6 ವರ್ಷಗಳ ನಂತರವೂ ವಿಸ್ತರಿಸಲು ಅವಕಾಶವಿದೆ. ಅಧಿಕೃತ ವಾಸ್ತವ್ಯದ ಅಂತ್ಯದ ಮೊದಲು ಉದ್ಯೋಗವನ್ನು ಕೊನೆಗೊಳಿಸಿದರೆ, ಉದ್ಯೋಗದಾತರು ಮತ್ತು ಪ್ರಾಯೋಜಕರು ಹಿಂದಿರುಗುವ ಸಾರಿಗೆ ವೆಚ್ಚ ಭರಿಸಬೇಕಾಗುತ್ತದೆ. 

ಒಂದು ವೇಳೆ ಎಚ್1ಬಿ ವೀಸಾದಲ್ಲಿರುವ ವಿದೇಶಿ ಉದ್ಯೋಗಿ ರಾಜೀನಾಮೆ ನೀಡಿದರೆ ಅಥವಾ ಉದ್ಯೋಗ ಕಳೆದುಕೊಂಡರೆ ಅಂಥವರಿಗೆ 60 ದಿನಗಳ ಗ್ರೇಸ್ ಅವಧಿಯಲ್ಲಿ ಎರಡು ಆಯ್ಕೆ ಇರುತ್ತದೆ. ಅವರು ಮತ್ತೊಂದು ವಲಸೆರಹಿತ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಸ್ಥಾನಮಾನವನ್ನು ಬದಲಾಯಿಸಬೇಕು ಅಥವಾ ಬೇರೆ ಉದ್ಯೋಗದಾತರನ್ನು ಹುಡುಕಿಕೊಳ್ಳಬೇಕು ಇಲ್ಲವೇ ಆ ದೇಶವನ್ನು ತೊರೆಯಬೇಕು.

ಲಾಟರಿ ಪದ್ಧತಿ

ಇತ್ತೀಚಿನವರೆಗೂ ಎಚ್1ಬಿ ವೀಸಾ ಪಡೆಯಲು ಕಾನೂನು, ಫೈಲಿಂಗ್ ಮತ್ತು ಸಂಸ್ಕರಣಾ ಶುಲ್ಕಗಳನ್ನು ಅವಲಂಬಿಸಿ 900ರಿಂದ 5 ಸಾವಿರ ಡಾಲರ್ ಅಂದರೆ 78 ಸಾವಿರದಿಂದ 4.3 ಲಕ್ಷ ರೂ.ವರೆಗೆ ಖರ್ಚಾಗುತ್ತಿತ್ತು. ಇವುಗಳಲ್ಲಿ ಹೆಚ್ಚಿನವು ಉದ್ಯೋಗದಾತರಿಂದ ಭರಿಸಲ್ಪಡುತ್ತಿದ್ದವು. ಆದರೆ ಇತ್ತೀಚೆಗೆ ಎಚ್1ಬಿ ವೀಸಾ ನೀಡಿಕೆಗೆ ಬದಲಾವಣೆ ತರಲಾಗಿದ್ದು, ಲಾಟರಿ ಪದ್ಧತಿ ಅಳವಡಿಸಲಾಗಿದೆ.

ಪ್ರಮುಖ ಪರಿಣಾಮಗಳು

ವೃತ್ತಿಜೀವನದ ಆತಂಕಕ್ಕೆ ತೆರೆ: ಅಮೆರಿಕ ನೀಡುವ ಒಟ್ಟು ಎಚ್-1ಬಿ ವೀಸಾಗಳಲ್ಲಿ ಶೇಕಡ 70ಕ್ಕಿಂತ ಹೆಚ್ಚು ಭಾರತೀಯರೇ ಪಡೆಯುತ್ತಾರೆ. 1 ಲಕ್ಷ ಡಾಲರ್​ನಷ್ಟು ದೊಡ್ಡ ಮೊತ್ತದ ಶುಲ್ಕದ ನಿಯಮ ಜಾರಿಯಾಗಿದ್ದರೆ, ಭಾರತೀಯರ ಅಮೆರಿಕ ಕನಸು ಬಹುತೇಕ ಕಮರಿಹೋಗುತ್ತಿತ್ತು. ಈಗ ಆ ಆತಂಕ ದೂರವಾಗಿದೆ.

ವಿದ್ಯಾರ್ಥಿಗಳಿಗೆ ವರ: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಮುಗಿದ ನಂತರ ಅಲ್ಲಿಯೇ ಕೆಲಸ ಮಾಡಲು ಎಚ್1ಬಿ ವೀಸಾವನ್ನು ಅವಲಂಬಿಸಿದ್ದಾರೆ. ಈ ತೀರ್ಪಿನಿಂದಾಗಿ ಅವರು ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಅವಕಾಶಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ಪ್ರತಿಭೆಗಳಿಗೆ ಮನ್ನಣೆ: ಮಧ್ಯಮ ವರ್ಗದ ಹಿನ್ನೆಲೆಯಿಂದ ಬರುವ ಪ್ರತಿಭಾವಂತ ಭಾರತೀಯ ಇಂಜಿನಿಯರ್​ಗಳು, ವೈದ್ಯರು ಮತ್ತು ಸಂಶೋಧಕರು ಹಣದ ಕೊರತೆಯಿಂದಾಗಿ ಅಮೆರಿಕಕ್ಕೆ ಹೋಗುವ ಅವಕಾಶದಿಂದ ವಂಚಿತರಾಗುವುದು ತಪ್ಪಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಕನಿಷ್ಠ ವಿದ್ಯಾರ್ಹತೆ: ಅರ್ಜಿದಾರರು ಕನಿಷ್ಠ ಬ್ಯಾಚುಲರ್ಸ್ ಡಿಗ್ರಿ (ಪದವಿ) ಅಥವಾ ಅದಕ್ಕೆ ಸಮಾನವಾದ ಶಿಕ್ಷಣ ಮುಗಿಸಿರಬೇಕು.

ವಿಶೇಷ ಉದ್ಯೋಗ: ನೀವು ಸೇರಲಿರುವ ಉದ್ಯೋಗಕ್ಕೆ ಉನ್ನತ ತಾಂತ್ರಿಕ ಅಥವಾ ಸೈದ್ಧಾಂತಿಕ ಜ್ಞಾನದ ಅಗತ್ಯವಿರಬೇಕು. ಸಾಮಾನ್ಯವಾಗಿ ಐಟಿ, ಇಂಜಿನಿಯರಿಂಗ್, ವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಹಣಕಾಸು ವಲಯದ ಕೆಲಸಗಳು ಇದಕ್ಕೆ ಸೇರುತ್ತವೆ.

ಅಮೆರಿಕ ಕಂಪನಿಯಿಂದ ಜಾಬ್ ಆಫರ್: ನೀವು ನೇರವಾಗಿ ವೀಸಾಕ್ಕೆ ಅರ್ಜಿ ಹಾಕಲು ಬರುವುದಿಲ್ಲ. ಮೊದಲು ಅಮೆರಿಕದ ನೋಂದಾಯಿತ ಕಂಪನಿಯೊಂದು ನಿಮಗೆ ಉದ್ಯೋಗದ ಆಫರ್ ನೀಡಿ, ನಿಮ್ಮ ಪರವಾಗಿ ವೀಸಾ ಪ್ರಾಯೋಜಕತ್ವ ವಹಿಸಿಕೊಳ್ಳಲು ಸಿದ್ಧವಿರಬೇಕು.

ಸಮರ್ಪಕ ವೇತನ: ಕಂಪನಿಯು ನಿಮಗೆ ನೀಡುವ ಸಂಬಳವು, ಅದೇ ಹುದ್ದೆಗೆ ಅಮೆರಿಕದ ಸ್ಥಳೀಯ ಉದ್ಯೋಗಿಗೆ ನೀಡುವ ಕನಿಷ್ಠ ವೇತನಕ್ಕಿಂತ ಕಡಿಮೆ ಇರಬಾರದು.

ಐಟಿ ಕಂಪನಿಗಳು ನಿರಾಳ

ಈ ಹಿಂದೆ ಎಚ್1ಬಿ ವೀಸಾ ಅರ್ಜಿಗೆ ಕೇವಲ 2,000ದಿಂದ 5,000 ಡಾಲರ್ ವೆಚ್ಚವಾಗುತ್ತಿತ್ತು. ಅದನ್ನು ಏಕಾಏಕಿ 1 ಲಕ್ಷ ಡಾಲರ್​ಗೆ ಏರಿಸಿದ್ದರಿಂದ ಇನ್ಪೋಸಿಸ್, ಟಿಸಿಎಸ್, ವಿಪೋ›ದಂತಹ ಭಾರತೀಯ ಐಟಿ ಸಂಸ್ಥೆಗಳು ಹಾಗೂ ಅಮೆರಿಕದ ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್​ನಂತಹ ದೈತ್ಯ ಕಂಪನಿಗಳ ಮೇಲೆ ಕೋಟ್ಯಂತರ ಡಾಲರ್ ಆರ್ಥಿಕ ಹೊರೆ ಬೀಳುತ್ತಿತ್ತು. ಈಗ ಹಳೆಯ ಶುಲ್ಕವೇ ಮುಂದುವರಿಯುವುದರಿಂದ ಕಂಪನಿಗಳು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಬಹುದು.

ಸ್ಪರ್ಧಾತ್ಮಕತೆ ರಕ್ಷಣೆ

ಅಮೆರಿಕದ ಉದ್ಯಮ ವಲಯಕ್ಕೆ ಜಾಗತಿಕ ಮಟ್ಟದ ಪ್ರತಿಭೆಗಳ ಅಗತ್ಯವಿದೆ. ಶುಲ್ಕ ಹೆಚ್ಚಳದಿಂದಾಗಿ ಕಂಪನಿಗಳು ವಿದೇಶಿ ನೌಕರರನ್ನು ತರಲು ಹಿಂದೇಟು ಹಾಕುತ್ತಿದ್ದವು. ಕೋರ್ಟ್ ಆದೇಶದಿಂದಾಗಿ ಸಿಲಿಕಾನ್ ವ್ಯಾಲಿಯ ನಾವೀನ್ಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಪಾರುಪತ್ಯ ಮುಂದುವರಿಯಲು ಸಹಾಯವಾಗುತ್ತದೆ.

ಮುಂದಿನ ಹೆಜ್ಜೆ

ಟ್ರಂಪ್ ಆಡಳಿತವು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. ಆದಾಗ್ಯೂ, ಪ್ರಸ್ತುತ ಫೆಡರಲ್ ಕೊರ್ಟ್ ನೀಡಿರುವ ಈ ತೀರ್ಪು ಸದ್ಯಕ್ಕೆ ಭಾರತೀಯ ಉದ್ಯೋಗಿಗಳಿಗೆ ಮತ್ತು ಅಮೆರಿಕದ ಉದ್ಯಮ ರಂಗಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇತರ ವಲಯಗಳಿಗೂ ಅನುಕೂಲ

ಐಟಿ ಮಾತ್ರವಲ್ಲದೆ, ಅಮೆರಿಕದ ಗ್ರಾಮೀಣ ಭಾಗದ ಆಸ್ಪತ್ರೆಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಭಾರತೀಯ ವೈದ್ಯರು, ನರ್ಸ್​ಗಳು ಹಾಗೂ ಪ್ರಾಧ್ಯಾಪಕರನ್ನು ನಂಬಿಕೊಂಡಿವೆ. ಶುಲ್ಕ ರದ್ದತಿ ಯಿಂದ ಈ ಅಗತ್ಯ ಸೇವೆಗಳ ಮೇಲಾಗುತ್ತಿದ್ದ ಸಂಕಷ್ಟ ತಪ್ಪಿದೆ.

ಹಂತ 1: ಎಲೆಕ್ಟ್ರಾನಿಕ್ ನೋಂದಣಿ (ಮಾರ್ಚ್ ತಿಂಗಳಲ್ಲಿ)

ಮೊದಲು ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅಮೆರಿಕದ ಕಂಪನಿಯು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ ಪೋರ್ಟಲ್​ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುತ್ತದೆ.

ಹಂತ 2: ಲಾಟರಿ ಪ್ರಕ್ರಿಯೆ

ಲಕ್ಷಾಂತರ ಅರ್ಜಿಗಳು ಬರುವುದರಿಂದ, ಕಂಪ್ಯೂಟರ್ ಆಧಾರಿತ ಲಕ್ಕಿ ಡ್ರಾ ನಡೆಸಲಾಗುತ್ತದೆ. ಈ ಲಾಟರಿಯಲ್ಲಿ ನಿಮ್ಮ ಹೆಸರು ಆಯ್ಕೆಯಾದರೆ ಮಾತ್ರ ಮುಂದಿನ ಹಂತಕ್ಕೆ ಹೋಗಲು ಸಾಧ್ಯ.

ವೀಸಾ ಪಡೆಯುವ ಪ್ರಕ್ರಿಯೆ

ಹಂತ 3: ಎಲ್​ಸಿಎ ಅನುಮೋದನೆ

ಲಾಟರಿಯಲ್ಲಿ ಆಯ್ಕೆಯಾದ ನಂತರ, ಕಂಪನಿಯು ಅಮೆರಿಕದ ಕಾರ್ವಿುಕ ಇಲಾಖೆಗೆ ಔಚಚಿಟ್ಟ ಇಟ್ಞಛಜಿಠಿಜಿಟ್ಞ ಅಟಟ್ಝಜ್ಚಿಚಠಿಜಿಟ್ಞ ಸಲ್ಲಿಸಬೇಕು. ವಿದೇಶಿ ನೌಕರನಿಗೆ ಸರಿಯಾದ ವೇತನ ನೀಡಲಾಗುತ್ತಿದೆ ಮತ್ತು ಇದರಿಂದ ಅಮೆರಿಕದ ಸ್ಥಳೀಯ ಕಾರ್ವಿುಕರಿಗೆ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಕಂಪನಿ ಪ್ರಮಾಣೀಕರಿಸಬೇಕು.

ಹಂತ 4: ವೀಸಾ ಅರ್ಜಿ ಸಲ್ಲಿಕೆ

ಎಲ್​ಸಿಎ ಅನುಮೋದನೆ ದೊರೆತ ನಂತರ, ಕಂಪನಿಯು ನಿಮ್ಮ ಸಂಪೂರ್ಣ ದಾಖಲೆಗಳು ಹಾಗೂ ಅಗತ್ಯ ಶುಲ್ಕದೊಂದಿಗೆ ಯುಎಸ್​ಸಿಐಎಸ್​ಗೆಗೆ ಅಧಿಕೃತ ವೀಸಾ ಅರ್ಜಿಯನ್ನು ಸಲ್ಲಿಸುತ್ತದೆ. ಅಧಿಕಾರಿಗಳು ಇದನ್ನು ಪರಿಶೀಲಿಸಿ ವೀಸಾವನ್ನು ಅಂಗೀಕರಿಸುತ್ತಾರೆ.

ಹಂತ 5: ವೀಸಾ ಸಂದರ್ಶನ ಮತ್ತು ಸ್ಟಾ್ಯಂಪಿಂಗ್

ಅಮೆರಿಕದ ಇಲಾಖೆ ನಿಮ್ಮ ಅರ್ಜಿಯನ್ನು ಒಪ್ಪಿದ ನಂತರ, ನೀವು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್​ಗೆ ಹೋಗಿ ಬಯೋಮೆಟ್ರಿಕ್ ನೀಡಿ, ಮುಖಾಮುಖಿ ಸಂದರ್ಶನ ಎದುರಿಸ ಬೇಕಾಗುತ್ತದೆ. ಅಲ್ಲಿ ನಿಮ್ಮ ಪಾಸ್​ಪೋರ್ಟ್​ಗೆ ವೀಸಾ ಸ್ಟಾಂಪ್​ ಮುದ್ರೆ ಬೀಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net