ಕ್ಯಾಸಿಯೋ ವಾಚ್‌ಗೆ ಥೈಲ್ಯಾಂಡ್‌ನಲ್ಲಿ ಸಖತ್ ಡಿಮ್ಯಾಂಡ್! ಪ್ರಧಾನಿ ಕೊಟ್ಟ ಗಿಫ್ಟ್‌ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ? Casio Watch

ಥೈಲ್ಯಾಂಡ್ ರಾಜಕೀಯದಲ್ಲಿ ₹5,700ರ ಕ್ಯಾಸಿಯೊ ಡಿಜಿಟಲ್ ವಾಚ್ ಭಾರೀ ಸದ್ದು ಮಾಡುತ್ತಿದೆ. ಪ್ರಧಾನಿ ಅನುಟಿನ್ ನೀಡಿದ ವಾಚ್ ಗಿಫ್ಟ್ ಹಿಂದಿರುವ 'ಕ್ಯಾಸಿಯೊ ಕನೆಕ್ಷನ್' ರಾಜಕೀಯ ಲೆಕ್ಕಾಚಾರ ಇಲ್ಲಿದೆ.
A Casio AE1200WH watch gifted to the Minister by the Prime Minister of Thailand, Anutin Charnwirakul
ಥೈಲ್ಯಾಂಡ್ ಪ್ರಧಾನಿ ಅನುಟಿನ್ ಚಾರ್ನ್‌ವಿರಾಕುಲ್ ಸಚಿವರಿಗೆ ಉಡುಗೊರೆಯಾಗಿ ನೀಡಿದ ಕ್ಯಾಸಿಯೊ AE1200WH ವಾಚ್
Published on: 

ಥಾಯ್ಲೆಂಡ್‌: ಲಕ್ಷಾಂತರ ರೂಪಾಯಿ ಬೆಲೆಬಾಳುವ ಐಷಾರಾಮಿ ವಾಚ್‌ಗಳ ಬದಲು, ಸಾಮಾನ್ಯ ಡಿಜಿಟಲ್ ವಾಚ್‌ವೊಂದು ಈಗ ಥೈಲ್ಯಾಂಡ್‌ನ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಅನುಟಿನ್ ಚಾರ್ನ್‌ವಿರಾಕುಲ್, ತಮ್ಮ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡುತ್ತಿರುವ ಕ್ಯಾಸಿಯೊ (Casio) ವಾಚ್‌ ಈಗ ರಾಜಕೀಯ ಸಂಪರ್ಕದ ಸಂಕೇತವಾಗಿ ಗುರುತಿಸಿಕೊಂಡಿದೆ.

ಕಡಿಮೆ ಬೆಲೆಯ ವಾಚ್‌, ದೊಡ್ಡ ರಾಜಕೀಯ ಚರ್ಚೆ!

ವರದಿಯ ಪ್ರಕಾರ, 60 ಡಾಲರ್‌ (5,700 ರೂ.) ಗಿಂತ ಕಡಿಮೆ ಬೆಲೆಯ ಕ್ಯಾಸಿಯೊ AE1200WH ಡಿಜಿಟಲ್ ವಾಚ್‌ ಥೈಲ್ಯಾಂಡ್‌ನ ರಾಜಕೀಯ ಗಣ್ಯರ ಗಮನ ಸೆಳೆಯುತ್ತಿದೆ. 'ಕ್ಯಾಸಿಯೊ ರಾಯಲ್‌' ಎಂಬ ಅಡ್ಡಹೆಸರಿನಿಂದಲೂ ಪ್ರಸಿದ್ಧವಾಗಿರುವ ಈ ವಾಚ್‌ ತನ್ನ ರೆಟ್ರೋ ವಿನ್ಯಾಸ ಮತ್ತು ಪರದೆಯ ಮೇಲಿನ ವಿಶ್ವ ಭೂಪಟದ ವೈಶಿಷ್ಟ್ಯದಿಂದ ಗುರುತಿಸಿಕೊಂಡಿದೆ.

ಆದರೆ, ಈ ವಾಚ್‌ ಜನಪ್ರಿಯವಾಗಲು ಅದರ ವಿನ್ಯಾಸವೊಂದೇ ಕಾರಣವಲ್ಲ. ಅದರ ಮೇಲೆ ಪ್ರಧಾನಿ ಅನುಟಿನ್ ಅವರ ಹೆಸರನ್ನು ಕೆತ್ತಲಾಗಿದ್ದು, ಅವರಿಂದಲೇ ಉಡುಗೊರೆಯಾಗಿ ಪಡೆದಿರುವುದು ಇದಕ್ಕೆ ವಿಶೇಷ ಮಹತ್ವ ನೀಡಿದೆ.

ಸಚಿವರು, ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಈ ವಾಚ್‌ಗಳನ್ನು ಧರಿಸಿಕೊಂಡು ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಅವರಿಂದ ವಾಚ್‌ ಪಡೆದವರನ್ನು 'ಕ್ಯಾಸಿಯೊ ಕನೆಕ್ಷನ್‌' ಎಂದೂ ಗುರುತಿಸಲಾಗುತ್ತಿದೆ. ಸಾಮಾನ್ಯವಾಗಿ ದುಬಾರಿ ಉಡುಗೊರೆಗಳು ಪ್ರತಿಷ್ಠೆಯ ಸಂಕೇತವಾಗಿರುವ ರಾಜಕೀಯ ವಲಯದಲ್ಲಿ, ಕಡಿಮೆ ಬೆಲೆಯ ವಾಚ್‌ವೊಂದು ಇಷ್ಟೊಂದು ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.

ಲಕ್ಷಾಂತರ ರೂಪಾಯಿ ವಾಚ್‌ ಬದಿಗಿಟ್ಟ ಸಚಿವ!

ಥಾಯ್ಲೆಂಡ್‌ನ ಸಾರಿಗೆ ಇಲಾಖೆಯ ಉಪ ಸಚಿವ ಸಿರಿಪಾಂಗ್ ಅಂಗಸಕುಲ್ಕಿಯಾಟ್ ಅವರಿಗೂ ಪ್ರಧಾನಿ ಅನುಟಿನ್ ಈ ವಾಚ್‌ ಉಡುಗೊರೆಯಾಗಿ ನೀಡಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ವಾಚ್‌ ಪಡೆದಿರುವ ಅವರು, ಅದರ ಬೆಲೆಗಿಂತ ಅದನ್ನು ನೀಡಿದ ವ್ಯಕ್ತಿಯೇ ಮುಖ್ಯ ಎಂದು ಹೇಳಿದ್ದಾರೆ.

ಪ್ರಧಾನಿ ಅನುಟಿನ್ ಬ್ಯಾಂಕಾಕ್ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವಾಗ ಸಣ್ಣ ಅಂಗಡಿಗಳು ಮತ್ತು ಮಾರುಕಟ್ಟೆಗಳಿಂದ ಈ ವಾಚ್‌ಗಳನ್ನು ಖರೀದಿಸುತ್ತಾರೆ ಎನ್ನಲಾಗಿದೆ. ಬಳಿಕ ಅವುಗಳ ಮೇಲೆ ತಮ್ಮ ಹೆಸರನ್ನು ಕೆತ್ತಿಸಿ, ಆಪ್ತರು ಮತ್ತು ರಾಜಕೀಯ ಸಹೋದ್ಯೋಗಿಗಳಿಗೆ ಉಡುಗೊರೆಯಾಗಿ ನೀಡುತ್ತಾರೆ.Vijayavani

Also Read
'ಹೀರೋಯಿನ್ ಆಗ್ಬೇಕಾದ್ರೆ ನನ್ನ ಜೊತೆ ಮಲಗ್ಬೇಕು ಅಂದ!': ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ Niti Taylor
A Casio AE1200WH watch gifted to the Minister by the Prime Minister of Thailand, Anutin Charnwirakul

ಉಡುಗೊರೆ ಹಿಂದೆ ರಾಜಕೀಯ ಲೆಕ್ಕಾಚಾರ?

ಥೈಲ್ಯಾಂಡ್‌ನ ರಾಜಕೀಯದಲ್ಲಿ ಮೈತ್ರಿ ಮತ್ತು ವೈಯಕ್ತಿಕ ಸಂಪರ್ಕಗಳಿಗೆ ಹೆಚ್ಚಿನ ಮಹತ್ವವಿದೆ. ಈ ಹಿನ್ನೆಲೆಯಲ್ಲಿ, ಪ್ರಧಾನಿ ನೀಡುವ ಸಣ್ಣ ಉಡುಗೊರೆಯೂ ರಾಜಕೀಯ ಸಂಬಂಧಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಸಿಂಗಾಪುರದ ISEAS–Yusof Ishak ಸಂಸ್ಥೆಯ ನಪೋನ್ ಜತುಶ್ರೀಪಿತಕ್ ಪ್ರಕಾರ, ನಾಯಕರು ನೀಡುವ ಉಡುಗೊರೆಗಳು ಸ್ವೀಕರಿಸುವವರಲ್ಲಿ ಬದ್ಧತೆಯ ಭಾವನೆ ಮೂಡಿಸಬಹುದು ಮತ್ತು ಅವರ ನಿಷ್ಠೆಯನ್ನು ಬಲಪಡಿಸಲು ಸಹಾಯ ಮಾಡಬಹುದು. ಕ್ಲಾ ಥಮ್ ಪಕ್ಷದ ಪ್ರಭಾವಿ ನಾಯಕ ತಮನತ್ ಪ್ರಾಂಪೋ ಅವರು ಕೆತ್ತನೆಯಿರುವ ಕ್ಯಾಸಿಯೊ ವಾಚ್‌ ಧರಿಸಿರುವುದು ಕೂಡ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಆದರೆ, ಈ ಉಡುಗೊರೆಗಳನ್ನು ನಿರ್ದಿಷ್ಟ ರಾಜಕೀಯ ಗುಂಪಿನ ಸದಸ್ಯತ್ವದ ಗುರುತಾಗಿ ನೀಡಲಾಗುತ್ತಿದೆ ಎಂಬ ಮಾತುಗಳನ್ನು ಥಾಯ್ ಸರ್ಕಾರದ ವಕ್ತಾರ ಎಕ್ಕಾಪೋಬ್ ಪಿಯಾನ್‌ಪಿಸಸ್ ತಳ್ಳಿಹಾಕಿದ್ದಾರೆ. ಪ್ರಧಾನಿ ಅವರಿಗೆ ವಾಚ್‌ ಇಷ್ಟವಾಗಿದ್ದು, ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ಅವರ ಸ್ಪಷ್ಟನೆಯಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net