ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಎಷ್ಟು ಬಾರಿ ಪ್ರೀತಿಯಲ್ಲಿ ಬೀಳುತ್ತಾನೆ? ಸಮೀಕ್ಷೆಯಲ್ಲಿ ಸಿಕ್ತು ಅಚ್ಚರಿ ಉತ್ತರ... Fall In Love

ಸಾಂದರ್ಭಿಕ ಚಿತ್ರ ( Fall In Love )
ಸಾಂದರ್ಭಿಕ ಚಿತ್ರ ( Fall In Love )
Published on

ಪ್ರಮುಖ ಮುಖ್ಯಾಂಶಗಳು

  • ಪ್ರೀತಿ ಎಂದರೆ ಎರಡು ಮನಸ್ಸುಗಳ ಮಿಲನ ಎಂಬ ಮಾತಿದೆ
  • ಜೀವನದಲ್ಲಿ ಪರಿಶುದ್ಧ ಪ್ರೀತಿ ಓರ್ವ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಅಂತಾರೆ
  • ಆದರೆ, ಪ್ರೀತಿಯು ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿರುವ ಭಾವನೆಯಲ್ಲ
  • ಜೀವನದಲ್ಲಿ ಕನಿಷ್ಠ ಎರಡು ಬಾರಿಯಾದರೂ ಆಳವಾದ ಪ್ರೀತಿಯನ್ನು ಅನುಭವಿಸುತ್ತಾರಂತೆ
Fall In Love : ಪ್ರೀತಿ ಅನ್ನೋದು ಒಂದು ಮಧುರ ಭಾವನೆ. ಪ್ರೀತಿ ಎಂದರೆ ಎರಡು ಮನಸ್ಸುಗಳ ಮಿಲನ ಎಂಬ ಮಾತಿದೆ. ಜೀವನದಲ್ಲಿ ಪರಿಶುದ್ಧ ಹಾಗೂ ಆಳವಾದ ಪ್ರೀತಿ ಓರ್ವ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಸಿನಿಮಾ ಮತ್ತು ಕಾದಂಬರಿಗಳಲ್ಲೂ ಇದನ್ನೇ ಚಿತ್ರಿಸಲಾಗಿದೆ. ಆದರೆ, ಇದು ಸುಳ್ಳು ಎಂದು ತೋರಿಸಿದೆ ಇತ್ತೀಚಿನ ಸಂಶೋಧನೆ.
ಹೌದು, ಪ್ರೀತಿಯು ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿರುವ ಭಾವನೆಯಲ್ಲ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಕನಿಷ್ಠ ಎರಡು ಬಾರಿಯಾದರೂ ಆಳವಾದ ಪ್ರೀತಿಯನ್ನು ಅನುಭವಿಸುತ್ತಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಅಮೆರಿಕ ರಾಜ್ಯ ಇಂಡಿಯಾನಾದ ಬ್ಲೂಮಿಂಗ್ಟನ್​ ನಗರದಲ್ಲಿರುವ ಕಿನ್ಸೆ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಚ್ಚರಿಯ ಸಂಗತಿ ಬಯಲಾಗಿದೆ. ಅಂದಹಾಗೆ, ಈ ಕಿನ್ಸೆ ಸಂಸ್ಥೆ, ಲೈಂಗಿಕತೆ, ಸಂಬಂಧಗಳು ಮತ್ತು ಯೋಗಕ್ಷೇಮದ ಬಗ್ಗೆ ವಿಶ್ವಾಸಾರ್ಹ ಜ್ಞಾನ ಅಥವಾ ಮಾಹಿತಿಯನ್ನು ಒದಗಿಸುವ ಸಂಸ್ಥೆಯಾಗಿದೆ. 10,000 ಕ್ಕೂ ಹೆಚ್ಚು ಒಂಟಿ ಜನರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಪ್ರೀತಿಯ ಬಗ್ಗೆ ಆಸಕ್ತಿದಾಯಕ ಮಾಹಿತಿ ಬಹಿರಂಗವಾಗಿದೆ. ಅಂದಹಾಗೆ, 18 ರಿಂದ 99 ವರ್ಷ ವಯಸ್ಸಿನ ಜನರ ಮೇಲೆ ಈ ಸಮೀಕ್ಷೆಯನ್ನು ನಡೆಸಲಾಯಿತು.
ಸಮೀಕ್ಷೆಗೆ ಒಳಗಾದವರಲ್ಲಿ ಶೇ. 30.3 ರಷ್ಟು ಜನರು ಎರಡು ಬಾರಿ ಪ್ರೀತಿಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಶೇ. 27.8 ರಷ್ಟು ಜನರು ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿದ್ದಾರೆ. ಶೇ. 11 ರಷ್ಟು ಜನರು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿದ್ದಾರೆ. ಆದರೆ, ಶೇ. 14 ರಷ್ಟು ಜನರು ತಾವು ಎಂದಿಗೂ ಪ್ರೀತಿಯನ್ನು ಅನುಭವಿಸಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಸಮೀಕ್ಷೆಯ ಬಗ್ಗೆ ಮಾತನಾಡಿರುವ ಪ್ರಮುಖ ಸಂಶೋಧಕ ಡಾ. ಅಮಂಡಾ ಗಜೆಲ್ಮನ್, ನಾವು ಪ್ರೀತಿಯ ಬಗ್ಗೆ ಎಲ್ಲಾ ಸಮಯದಲ್ಲೂ ಮಾತನಾಡುತ್ತೇವೆ. ಆದರೆ, ಅದು ಜೀವಿತಾವಧಿಯಲ್ಲಿ ಎಷ್ಟು ಬಾರಿ ಸಂಭವಿಸುತ್ತದೆ ಎಂಬುದು ತಿಳಿದಿಲ್ಲ. ಅದನ್ನು ತಿಳಿದುಕೊಳ್ಳಲು ಮಾಡಿದ ಮೊದಲ ಅಧ್ಯಯನ ಇದು ಎಂದಿದ್ದಾರೆ.
ಸಮೀಕ್ಷೆಯ ಪ್ರಕಾರ, ವಯಸ್ಸಾದಂತೆ ಪ್ರೀತಿಯ ಅನುಭವಗಳ ಸಂಖ್ಯೆಯೂ ಹೆಚ್ಚಾಗುತ್ತದಯಂತೆ. ಒಬ್ಬನೇ ಅಥವಾ ಒಬ್ಬಳೇ 'ಜೀವನ ಸಂಗಾತಿ' ಎಂಬ ಸಾಂಪ್ರದಾಯಿಕ ನಂಬಿಕೆಗೆ ವಿರುದ್ಧವಾಗಿ, ಮಾನವರು ಜೀವನದ ವಿವಿಧ ಹಂತಗಳಲ್ಲಿ ವಿಭಿನ್ನ ಜನರ ಜತೆ ತೀವ್ರವಾದ ಪ್ರೀತಿಯನ್ನು ಅನುಭವಿಸಬಹುದು ಎಂದು ಅಧ್ಯಯನವು ಸೂಚಿಸುತ್ತದೆ.
ಇನ್ನು ಪ್ರೀತಿ, ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶವಾಗಿದ್ದರೂ, ಜೀವನದಲ್ಲಿ ಅದು ಎಷ್ಟು ಬಾರಿ ಸಂಭವಿಸುತ್ತದೆ ಎಂಬುದು ವ್ಯಕ್ತಿಗಳ ಸಾಮಾಜಿಕ ಸಂದರ್ಭಗಳಿಗೂ ಸಂಬಂಧಿಸಿದೆ ಎಂದು ಸಂಶೋಧನೆ ಹೇಳಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net