ಈ ದಾಳಿಯಲ್ಲಿ ಅಮೆರಿಕ 2,000 ಪೌಂಡ್ (ಸುಮಾರು 907 ಕೆಜಿ) ತೂಕದ ಅತ್ಯಾಧುನಿಕ ಬಂಕರ್ ಬಸ್ಟರ್ (Bunker Busters) ಬಾಂಬ್‌ಗಳನ್ನು ಬಳಸಿದೆ. 'ದ ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, ಇವು ಸಾಮಾನ್ಯ ಬಾಂಬ್‌ಗಳಿಗಿಂತ ಭಿನ್ನವಾಗಿವೆ. ಇವು ಗಟ್ಟಿಯಾದ ಉಕ್ಕಿನ ಕವಚವನ್ನು ಹೊಂದಿದ್ದು, ಕಾಂಕ್ರೀಟ್ ಗೋಡೆ ಅಥವಾ ಭೂಮಿಯ ಆಳದ ಪದರಗಳನ್ನು ಕೊರೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿವೆ. ಕೆಲವು ಬಾಂಬ್‌ಗಳು 'ಹಾರ್ಡ್ ಟಾರ್ಗೆಟ್ ಸ್ಮಾರ್ಟ್ ಫ್ಯೂಸ್' (HTSF) ಹೊಂದಿದ್ದು, ಕಟ್ಟಡದ ಎಷ್ಟು ಮಹಡಿಗಳನ್ನು ದಾಟಿದೆ ಎಂಬುದನ್ನು ಲೆಕ್ಕ ಹಾಕಿ, ನಿಖರವಾದ ಜಾಗದಲ್ಲಿ ಸ್ಫೋಟಗೊಳ್ಳುತ್ತವೆ. ಇನ್ನು ಕೆಲವು ಬಾಂಬ್‌ಗಳು ಮನುಷ್ಯರ ಧ್ವನಿ ಕೇಳಿಸಿದಾಗ ಮಾತ್ರ ಸ್ಫೋಟಗೊಳ್ಳುವಂತಹ ಮೈಕ್ರೋಫೋನ್ ತಂತ್ರಜ್ಞಾನವನ್ನೂ ಒಳಗೊಂಡಿವೆ ಎನ್ನಲಾಗಿದೆ.