ಸ್ಪೇನ್‌ನಲ್ಲಿ ಭೀಕರ ದುರಂತ: ಮುಖಾಮುಖಿ ಡಿಕ್ಕಿಯಾದ ಎರಡು ಹೈಸ್ಪೀಡ್ ರೈಲುಗಳು; ಸಾವಿನ ಸಂಖ್ಯೆ 64ಕ್ಕೆ ಏರಿಕೆ! Spain Train Accident

A horrific tragedy occurred near Toledo, Spain, when two high-speed trains collided; rescue operations are currently underway at the scene.
ಸ್ಪೇನ್‌ನ ಟೊಲೆಡೊ ಸಮೀಪ ಎರಡು ಹೈಸ್ಪೀಡ್ ರೈಲುಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಭೀಕರ ದುರಂತ; ಸ್ಥಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ.
Published on: 

ಸ್ಪೇನ್​: ಸ್ಪೇನ್​ ದೇಶದ ಟೊಲೆಡೊ ಎಂಬಲ್ಲಿ ಎರಡು ಹೈಸ್ಪೀಡ್​ ಟ್ರೇನ್​ಗಳು ಮುಖಾಮುಖಿ ಡಿಕ್ಕಿಯಾದ ಹಿನ್ನಲೆ, ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಈಗ 64 ಕ್ಕೇರಿದೆ. ಈ ಮೊದಲು ಘಟನೆ ವರದಿಯಾದಾಗ 39 ಜನರು ದುರ್ಮರಣ ಹೊಂದಿದ್ದಾಗಿ ಹೇಳಲಾಗಿತ್ತು. ಈಗ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದ್ದು ನೋವಿನ ಸಂಗತಿಯಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ದುರ್ಘಟನೆ ಬೆನ್ನಲ್ಲೆ ಮ್ಯಾಡ್ರಿಡ್, ಸಿಯುಡಾಡ್ ರಿಯಲ್ ಮತ್ತು ಆಂಡಲೂಸಿಯಾ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಈ ಅಪಘಾತದಲ್ಲಿ ಸಿಲುಕಿಕೊಂಡವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿದುಬಂದಿದೆ.

ಒಂದೇ ದಿಕ್ಕಿನಲ್ಲಿ ಚಲಿಸಿದ್ದೇ ಎಡವಟ್ಟು!

ಮಾಹಿತಿ ಪ್ರಕಾರ, ಅಪಘಾತಕ್ಕೆ ತುತ್ತಾಗಿರುವ ಎರಡು ರೈಲುಗಳು ಒಂದೇ ದಿಕ್ಕಿನಲ್ಲಿ ಚಲನೆ ಮಾಡಿದ್ದೇ ಈ ದುರ್ಘಟನೆಗೆ ಮೂಲ ಕಾರಣವೆಂದು ತಿಳಿದುಬಂದಿದೆ. ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು, ರೈಲುಗಳು ಹಳಿತಪ್ಪಿ ಬಿದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸಿದೆ ಎನ್ನಲಾಗುತ್ತಿದೆ.

ಸ್ಪೇನ್​ ಪ್ರಧಾನಿ ಸಂತಾಪ!

ಈ ದುರ್ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಸ್ಪೇನ್​ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಟೊಲೆಡೊದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಿಂದ ನನಗೆ ಆಘಾತವಾಗಿದೆ. ನಾನು ಸಾರಿಗೆ ಸಚಿವ ಮತ್ತು ಕ್ಯಾಸ್ಟಿಲ್ಲಾ-ಲಾ ಮಂಚಾದ ಅಧ್ಯಕ್ಷರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ದುರ್ಘಟನೆಯಲ್ಲಿ ಸಾವೀಗಿಡಾದ ಕುಟುಂಬದವರಿಗೆ ನನ್ನ ಸಂತಾಪ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ!

ಸ್ಪೇನ್​ನಲ್ಲಿ ನಡೆದಿರುವ ಈ ದುರ್ಘಟನೆ ವಿಶ್ವದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯ ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸ್​ ಹಾಗೂ ರಕ್ಷಣಾ ಸಿಬ್ಬಂದಿ, ಅಪಘಾತಕ್ಕೆ ತುತ್ತಾಗಿರುವ ಜನರನ್ನು ಕಾಪಾಡಿ, ಹತ್ತಿರದ ಆಸ್ಪತ್ರೆಗೆ ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net