ಹಾಂಗ್​ಕಾಂಗ್ ಅಗ್ನಿ ದುರಂತ: ಸಾವಿನ ಸಂಖ್ಯೆ 94ಕ್ಕೆ ಏರಿಕೆ; 250ಕ್ಕೂ ಹೆಚ್ಚು ಮಂದಿ ನಾಪತ್ತೆ | Fire tragedy

ಅಗ್ನಿ ದುರಂತದ ಕಟ್ಟಡಗಳು
ಅಗ್ನಿ ದುರಂತದ ಕಟ್ಟಡಗಳು
Published on
ಹಾಂಗ್​ಕಾಂಗ್: ಹಾಂಗ್​ಕಾಂಗ್​ ನ್ಯೂ ಟೆರಿಟರಿಸನ್​ ತೈಪೋ ಜಿಲ್ಲೆಯ ವಸತಿ ಅಪಾರ್ಟ್ಮೆಂಟ್​ನಲ್ಲಿ ಗುರುವಾರ ನಡೆದ ಅಗ್ನಿ ದುರಂತದಲ್ಲಿ(Fire tragedy) ಸಾವನ್ನಪ್ಪಿದವರ ಸಂಖ್ಯೆ 94ಕ್ಕೆ ಏರಿಕೆಯಾಗಿದ್ದು, 250ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಶುಕ್ರವಾರ(ನ. 28) ವರದಿಯಾಗಿದೆ.
ಹಾಂಗ್ ಕಾಂಗ್‌ನ ಮುಖ್ಯ ಭೂಭಾಗದ ಗಡಿಯ ಸಮೀಪವಿರುವ ಉತ್ತರ ಉಪನಗರವಾದ ತೈ ಪೊ ಜಿಲ್ಲೆಯಲ್ಲಿ ಸಾವಿರಾರು ಜನರು ವಾಸಿಸುವ ದಟ್ಟವಾದ ಕಟ್ಟಡಗಳ ಸಮೂಹವಾದ ವಾಂಗ್ ಫುಕ್ ಕೋರ್ಟ್ ಸಂಕೀರ್ಣದ 8 ಅಪಾರ್ಟ್​​ಮೆಂಟ್​ಗಳಲ್ಲಿ ಅವಘಡ ಸಂಭವಿಸಿದ್ದು, 4 ಕಟ್ಟಡಗಳ ಬೆಂಕಿ ನಂದಿಸಿದ್ದು, ಇನ್ನೂ 2 ಕಟ್ಟಡಗಳ ಬೆಂಕಿ ನಂದಿಸಲಾಗ್ತಿದೆ. ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಮಾಡ್ತಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕುರಿತು ಮಾತನಾಡಿರುವ ಅಗ್ನಿ ಶಾಮಕದಳ ಉಪ ನಿರ್ದೇಶಕ ಡೆರೆಕ್ ಆರ್ಮ್‌ಸ್ಟ್ರಾಂಗ್ ಚಾನ್, ನಮ್ಮ ಅಗ್ನಿಶಾಮಕ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ. ಸಿಬ್ಬಂದಿ ಇನ್ನೂ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಾವುನೋವುಗಳು ಸಂಭವಿಸದಂತೆ ನೋಡಿಕೊಳ್ಳಲು ಏಳು ಟವರ್‌ಗಳಲ್ಲಿರುವ ಎಲ್ಲಾ ಘಟಕಗಳನ್ನು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ 11 ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 94 ಜನರು ಸಾವನ್ನಪ್ಪಿದ್ದಾರೆ. ರಾತ್ರಿಯಿಡೀ ಸುಮಾರು 900 ಜನರನ್ನು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
ಹಾಂಗ್ ಕಾಂಗ್ ನಾಯಕ ಜಾನ್ ಲೀ ಮಾತನಾಡಿ, ಎಷ್ಟು ಜನರು ಕಾಣೆಯಾಗಿದ್ದಾರೆ ಅಥವಾ ಸಿಕ್ಕಿಬಿದ್ದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಗುರುವಾರ ಮುಂಜಾನೆ 279 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದೇಗೆ?
ವಸತಿ ಸಂಕೀರ್ಣದ ಹೊರಭಾಗದಲ್ಲಿ ಸ್ಥಾಪಿಸಲಾದ ಬಿದಿರಿನ ಸ್ಕ್ಯಾಫೋಲ್ಡಿಂಗ್​ಗೆ(ಬಿದಿರಿನ ರಚನೆ) ಬೆಂಕಿ ಹೊತ್ತಿಕೊಂಡಿದೆ. ಬಳಿಕ ಕಟ್ಟಡದ ಇತರ ಭಾಗಗಳಿಗೆ ಅವರಿಸಿಕೊಂಡಿದೆ. ವಸತಿ ಸಂಕೀರ್ಣವು ಎಂಟು ಬ್ಲಾಕ್‌ಗಳನ್ನು ಹೊಂದಿದ್ದು, ಸುಮಾರು 2,000 ಅಪಾರ್ಟ್‌ಮೆಂಟ್‌ಗಳು ಇದ್ದು, ಅಂದಾಜು 4,800 ಜನರನ್ನು ವಾಸವಿದ್ದರು ಎಂದು ಅಂದಾಜಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net