ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಆಘಾತಕಾರಿ ರೀತಿಯಲ್ಲಿ ಏರಿಕೆಯಾಗಿದೆ. 2010ರಲ್ಲಿ 16,000 ಇದ್ದ ಸೋಂಕಿತರ ಸಂಖ್ಯೆ 2024ರ ವೇಳೆಗೆ ಬರೋಬ್ಬರಿ 48,000ಕ್ಕೆ ತಲುಪುವ ಮೂಲಕ ಶೇ. 200 ರಷ್ಟು ಭಾರಿ ಏರಿಕೆ ಕಂಡಿದೆ. ಸದ್ಯ ದೇಶದಲ್ಲಿ ಸುಮಾರು 35,000 ಜನರು ಎಚ್‌ಐವಿಯೊಂದಿಗೆ ಜೀವಿಸುತ್ತಿದ್ದು, ಆರೋಗ್ಯ ತಜ್ಞರ ಪ್ರಕಾರ ಅವರಲ್ಲಿ ಶೇ. 80 ರಷ್ಟು ಜನರಿಗೆ ತಮಗೆ ಸೋಂಕು ತಗಲಿರುವ ವಿಚಾರವೇ ತಿಳಿದಿಲ್ಲ!