ಕದನ ವಿರಾಮ ಒಪ್ಪಂದದ ನಂತರವೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಲೆಬನಾನ್ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಇಸ್ರೇಲ್ ಭೂಮಿ, ಸಮುದ್ರ ಮತ್ತು ವಾಯುಮಾರ್ಗದ ಮೂಲಕ 10,000ಕ್ಕೂ ಹೆಚ್ಚು ಬಾರಿ ಲೆಬನಾನ್ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಅವರು, ಅಂತರಾಷ್ಟ್ರೀಯ ಸಂಧಾನ ಪ್ರಯತ್ನಗಳು ಕಳೆದ 15 ತಿಂಗಳುಗಳಲ್ಲಿ ಯಾವುದೇ ಫಲ ನೀಡಿಲ್ಲ. ರಾಜತಾಂತ್ರಿಕತೆಗೆ ಅವಕಾಶ ನೀಡಲು ನಾವು ಮೌನವಾಗಿದ್ದೆವು, ಆದರೆ ನಮ್ಮ ಮೌನವೇ ಇಸ್ರೇಲ್ಗೆ ಬಂಡವಾಳವಾಯಿತು ಎಂದರು.