ಮಾತೃಭೂಮಿಯ ಮೇಲೆ ನಂಬಿಕೆ ಇಡಿ..ಅಮೆರಿಕದ 'ಫೇಲ್ಡ್ ಡೀಲ್' ವದಂತಿ ತಳ್ಳಿಹಾಕಿದ ಪಿಯೂಷ್ ಗೋಯಲ್ | Piyush Goyal

Piyush Goyal | ಕೇಂದ್ರ ಸಚಿವ ಪಿಯೂಷ್ ಗೋಯಲ್
Piyush Goyal | ಕೇಂದ್ರ ಸಚಿವ ಪಿಯೂಷ್ ಗೋಯಲ್
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಕರೆ ಮಾಡದ ಕಾರಣ ಉಭಯ ದೇಶಗಳ ವ್ಯಾಪಾರ ಒಪ್ಪಂದ ವಿಫಲವಾಗಿದೆ ಎನ್ನುವ ಸುದ್ದಿಗಳನ್ನು ವಿದೇಶಾಂಗ ಸಚಿವಾಲಯ ತಿರಸ್ಕರಿಸಿದ ಒಂದು ದಿನದ ಬಳಿಕ, ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಭಾರತದ ಮೇಲೆ ನಂಬಿಕೆ ಇಡುವಂತೆ ಮನವಿ ಮಾಡಿದ್ದಾರೆ.
ಎನ್‌ಡಿಟಿವಿ ಪವರ್ ಪ್ಲೇನಲ್ಲಿ ಮಾತನಾಡಿದ ಗೋಯಲ್​, ಅಮೆರಿಕಾ ಇತರ ದೇಶಗಳೊಂದಿಗೆ ಮುಂದುವರಿಯುತ್ತಿರುವಾಗ ಭಾರತದೊಂದಿಗಿನ ಮಾತುಕತೆಗಳು ವಿಫಲವಾಗಿವೆ ಎಂಬ ಯುಎಸ್​ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ ನೀವು ನಿಮ್ಮ ದೇಶವನ್ನು, ನಿಮ್ಮ ಮಾತೃಭೂಮಿಯನ್ನು ನಂಬಿರಿ, ವಿದೇಶಿ ಹೇಳಿಕೆಗಳನ್ನಲ್ಲ ಎಂದರು.
ವ್ಯಾಪಾರ ಒಪ್ಪಂದದ ಜಟಿಲತೆಗಳನ್ನು ಮಾಧ್ಯಮಗಳ ಮುಂದೆ ಅಲ್ಲ, ಮುಚ್ಚಿದ ಬಾಗಿಲುಗಳ ಹಿಂದೆ ಚರ್ಚಿಸಲಾಗುವುದು, ಟ್ರಂಪ್ ವ್ಯಾಪಾರ ಒಪ್ಪಂದಗಳನ್ನು ಮೆಟ್ಟಿಲಿನಂತೆ ನೋಡಿದರು ಎಂದು ಲುಟ್ನಿಕ್ ಹೇಳಿದ್ದಾರೆ. ಮೊದಲ ಮೆಟ್ಟಿಲು ಉತ್ತಮ ಒಪ್ಪಂದವನ್ನು ಪಡೆಯುತ್ತದೆ. ಮೊದಲ ವ್ಯಕ್ತಿಯ ನಂತರ ನೀವು ಉತ್ತಮ ಒಪ್ಪಂದವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ವಿದೇಶಾಂಗ ಸಚಿವಾಲಯವು ಮಾತುಕತೆಗಳ ವಿವರಣೆಯನ್ನು "ನಿಖರವಾಗಿಲ್ಲ" ಎಂದು ವಿವರಿಸಿದ್ದು, ಉಭಯ ದೇಶಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ನಿರಂತರ ಮತ್ತು ವಿವರವಾದ ಮಾತುಕತೆಗಳಲ್ಲಿ ತೊಡಗಿಕೊಂಡಿವೆ, ಸಂದರ್ಭ ಬಂದಾಗಲೆಲ್ಲಾ ಪ್ರಧಾನಿ (ಮೋದಿ) ಮತ್ತು ಅಧ್ಯಕ್ಷ ಟ್ರಂಪ್ 2025 ರಲ್ಲಿ ಎಂಟು ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ, ಇದು ನಮ್ಮ ವ್ಯಾಪಕ ಪಾಲುದಾರಿಕೆಯ ವಿವಿಧ ಅಂಶಗಳನ್ನು ಒಳಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net