ಗಿನ್ನಿಸ್​ ದಾಖಲೆ ಸೇರಿದ 5.5 ಲಕ್ಷ ರೂ. ಐಸ್​ಕ್ರೀಮ್! ಇದರ​ ವಿಶೇಷತೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Expensive Ice Cream

ಇದರ ಬೆಲೆಯು ಸಾವಿರಾರು ರೂ.ಗೂ ಅಧಿಕ ಎಂಬುದು ಇನ್ನೊಂದು ವಿಷಯ. ಆದರೆ, ಇಲ್ಲೊಂದು ಐಸ್​ಕ್ರೀಮ್​ಗೆ 5.5 ಲಕ್ಷ ರೂ. ಎಂದರೆ ನಂಬುತ್ತೀರಾ? ಖಂಡಿತ ನಂಬಲೇಬೇಕು ಬಿಡಿ. ಕಾರಣ, ಇದು ಅದಾಗಲೇ ಗಿನ್ನೆಸ್​ ವಿಶ್ವ ದಾಖಲೆ ಪುಸ್ತಕ ಕೂಡ ಸೇರಿದೆ.
Expensive Ice Cream
ಗಿನ್ನಿಸ್​ ದಾಖಲೆ ಸೇರಿದ 5 ಲಕ್ಷ ರೂ. ಐಸ್​ಕ್ರೀಮ್​ ವಿಶೇಷತೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ
Published on: 

Expensive Ice Cream: ಚಿಕ್ಕ ಮಕ್ಕಳಿನಿಂದ ಹಿಡಿದು ವಯಸ್ಸಾದ ಹಿರಿಯ ಜೀವಗಳಿಗೂ ಈ ಐಸ್​ಕ್ರೀಮ್​ ಎಂದರೆ ಅದೇನೋ ಪಂಚಪ್ರಾಣ. ಅದರಲ್ಲೂ, ಈ ಚಾಕೊಲೇಟ್, ಬಟರ್​ಸ್ಕಾಚ್​, ಸ್ಟ್ರಾಬೆರಿಯಂತಹ ವಿವಿಧ ಪ್ಲೇವರ್​ಗಳು ನಾಲಿಗೆಗೆ ತಂಪು ಮಾತ್ರವಲದೇ, ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಸವಿಯಲು ಬಿರು ಬಿಸಿಲೇ ಇರಬೇಕು ಎಂತನೇನಿಲ್ಲ. ಮಳೆ ಬರುತ್ತಿದ್ದರೂ, ಚಳಿ ಅನಿಸಿದರೂ 200-300 ರೂ. ಕೊಟ್ಟಾದರೂ ತಮ್ಮ ಇಷ್ಟದ ಐಸ್​ಕ್ರೀಮ್​ ತಿನ್ನುತ್ತಾರೆ. ಆದರೆ, ಇಲ್ಲೊಂದು ವಿಚಾರ ಸದ್ಯ ಐಸ್​ಕ್ರೀಮ್​ ಪ್ರಿಯರನ್ನು ಅಕ್ಷರಶಃ ಅಚ್ಚರಿಗೆ ದೂಡಿದೆ.

ನಮ್ಮ ಕಾಲಘಟ್ಟಗಳಲ್ಲಿ ಒಂದು ಐಸ್​ಕ್ರೀಮ್​ ಅಥವಾ ಐಸ್​ ಕ್ಯಾಂಡಿಗಳು 2ರಿಂದ 3 ರೂ. ಇತ್ತು. ಆದರೆ, ಅದೇ ಇಂದಿನ ಕಾಲಕ್ಕೆ 50 ರೂ. ನಿಂದ 1000 ರೂ. ಮೌಲ್ಯದ ಐಸ್​ಕ್ರೀಮ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಬ್ರ್ಯಾಂಡ್​ ಮೌಲ್ಯಗಳ ಮೇಲೆ ಆಧಾರಿಸಿದರೆ, ಇದರ ಬೆಲೆಯು ಸಾವಿರಾರು ರೂ.ಗೂ ಅಧಿಕ ಎಂಬುದು ಇನ್ನೊಂದು ವಿಷಯ. ಆದರೆ, ಇಲ್ಲೊಂದು ಐಸ್​ಕ್ರೀಮ್​ಗೆ 5.5 ಲಕ್ಷ ರೂ. ಎಂದರೆ ನಂಬುತ್ತೀರಾ? ಖಂಡಿತ ನಂಬಲೇಬೇಕು ಬಿಡಿ. ಕಾರಣ, ಇದು ಅದಾಗಲೇ ಗಿನ್ನೆಸ್​ ವಿಶ್ವ ದಾಖಲೆ ಪುಸ್ತಕ ಕೂಡ ಸೇರಿದೆ.

ಜಪಾನಿನ ಸೆಲ್ಟೋ ಕಂಪನಿ ತಯಾರಿಸಿದ 'ಬೈಕುಯಾ' ಐಸ್ ಕ್ರೀಂ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೀನ 'ಫ್ಯೂಷನ್' ಅಡುಗೆ ಶೈಲಿಗೆ ಹೆಸರುವಾಸಿಯಾದ ರಿವಿ ಎಂಬ ರೆಸ್ಟೋರೆಂಟ್‌ನ ಮುಖ್ಯ ಶೆಫ್​ ತಡಯೋಶಿ ಯಮಡಾ ಇದನ್ನು ಮಾಡಿದ್ದಾರೆ. ಇದು ಇಟಲಿಯ ಆಲ್ಬಾ ಪ್ರದೇಶದ ಬೆಲೆಬಾಳುವ ಬಿಳಿ ಟ್ರಫಲ್ಸ್, ಖಾದ್ಯ ಚಿನ್ನದ ಎಲೆಗಳು, ಪಾರ್ಮಿಜಿಯಾನೊ ರೆಗ್ಗಿಯಾನೊ ಚೀಸ್ ಮತ್ತು 'ಸೇಕ್ ಲೀಸ್' ನಂತಹ ಅಪರೂಪದ ಪದಾರ್ಥಗಳನ್ನು ಬಳಸಿಕೊಂಡು ಮಾಡಲಾಗಿದೆ ಎಂದು ವಿವರಿಸಿಲಾಗಿದೆ.

Also Read
2027ರಲ್ಲಿ ಚಿನ್ನದ ಬೆಲೆ... ಬಾಬಾ ವಂಗಾ ನುಡಿದ ಮತ್ತೊಂದು ಸ್ಪೋಟಕ ಭವಿಷ್ಯವಾಣಿ ಮೇಲೆ ಎಲ್ಲರ ಕಣ್ಣು​ | Baba Vanga
Expensive Ice Cream

ಈ ಐಸ್ ಕ್ರೀಂನ ಬೆಲೆ 873,400 ಜಪಾನೀಸ್ ಯೆನ್. ಅದೇ ಭಾರತೀಯ ಕರೆನ್ಸಿಯಲ್ಲಿ ಸುಮಾರು 5.5 ಲಕ್ಷ ರೂ. ಇದು ಸಿಕ್ಕಾಪಟ್ಟೆ ದುಬಾರಿ ಐಸ್​ಕ್ರೀಮ್​ ಆಗುತ್ತಿರಲಿಲ್ಲ. ಆದರೆ, ಈ ಪಾಟಿ ದರ ಹೆಚ್ಚಾಗಲು ಮುಖ್ಯ ಕಾರಣ, ಅದರಲ್ಲಿ ಬಳಸಿರುವ ಬಿಳಿ ಟ್ರಫಲ್. ಇದರ ಬೆಲೆ ಕೆಜಿಗೆ ಸುಮಾರು 12 ಲಕ್ಷ ರೂ ಎನ್ನಲಾಗಿದೆ. ಒಂದು ಐಸ್​ಕ್ರೀಮ್​ನಲ್ಲಿ ಉತ್ತಮ ಗುಣಮಟ್ಟದ ಜಪಾನೀಸ್ ಮತ್ತು ಯುರೋಪಿಯನ್ ಪದಾರ್ಥಗಳ ಸಂಯೋಜನೆಯು 'ಬೈಕುಯಾ'ದ ವಿಶೇಷತೆಯಾಗಿದೆ. ಇದಕ್ಕಾಗಿ, ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ವಿವಿಧ ಪ್ರಯೋಗಗಳನ್ನು ನಡೆಸಿ, ಪರಿಪೂರ್ಣ ಪರಿಮಳವನ್ನು ಸೃಷ್ಟಿಸಲಾಗಿದೆ ಎಂದು ಸೆಲಾಟೊ ಕಂಪನಿ ಹೇಳಿರುವುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net