ಗ್ರೀನ್‌ಲ್ಯಾಂಡ್ ಆಕ್ರಮಣ ಕಾನೂನುಬಾಹಿರ: ಟ್ರಂಪ್ ಆದೇಶಕ್ಕೆ ಅಮೆರಿಕ ಸೇನಾಪಡೆಗಳ ವಿರೋಧವೇಕೆ? Donald Trump
ಸಾಂದರ್ಭಿಕ ಚಿತ್ರ
Published on:
Copied
Follow Us
ಅಮೆರಿಕ: ಗ್ರೀನ್‌ಲ್ಯಾಂಡ್ ಮೇಲೆ ಆಕ್ರಮಣಕ್ಕೆ ಯೋಜನೆಯನ್ನು ಸಿದ್ಧಪಡಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ವಿಶೇಷ ಪಡೆಗಳ ಕಮಾಂಡರ್‌ಗಳಿಗೆ ಆದೇಶಿಸಿದ್ದು, ಆದರೆ ಹಿರಿಯ ಮಿಲಿಟರಿ ವ್ಯಕ್ತಿಗಳು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷರು ಜಂಟಿ ವಿಶೇಷ ಕಾರ್ಯಾಚರಣೆ ಕಮಾಂಡ್ (ಜೆಎಸ್‌ಒಸಿ) ಗೆ ಆಕ್ರಮಣ ಯೋಜನೆಯನ್ನು ಸಿದ್ಧಪಡಿಸುವಂತೆ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ ಆದರೆ ಇದು ಕಾನೂನುಬಾಹಿರವಾಗಿರುತ್ತದೆ ಎಂದು ಹಿರಿಯ ಮಿಲಿಟರಿ ಅಧಿಕಾರಿಗಳು ಇದನ್ನು ವಿರೋಧಿಸುತ್ತಿದ್ದಾರೆ.
ರಷ್ಯಾದ ಹಡಗುಗಳನ್ನು ತಡೆಹಿಡಿಯುವುದು ಅಥವಾ ಇರಾನ್ ಮೇಲೆ ದಾಳಿ ಈ ರೀತಿಯ ಕಡಿಮೆ ವಿವಾದಾತ್ಮಕ ಕ್ರಮಗಳ ಬಗ್ಗೆ ಟ್ರಂಪ್ ಗಮನ ಹರಿಸುವುದು ಉತ್ತಮ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಸೆರೆಹಿಡಿಯುವ ಕಾರ್ಯಾಚರಣೆಯ ಯಶಸ್ಸಿನ ನಂತರ ರಾಜಕೀಯ ಸಲಹೆಗಾರ ಸ್ಟೀಫನ್ ಮಿಲ್ಲರ್ ನೇತೃತ್ವದಲ್ಲಿ ಗ್ರೀನ್ಲ್ಯಾಂಡ್ನ್ನು ವಶಕ್ಕೆ ತೆಗೆದುಕೊಳ್ಳುವು ಯೋಜನೆ ರೂಪಿಸಲಾಗುತ್ತಿದೆ. ರಷ್ಯಾ ಅಥವಾ ಚೀನಾ ಯಾವುದೇ ಕ್ರಮ ಕೈಗೊಳ್ಳುವ ಮೊದಲು ದ್ವೀಪ (ಗ್ರೀನ್‌ಲ್ಯಾಂಡ್) ವನ್ನು ವಶಪಡಿಸಿಕೊಳ್ಳುವ ಗುರಿಯನ್ನು ಟ್ರಂಪ್ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ರಿಟಿಷ್ ರಾಜತಾಂತ್ರಿಕರ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅಮೆರಿಕದಲ್ಲಿ ನಡೆಯಲಿರುವ ಮಧ್ಯಾವಧಿ ಚುನಾವಣೆಗೆ ಮುನ್ನ ಮತದಾರರ ಗಮನವನ್ನು ಅಮೆರಿಕದ ಆರ್ಥಿಕ ಹಿಂಜರಿತದಿಂದ ಬೇರೆಡೆಗೆ ಸೆಳೆಯಲು ಟ್ರಂಪ್ ರೂಪಿಸುತ್ತಿರುವ ತಂತ್ರವಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ತೈಲ ಮತ್ತು ಅನಿಲ ಕಾರ್ಯನಿರ್ವಾಹಕರೊಂದಿಗೆ ಶ್ವೇತಭವನದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಖನಿಜ-ಸಮೃದ್ಧ ದ್ವೀಪವಾಗಿರುವ ಗ್ರೀನ್‌ಲ್ಯಾಂಡ್ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅವಶ್ಯಕತೆಯಾಗಿದೆ. ರಾಜತಾಂತ್ರಿಕವಾಗಿ ಖರೀದಿ ಸಾಧ್ಯವಾಗದಿದ್ದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ನಾವು ಈ ರೀತಿ ಮಾಡದಿದ್ದರೆ, ರಷ್ಯಾ ಅಥವಾ ಚೀನಾ ಗ್ರೀನ್ಲ್ಯಾಂಡ್ನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಕಾರ್ಯನಿರ್ವಾಹಕರಿಗೆ ಹೇಳಿದರು. ಹಾಗೆಯೇ ನಾವು ರಷ್ಯಾ ಅಥವಾ ಚೀನಾವನ್ನು ನೆರೆಯ ರಾಷ್ಟ್ರವಾಗಿ ಹೊಂದಲು ಇಷ್ಟ ಪಡುವುದಿಲ್ಲ ಎಂದರು.
ಈ ಪ್ರಸ್ತಾಪವು ತೀವ್ರ ಪ್ರತಿರೋಧವನ್ನು ಎದುರಿಸಿದ್ದು, ಗ್ರೀನ್ಲ್ಯಾಂಡ್ನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಅಮೆರಿಕ ಮಾಡುವ ಯಾವುದೇ ಪ್ರಯತ್ನ ನ್ಯಾಟೋ ಸಂಘಟನೆಯ ಅಂತ್ಯವಾಗಲಿದೆ ಎಂದು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಎಚ್ಚರಿಸಿದ್ದಾರೆ,(ಏಜನ್ಸೀಸ್).