ಖಮೇನಿ ಮೃತಪಟ್ಟ ಎರಡು ದಿನಗಳ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟಿರುವ ಡೊನಾಲ್ಡ್ ಟ್ರಂಪ್, ಇರಾನ್‌ನ ಸುಪ್ರೀಂ ಲೀಡರ್ ನನ್ನ ಕೊಲ್ಲಲು ಎರಡು ಬಾರಿ ಸಂಚು ರೂಪಿಸಿದ್ದ. ಆದ್ರೆ, ಅವನಿಗಿಂತ ಮೊದಲೇ ನಾನು ಆತನನ್ನು ಮುಗಿಸಿರುವೆ ಎಂದು ಹೇಳಿದ್ದಾಗಿ ಎಬಿಸಿ ನ್ಯೂಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಸಲಿಗೆ, ಈ ವಿಷಯವನ್ನು ಟ್ರಂಪ್, ಎಬಿಸಿ ನ್ಯೂಸ್‌ನ ಪ್ರಮುಖ ವಾಷಿಂಗ್ಟನ್ ವರದಿಗಾರ ಜೊನಾಥನ್ ಕಾರ್ಲ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.