Google Alert: ವೆನೆಜುವೆಲಾದಲ್ಲಿ ಸಂಭವಿಸಿರುವ ಎರಡು ಪ್ರತ್ಯೇಕ ಪ್ರಬಲ ಭೂಕಂಪಗಳು ಸದ್ಯ ಜನರನ್ನು ಅಕ್ಷರಶಃ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. 39 ಸೆಕೆಂಡ್ಗಳಲ್ಲಿ ಬಿರುಕು ಬಿಟ್ಟ ಭೂಮಿ, 30ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿದೆ. ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದ್ದು, ಮೃತರ ಸಂಖ್ಯೆ 10 ಸಾವಿರ ಗಡಿಯನ್ನು ದಾಟಬಹುದು ಎನ್ನಲಾಗಿದೆ. ಈ ಮಧ್ಯೆ, ಗೂಗಲ್ ಕೊಟ್ಟ ಮುನ್ನೆಚ್ಚರಿಕೆ ಏಕೆ ಯಾರೊಬ್ಬರಿಗೂ ತಿಳಿಯಲಿಲ್ಲ ಎಂಬ ಪ್ರಶ್ನೆ ಸದ್ಯ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.