ಅಂದಹಾಗೆ, 2007 ರಲ್ಲಿ ಜನಿಸಿದ ಕೈಲಿ ಹಾಟಲ್ ಅವರು ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಕಾನ್ವೋ ವಿಡಿಯೋ ರಿಲೇ ಸರ್ವಿಸ್' ಆ್ಯಪ್ನ ಜಾಹೀರಾತಿನಲ್ಲಿ ನಟಿಸಿದ್ದ ಅವರ ಪ್ರತಿಭೆಯನ್ನು ಗಮನಿಸಿದ ಪ್ರಸಿದ್ಧ ಕ್ಯಾಸ್ಟಿಂಗ್ ಡೈರೆಕ್ಟರ್ ಸಾರಾ ಹ್ಯಾಲಿ ಫಿನ್, ಗಾಡ್ಜಿಲ್ಲಾ ಸರಣಿಯ ಸಿನಿಮಾಗಳಲ್ಲಿ 'ಜಿಯಾ' ಪಾತ್ರ ಸಿಗುವಂತೆ ಮಾಡಿದರು. 2024 ರಲ್ಲಿ 'ಕ್ರಾನ್' ಮ್ಯಾಗಜಿನ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದ ಕೈಲಿ, "ಪಾತ್ರಕ್ಕೆ ನಾನು ಸೂಕ್ತವಾಗಿದ್ದೆ ಎಂಬ ಕಾರಣಕ್ಕೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ದರು. ಅವರು ಪ್ರತಿ ದೃಶ್ಯವನ್ನು ನನಗೆ ವಿವರಿಸಿದರೆ, ನನ್ನ ಹೆತ್ತವರು ಚಿತ್ರಕಥೆಯನ್ನು ಅರ್ಥಮಾಡಿಕೊಳ್ಳಲು ನೆರವಾದರು ಎಂದು ತಿಳಿಸಿದ್ದರು.