ಸದ್ಯ ಇರಾನ್‌ನ ಪರಮಾಣು ಕಾರ್ಯಕ್ರಮದ ಮಿತಿಗಳ ಕುರಿತು ಅಮೆರಿಕ ಒತ್ತಾಯಿಸುತ್ತಿದ್ದರೆ, ಇರಾನ್ ಮಾತ್ರ ತನ್ನದು ಶಾಂತಿಯುತ ಉದ್ದೇಶದ ಪರಮಾಣು ಯೋಜನೆ ಎಂದು ವಾದಿಸುತ್ತಿದೆ. ಈ ರಾಜತಾಂತ್ರಿಕ ಜಗ್ಗಾಟದ ನಡುವೆಯೇ ನಡೆದಿರುವ ಈ ಮಿಲಿಟರಿ ದಾಳಿ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದು, ಕಚ್ಚಾ ತೈಲ ಮಾರುಕಟ್ಟೆಯ ಮೇಲೆಯೂ ಇದರ ಪ್ರಭಾವ ಬೀರುವ ಆತಂಕ ಎದುರಾಗಿದೆ,(ಏಜೆನ್ಸೀಸ್).