1 ಬಿಲಿಯನ್ ಡಾಲರ್ ಕೊಡಿ, ಸುಂದರ ಯುವತಿಯರನ್ನು ಕಳುಹಿಸಿ! ಟರ್ಕಿ ದೇಶಕ್ಕೆ ವಿಚಿತ್ರ ಡಿಮ್ಯಾಂಡ್ ಇಟ್ಟ ಉಗಾಂಡಾ ಮಿಲಿಟರಿ ಮುಖ್ಯಸ್ಥ! Muhoozi Kainerugaba

1 ಬಿಲಿಯನ್ ಡಾಲರ್ ಹಣ ಮತ್ತು ಸುಂದರ ಯುವತಿಯರನ್ನು ಕಳುಹಿಸಿ: ಮುಹೂಜಿ ಕೈನೆರುಗಾಬಾ
1 ಬಿಲಿಯನ್ ಡಾಲರ್ ಹಣ ಮತ್ತು ಸುಂದರ ಯುವತಿಯರನ್ನು ಕಳುಹಿಸಿ: ಮುಹೂಜಿ ಕೈನೆರುಗಾಬಾ
Published on

ಪ್ರಮುಖ ಮುಖ್ಯಾಂಶಗಳು

  • 1 ಬಿಲಿಯನ್ ಡಾಲರ್ ಹಣ ಮತ್ತು ಸುಂದರ ಯುವತಿಯರನ್ನು ಕಳುಹಿಸಿ
  • ಟರ್ಕಿ ದೇಶಕ್ಕೆ ಉಗಾಂಡಾ ಮಿಲಿಟರಿ ಮುಖ್ಯಸ್ಥನ ವಿಚಿತ್ರ ವಾರ್ನಿಂಗ್​
  • ಈ ಮೊದಲು ಮೆಲೋನಿ ಹತ್ತಿರ 100 ಹಸುವಿನ ಬೇಡಿಕೆ ಇಟ್ಟಿದ್ದ ಮುಹೂಜಿ ಕೈನೆರುಗಾಬಾ
ಉಗಾಂಡಾ: ಒಂದೆಡೆ ಮಧ್ಯಪ್ರಾಚ್ಯದಲ್ಲಿ ಇರಾನ್​, ಅಮೆರಿಕ ಹಾಗೂ ಇಸ್ರೇಲ್​ ನಡುವೆ ಸಂಘರ್ಷ ಮತ್ತು ಶಾಂತಿ ಒಪ್ಪಂದದ ಮಾತುಕತೆ ನಡೆಯುತ್ತಿದ್ದರೆ, ಇತ್ತ ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಜಿ ಕೈನೆರುಗಾಬಾ (Muhoozi Kainerugaba) ಟರ್ಕಿ ದೇಶಕ್ಕೆ ವಿಚಿತ್ರವಾದ ವಾರ್ನಿಂಗ್​ ನೀಡಿದ್ದಾನೆ.

ಒಂದು ಬಿಲಿಯನ್​ ಡಾಲರ್​; ಸುಂದರ ಯುವತಿಯರನ್ನು ರವಾನಿಸಿ

ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಪುತ್ರ ಹಾಗೂ ಉಗಾಂಡಾದ ಮಿಲಿಟರಿ ಮುಖ್ಯಸ್ಥನಾಗಿರುವ ಮುಹೂಜಿ ಕೈನೆರುಗಾಬಾ ಟರ್ಕಿ ದೇಶಕ್ಕೆ, ನಮಗೆ 30 ದಿನದ ಒಳಗಾಗಿ ಒಂದು ಬಿಲಿಯನ್​ ಡಾಲರ್​ ಜೊತೆಗೆ ನಿಮ್ಮ ದೇಶದ ಸುಂದರ ಯುವತಿಯರನ್ನು ನನ್ನ ಬಳಿ ಕಳುಹಿಸಿ, ಅವರನ್ನು ನನ್ನ ಹೆಂಡತಿಯರನ್ನಾಗಿ ಮಾಡಿಕೊಳ್ಳುತ್ತೆನೆ.
ಇದನ್ನು ನೀವು ಒಪ್ಪದೆ ಹೋದರೆ ನಮ್ಮ ಮತ್ತು ನಿಮ್ಮ ದೇಶದ ರಾಜತಾಂತ್ರಿಕ ಸಂಬಂಧ ಮುರಿದು ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ. ನಮ್ಮೊಂದಿಗೆ ಹೊಂದಿರುವ ಮೂಲಸೌಕರ್ಯ ಹಾಗೂ ಬಂದರು ಒಪ್ಪಂದದಿಂದ ಟರ್ಕಿ ಅಪಾರವಾದ ಲಾಭಗಳಿಸುತ್ತಿದೆ ಹೀಗಾಗಿ ನಾನು ಒಂದು ಬಿಲಿಯನ್​ ಡಾಲರ್​ನ್ನು ಕೇಳುತ್ತಿದ್ದೆನೆ ಎಂದು ಅವರು ಟ್ವಿಟ್​ ಮಾಡಿದ್ದಾರೆ.
ಹಾಗೆಯೇ ಹಣದ ಜೊತೆಗೆ ಆ ದೇಶದ ಅತ್ಯಂತ ಸುಂದರ ಯುವತಿಯನ್ನು ನಾನು ನನ್ನ ಹೆಂಡತಿಯಾಗಿ ಸ್ವೀಕರಿಸ ಬಯಸಿದ್ದೆನೆ. ನನ್ನ ಈ ಷರತ್ತನ್ನು ಟರ್ಕಿ ಒಪ್ಪಿಕೊಳ್ಳದೆ ಹೋದರೆ, ನಮ್ಮ-ಅವರ ರಾಜತಾಂತ್ರಿಕ ಒಪ್ಪಂದ ಕೊನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ತರಾವರಿ ಟ್ವಿಟ್​ ಮಾಡುವ ಮುಹೂಜಿ ಕೈನೆರುಗಾಬಾ

ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಜಿ ಕೈನೆರುಗಾಬಾ ಅಂತರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ಚಿತ್ರ ವಿಚಿತ್ರ ಟ್ವಿಟ್​ ಮೂಲಕವೇ ಖ್ಯಾತಿಗಳಿಸಿದ್ದಾರೆ. ಇವರು 2022 ರಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ 100 ಅಂಕೋಲೆ ಹಸುಗಳನ್ನು ನಮ್ಮ ದೇಶಕ್ಕೆ ಕಳುಹಿಸಬೇಕು, ಇಲ್ಲದಿದ್ದರೆ ನಮ್ಮ ಒಂದು ಲಕ್ಷ ಸೈನಿಕರು ರೋಮ್​ನ್ನು ವಶಕ್ಕೆ ಪಡೆಯುತ್ತಾರೆಂದು ಬೆದರಿಕೆ ಹಾಕಿದ್ದರು.
2024 ರಲ್ಲಿ ನೈರೋಬಿ ಮೇಲೆ ದಾಳಿ ಮಾಡುವುದಾಗಿ ಕೀನ್ಯಾ ಸರ್ಕಾರಕ್ಕೆ ಬೆದರಿಕೆ ಒಡ್ಡಿದ್ದರು. ಅದರೆ ಇವರ ಯಾವ ಬೆದರಿಕೆಗಳು ಕಾರ್ಯರೂಪಕ್ಕೆ ಬರದ ಕಾರಣ ಇವರನ್ನು ಟ್ಚಿಟರ್​ ಜನರಲ್​ ಎಂದು ಕರೆಯುತ್ತಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net