ಶಾಪಿಂಗ್​ ಮೂಡ್​ಗೆ ಬಂದ ಗಜರಾಜ: ಅಂಗಡಿಗೆ ನುಗ್ಗಿ ತನ್ನಿಷ್ಟದ ತಿಂಡಿ ಸವಿದ ಆನೆ; ವಿಡಿಯೋ ವೈರಲ್​! Elephant Viral Video

 ಆನೆಯ ಶಾಪಿಂಗ್ ವಿಡಿಯೋ (Elephant Viral Video)
ಆನೆಯ ಶಾಪಿಂಗ್ ವಿಡಿಯೋ (Elephant Viral Video)
Published on
ಥೈಲ್ಯಾಂಡ್: ಸಾಮಾನ್ಯವಾಗಿ ನಾವು ಅಂಗಡಿಗೆ ಹೋಗಿ ದಿನಸಿ ಸಾಮಾನು ತರುತ್ತೇವೆ. ಆದರೆ, ಇಲ್ಲೊಂದು ಆನೆ ತಾನೇ ಸ್ವತಃ ಸ್ಟೋರ್ ಒಳಗೆ ನುಗ್ಗಿ, ತನಗಿಷ್ಟ ಬಂದ ತಿಂಡಿಗಳನ್ನು ಆಯ್ದುಕೊಂಡು ತಿನ್ನುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್ (Elephant Viral Video) ​ಆಗುತ್ತಿದೆ.

ಅಂಗಡಿಯೇ ಆನೆಯ ಅಡ್ಡ!

ಥೈಲ್ಯಾಂಡ್‌ನ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಒಂದು ಸಣ್ಣ ಕನ್ವೀನಿಯನ್ಸ್ ಸ್ಟೋರ್‌ಗೆ ಈ ಬೃಹತ್ ಕಾಡು ಆನೆ ಎಂಟ್ರಿ ಕೊಟ್ಟಿದೆ. ಬಾಗಿಲು ತೆರೆದಿರುವುದನ್ನು ಕಂಡ ಆನೆ, ಮಾರುಕಟ್ಟೆಗೆ ಬಂದ ಗಿರಾಕಿಯಂತೆ ಒಳಗೆ ಬಂದಿದೆ.
ಅಂಗಡಿ ಒಳಗೆ ಬಂದ ಆನೆ, ತನ್ನ ಸೊಂಡಿಲನ್ನು ಬಳಸಿ ಕಪಾಟಿನಲ್ಲಿದ್ದ ಸ್ಯಾಂಡ್‌ವಿಚ್ ಹಾಗೂ ಬಾಳೆಹಣ್ಣುಗಳನ್ನು ಎತ್ತಿಕೊಂಡು, ನಿಂತಲ್ಲೇ ಒಂದೊಂದೇ ತಿಂಡಿಗಳನ್ನು ಸವಿಯಲು ಆರಂಭಿಸಿದೆ. ಆನೆಯ ಈ ಸ್ನ್ಯಾಕ್ಸ್ ಟೈಮ್ ನೋಡುಗರಿಗೆ ಆಶ್ಚರ್ಯ ತಂದಿದೆ.

ಪ್ಲೈ ಬಿಯಾಂಗ್ ಲೆಕ್: ಲೋಕಲ್ ಸೆಲೆಬ್ರಿಟಿ!

ಸ್ಥಳೀಯರ ಪ್ರಕಾರ, ಈ ಆನೆಯ ಹೆಸರು ಪ್ಲೈ ಬಿಯಾಂಗ್ ಲೆಕ್. ಈತ ಆ ಭಾಗದಲ್ಲಿ ದೊಡ್ಡ ಸೆಲೆಬ್ರಿಟಿಯಾಗಿದ್ದು, ಹೊಟ್ಟೆ ಹಸಿದಾಗಲೆಲ್ಲಾ ಕಾಡಿನಿಂದ ನಾಡಿಗೆ ಬಂದು ಜನವಸತಿ ಪ್ರದೇಶಗಳಲ್ಲಿ ಅಲೆದಾಡುವುದು ಇವನಿಗೆ ಹವ್ಯಾಸವಂತೆ.
ಈ ಬಾರಿಯ ಅವನ ಈ ಶಾಪಿಂಗ್ ಮೋಜಿನಿಂದ ಸುಮಾರು 2,000 ರೂಪಾಯಿಗಳಿಗೂ ಅಧಿಕ ಮೌಲ್ಯದ ಹಾನಿಯಾಗಿದೆ. ಆದರೆ, ಅಂಗಡಿ ಮಾಲೀಕರು ಗಾಬರಿಯಾಗಲಿಲ್ಲ. ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ಮಧ್ಯಪ್ರವೇಶಿಸಿ ಆನೆ ತಿಂದ ತಿಂಡಿಗಳ ಬಿಲ್ ಅನ್ನು ಪಾವತಿಸಿ ಎಲ್ಲವನ್ನೂ ಸುಸೂತ್ರವಾಗಿ ಬಗೆಹರಿಸಿದೆ.

ಬಂಡಿ ಇಲ್ಲ, ಕ್ಯೂ ಇಲ್ಲ, ಬಿಲ್ ಟೆನ್ಷನ್ ಇಲ್ಲ!

ಸ್ಥಳೀಯರೊಬ್ಬರು ಹೇಳುವಂತೆ, ಬಿಯಾಂಗ್ ಲೆಕ್ ತುಂಬಾ ಶಾಂತ ಪ್ರಭಾವದ ಆನೆ. ಅವನಿಗೆ ತಿಂಡಿಗಳು ಎಲ್ಲಿರುತ್ತವೆ ಎಂಬುದು ಚೆನ್ನಾಗಿ ಗೊತ್ತು. ಅವನಿಗೆ ಶಾಪಿಂಗ್ ಮಾಡಲು ಯಾವುದೇ ಬಂಡಿ (Cart) ಅಥವಾ ಲೈನ್ ಬೇಕಾಗಿಲ್ಲ. ತನಗೆ ಬೇಕಾದ್ದನ್ನು ತೆಗೆದುಕೊಂಡು ಸೌಮ್ಯವಾಗಿ ಹೊರಬರುತ್ತಾನೆ ಎನ್ನುವುದು ಅಲ್ಲಿಯ ಜನರ ಅಭಿಪ್ರಾಯವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net