ನ್ಯೂಯಾರ್ಕ್: ಇರಾನ್ ಹಾಗೂ ಲೆಬನಾನ್ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Trump-Netanyahu Rift) ನಡುವಿನ ರಾಜತಾಂತ್ರಿಕ ಬಿರುಕು ಮೊದಲ ಬಾರಿಗೆ ಬಹಿರಂಗವಾಗಿದೆ. ಫೋನ್ ಕರೆಯಲ್ಲಿ ತಾವು ನೆತನ್ಯಾಹು ಅವರನ್ನು ಹುಚ್ಚ ಎಂದು ಕರೆದಿದ್ದಾಗಿ ಟ್ರಂಪ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರೆ, ನೆತನ್ಯಾಹು ಕೂಡ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇರುವುದನ್ನು ಸ್ಪಷ್ಟಪಡಿಸಿದ್ದು, ಜಾಗತಿಕ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.