ಪಂದ್ಯದ ಆರಂಭದಲ್ಲಿ ಜೋರಾದ ಗಾಳಿ ಮತ್ತು ಫೈನಲ್ ಪಂದ್ಯದ ಒತ್ತಡದಿಂದಾಗಿ ಇಬ್ಬರೂ ಆಟಗಾರ್ತಿಯರು ಸತತ ಸರ್ವ್ ಬ್ರೇಕ್ ಮಾಡಿಕೊಂಡರು. ಆದರೆ, ವಿಶ್ವ ರ್ಯಾಂಕಿಂಗ್ನಲ್ಲಿ 114ನೇ ಸ್ಥಾನದಲ್ಲಿದ್ದ ಚ್ವಾಲಿನ್ಸ್ಕಾ ಅವರಿಗೆ ಮೈದಾನದಲ್ಲಿದ್ದ 15,000ಕ್ಕೂ ಹೆಚ್ಚು ಪ್ರೇಕ್ಷಕರು ಭಾರಿ ಬೆಂಬಲ ನೀಡಿದರು. ಅದರೆ, ಅದ್ಭುತ ಮಾನಸಿಕ ಸ್ಥಿರತೆ ಪ್ರದರ್ಶಿಸಿದ ಆಂಡ್ರೀವಾ ಸತತ 9 ಗೇಮ್ಗಳನ್ನು ಗೆದ್ದು, ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಪಡೆದರು.