ಅಂದಹಾಗೆ, ಸಾಮಾನ್ಯವಾಗಿ ಮೂನ್ ಡಾಗ್ ಅಥವಾ ಅಣಕು ಚಂದ್ರ ಎಂದು ಕರೆಯಲ್ಪಡುವ ಈ ವಿದ್ಯಮಾನವು ಒಂದು ಖಗೋಳ ಘಟನೆಯಲ್ಲ, ಬದಲಾಗಿ ಚಂದ್ರನ ಬೆಳಕಿನ ವಕ್ರೀಭವನದಿಂದ ಉಂಟಾಗುವ ಒಂದು ದೃಷ್ಟಿ ಭ್ರಮೆಯಾಗಿದೆ. ಹೌದು, ಚಂದ್ರನಿಂದ ಬರುವ ಬೆಳಕು ತೆಳುವಾದ ಹಾಗೂ ಎತ್ತರದಲ್ಲಿರುವ ಸಿರಸ್ ಅಥವಾ ಸಿರೋಸ್ಟ್ರಾಟಸ್ ಮೋಡಗಳ ಮೂಲಕ ಹಾದುಹೋದಾಗ ಪ್ಯಾರಾಸೆಲೆನೆ ರೂಪುಗೊಳ್ಳುತ್ತದೆ. ಅಂದಹಾಗೆ, ಸಿರಸ್ ಅಂದರೆ, ಭೂಮಿಯಿಂದ ಸುಮಾರು 8,000 ರಿಂದ 12,000 ಮೀಟರ್ ಎತ್ತರದಲ್ಲಿ ರೂಪುಗೊಳ್ಳುವ ತೆಳ್ಳಗಿನ, ಗರಿಗರಿಯಂತಹ ಬಿಳಿ ಮೋಡಗಳಾಗಿದ್ದು, ಇದು ಹಿಮದ ಕಣಗಳಿಂದ ಮಾಡಲ್ಪಟ್ಟಿವೆ. ಸಿರಸ್ ಮೂಲಕ ಬೆಳಕು ಬಾಗಿದಾಗ, ಚಂದ್ರನ ಎರಡೂ ಬದಿಗಳಲ್ಲಿ ಪ್ರಕಾಶಮಾನವಾದ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕೆಲವೊಮ್ಮೆ ಆಕಾಶದಲ್ಲಿ ಬಹು ಚಂದ್ರ ನೋಟವನ್ನು ನೀಡುತ್ತದೆ. ಅಂದರೆ, ಚಂದ್ರನ ಡೂಪ್ಲಿಕೇಟ್ಗಳು ಸೃಷ್ಟಿಯಾಗುತ್ತವೆ. ಇದನ್ನು ಬೆಳಕಿನ ಆಟ ಎನ್ನಬಹುದು.