ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್‌ನಲ್ಲಿ ನೀರೊಳಗಿನ ಗುಹೆಯೊಳಗೆ ಸಿಲುಕಿ ಐವರು ಸಂಶೋಧಕರು ದುರಂತ ಸಾವು! Underwater Cave

ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್‌ನಲ್ಲಿ ನೀರೊಳಗಿನ ಗುಹೆಯೊಳಗೆ ಸಿಲುಕಿ ಐವರು ಸಂಶೋಧಕರು ದುರಂತ ಸಾವು! Underwater Cave
ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್‌ನಲ್ಲಿ ನೀರೊಳಗಿನ ಗುಹೆಯೊಳಗೆ ಸಿಲುಕಿ ಐವರು ಸಂಶೋಧಕರು ದುರಂತ ಸಾವು! Underwater Cave
Published on

ಪ್ರಮುಖ ಮುಖ್ಯಾಂಶಗಳು

  • ಮಾಲ್ಡೀವ್ಸ್​ನಲ್ಲಿ ನೀರೊಳಗಿನ ಗುಹೆಯೊಂದನ್ನು ಅನ್ವೇಷಿಸುತ್ತಿದ್ದಾಗ ಸಂಭವಿಸಿದ ಭೀಕರ ಘಟನೆ
  • ದುರಂತ ಅಂತ್ಯ ಕಂಡ ಇಟಲಿಯ ಐದು ಮಂದಿ ಸಂಶೋಧಕರು
  • ಐವರಲ್ಲಿ ಕೇವಲ ಒಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ
  • ಉಳಿದವರ ದೇಹಗಳ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ
Underwater Cave : ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಜನಪ್ರಿಯ ಪ್ರವಾಸಿ ತಾಣ ಮಾಲ್ಡೀವ್ಸ್‌ನಲ್ಲಿ ನೀರೊಳಗಿನ ಗುಹೆಯೊಂದನ್ನು ಅನ್ವೇಷಿಸುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಇಟಲಿಯ ಐದು ಮಂದಿ ಸಂಶೋಧಕರು ದುರಂತ ಅಂತ್ಯ ಕಂಡಿದ್ದಾರೆ.
ಮೃತ ದುರ್ದೈವಿಗಳನ್ನು ಮೋನಿಕಾ ಮೊಂಟೆಫಾಲ್ಕೋನ್, ಜಾರ್ಜಿಯಾ ಸೊಮಾಕಲ್, ಫೆಡೆರಿಕೊ ಗುವಾಲ್ಟೇರಿ, ಮುರಿಯೆಲ್ ಒಡೆನಿನೊ ಮತ್ತು ಜಿಯಾನ್ಲುಕಾ ಬೆನೆಡೆಟ್ಟಿ ಎಂದು ಗುರುತಿಸಲಾಗಿದೆ.
ಸದ್ಯಕ್ಕೆ ಕೇವಲ ಒಬ್ಬರ ಮೃತದೇಹವನ್ನು ಮಾತ್ರ ಹೊರತೆಗೆಯಲಾಗಿದ್ದು, ಉಳಿದವರ ದೇಹಗಳ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಆದರೆ, ಪ್ರಸ್ತುತ ಆ ಭಾಗದಲ್ಲಿರುವ ಹವಾಮಾನ ವೈಪರೀತ್ಯವು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಭಾರಿ ಸವಾಲಾಗಿ ಪರಿಣಮಿಸಿದೆ.
ಮಾಲ್ಡೀವ್ಸ್‌ನ ವಾವು ಅಟಾಲ್ ಬಳಿ ಸುಮಾರು 50 ಮೀಟರ್ ಆಳದ ಸಮುದ್ರದ ಗುಹೆಯನ್ನು ಅನ್ವೇಷಿಸುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಈ ಸಂಶೋಧನಾ ತಂಡವು 'ಡ್ಯೂಕ್ ಆಫ್ ಯೋಕ್' ಎಂಬ ಬೋಟ್‌ನಲ್ಲಿ ಸಮುದ್ರ ಪ್ರಯಾಣ ಕೈಗೊಂಡಿತ್ತು. ದೀರ್ಘಕಾಲದವರೆಗೆ ಹಿಂದಿರುಗದೇ ಇದ್ದಾಗ ನಡೆಸಲಾದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದೆ.
ಈ ದುರಂತದಲ್ಲಿ ಸಾವನ್ನಪ್ಪಿದ ಐದನೇ ವ್ಯಕ್ತಿ ಆ ಬೋಟ್‌ನ ಆಪರೇಷನ್ ಮ್ಯಾನೇಜರ್ ಆಗಿದ್ದು, ಸದ್ಯಕ್ಕೆ ಅವರ ಮೃತದೇಹವನ್ನು ಮಾತ್ರ ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ದುರಂತಕ್ಕೀಡಾದ ಉಳಿದ ನಾಲ್ವರು ವಿವಿಧ ವಿಶ್ವವಿದ್ಯಾನಿಲಯಗಳ ಸಂಶೋಧಕರಾಗಿದ್ದಾರೆ. ಶುಕ್ರವಾರದಂದು ಎಂಟು ಮಂದಿ ಮುಳುಗುಗಾರರ (ಡೈವರ್ಸ್) ತಂಡ ಇವರಿಗಾಗಿ ತೀವ್ರ ಹುಡುಕಾಟ ನಡೆಸಿತಾದರೂ, ಅವರ ಪತ್ತೆ ಸಾಧ್ಯವಾಗಲಿಲ್ಲ. ಇಂದು ಮತ್ತಷ್ಟು ಹೆಚ್ವು ಸಂಖ್ಯೆಯ ಮುಳುಗುಗಾರರು ಸ್ಥಳಕ್ಕೆ ಆಗಮಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗತಿಯಲ್ಲಿ ಮುಂದುವರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net