ಬಾಹ್ಯಾಕಾಶ ಕಣ್ಗಾವಲು ಸಾಮರ್ಥ್ಯವನ್ನು ಈಗಾಗಲೇ ಇಡೀ ಜಗತ್ತಿಗೆ ಪ್ರದರ್ಶಿಸಿ, ಸಾಬೀತುಪಡಿಸಿರುವ ಚೀನಾ, ಫಾಲ್ಕನ್ ರಾಕೆಟ್ ಸೃಷ್ಟಿಸಿರುವ ಚಂದ್ರನ ಮೇಲಿನ ಕುಳಿಯ ದೃಶ್ಯಗಳನ್ನು ಸೆರೆಹಿಡಿಯುವಲ್ಲಿಯೂ ಯಶಸ್ವಿಯಾಗಿದೆ. ಡಿಕ್ಕಿ ಹೊಡೆದ ಬೆನ್ನಲ್ಲೇ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಗೋಚರಿಸಿದ ದಟ್ಟ ಹೊಗೆಯಲ್ಲಿ, ಸೋಡಿಯಂ ಮತ್ತು ಲಿಥಿಯಂ ಗ್ಯಾಸ್ ಇರುವುದನ್ನು ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ.