ಶ್ವೇತಭವನದಲ್ಲಿ ಗುಂಡಿನ ದಾಳಿ; ಕೈ, ಕಾಲು ಕಟ್ಟಿ ಅರೆಬೆತ್ತಲೆ ಮಾಡಿರುವ​ ಶೂಟರ್​ನ ಫಸ್ಟ್​ ಫೋಟೋ ರಿಲೀಸ್​​..White House Shooting

White House Shooting
White House Shooting
Published on

ಪ್ರಮುಖ ಮುಖ್ಯಾಂಶಗಳು

  • ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ವೇಳೆ ಗುಂಡಿನ ದಾಳಿ
  • ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ದಾಳಿ ನಡೆಸಿದ ಶೂಟರ್‌ನ ಫೋಟೋ ಲಭ್ಯ
  • ಶೂಟರ್​ನನ್ನು ಕ್ಯಾಲಿಫೋರ್ನಿಯಾದ ಕೋಲ್ ಟಾಮಸ್ ಅಲೆನ್ ಎಂದು ಗುರುತು
ವಾಷಿಂಗ್ಟನ್​: ಹಿಲ್ಟನ್​ ಹೋಟೆಲ್​ನಲ್ಲಿ ನಡೆಯುತ್ತಿದ್ದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್​ ವೇಳೆ ದಾಳಿ ನಡೆಸಲು ಯತ್ನಿಸಿದ ಶಂಕಿತ ಶೂಟರ್​ನ ಮೊದಲ ಫೋಟೋಗಳನ್ನು ಸದ್ಯ ಟ್ರುತ್​​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. 

ಶೂಟರ್​ ಯಾರು?

ಬಂಧಿತ ವ್ಯಕ್ತಿಯನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ ಕೋಲ್ ಟಾಮಸ್ ಅಲೆನ್ (31) ಎಂದು ಗುರುತಿಸಲಾಗಿದೆ. ಆತನ ಬಳಿ ಮಾರಕಾಸ್ತ್ರಗಳಿದ್ದವು ಎನ್ನಲಾಗಿದೆ.  ಟ್ರಂಪ್ ಅವರು ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಶೂಟರ್‌ನ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಶೂಟರ್ ಶರ್ಟ್ ಇಲ್ಲದೆ, ಕೈಗಳನ್ನು ಹಿಂದೆ ಕಟ್ಟಿ ನೆಲಕ್ಕೆ ಕೆಡವಲ್ಪಟ್ಟ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಏನಿದು ಘಟನೆ?

ಹಿಲ್ಟನ್​ ಹೋಟೆಲ್​ನಲ್ಲಿ ಅದ್ದೂರಿ ಭೋಜನಕೂಟದಲ್ಲಿ ಮೆಲಾನಿಯಾ ಟ್ರಂಪ್, ಜೆಡಿ ವ್ಯಾನ್ಸ್​​, ಟ್ರಂಪ್ ಸೇರಿದಂತೆ  ಸಂಪುಟ ಸದಸ್ಯರು, ವರದಿಗಾರರು ಭಾಗಿಯಾಗಿದ್ದರು. ಈ ಮಧ್ಯೆ ಶೂಟರ್​ ಒಬ್ಬ ಭದ್ರತಾ ಸಿಬ್ಬಂದಿಯನ್ನು ಎದುರಿಸಿ ಒಳನುಗ್ಗಲು ಯತ್ನಿಸುವಾಗ ಗುಂಡಿನ ದಾಳಿ ನಡೆಸಿದ್ದಾನೆ. ಈ ಮಧ್ಯೆ ಕಾರ್ಯಪ್ರವೃತ್ತರಾದ ಅಮೆರಿಕದ ಸೀಕ್ರೇಟ್ ಸರ್ವೀಸ್​  ಸಿಬ್ಬಂದಿ ಟ್ರಂಪ್​ ಮತ್ತು ಅವರ ಪತ್ನಿ ಮೆಲಾನಿಯಾ ಸೇರಿದಂತೆ ಹಲವರು  ಉನ್ನತ ಮಟ್ಟದ ಅಧಿಕಾರಿಗಳನ್ನು ಸುರಕ್ಷತಾ ಸ್ಥಳಕ್ಕೆ  ಸ್ಥಳಾಂತರಿಸಿದ್ದಾರೆ.  ಗುಂಡಿನ ಸದ್ದು ಕೇಳುತ್ತಿದ್ದಂತೆ ಟ್ರಂಪ್​ ಸೇರಿಂದತೆ ಸಂಪುಟ ಸದಸ್ಯರು, ಅಧಿಕಾರಿಗಳು ಟೇಬಲ್​ ಕೆಳಗೆ ಅವಿತುಕೊಂಡಿರುವ ವಿಡಿಯೋಗಳು ವೈರಲ್​ ಆಗಿವೆ. 
ಎಕ್ಸ್​ ಫೋಟೋದಲ್ಲಿ ಏನಿದೆ?
ಆರ್​ಟಿ ಎನ್ನುವ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶಂಕಿತ ಶೂಟರ್​​ನ್ನು ನೆಲಕ್ಕೆ ಮುಖ ಮಾಡಿ ಕೆಡವಿದ್ದು, ಆತನ ಕೈ ಮತ್ತು ಕಾಲುಗಳನ್ನು ಬಿಗಿಯಾಗಿ ಕಟ್ಟಲಾಗಿದೆ. ಆತನು ಅರೆಬೆತ್ತಲೆ ಸ್ಥಿತಿಯಲ್ಲಿದ್ದು, ದೇಹದ ಕೆಳಭಾಗವನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. 
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಸಹ ಶೂಟರ್​ ಸ್ಪಷ್ಟವಾಗಿ ಕಾಣುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯನ್ನು 'ಒಂಟಿ ತೋಳದ ದಾಳಿ' ಎಂದು ಟ್ರಂಪ್ ಬಣ್ಣಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ಆತ ಒಬ್ಬ ಮಾನಸಿಕ ಅಸ್ವಸ್ಥ. ನಮ್ಮ ಭದ್ರತಾ ಪಡೆಗಳು ಅದ್ಭುತವಾಗಿ ಕೆಲಸ ಮಾಡಿವೆ. ಈ ಕಾರ್ಯಕ್ರಮವನ್ನು ಮುಂದಿನ 30 ದಿನಗಳಲ್ಲಿ ಇನ್ನೂ ಅದ್ಧೂರಿಯಾಗಿ ನಡೆಸುತ್ತೇವೆ
ಅಧಿಕಾರಿಗೆ ಗುಂಡೇಟು
ಗುಂಡಿನ ದಾಳಿ ವೇಳೆ ಒಬ್ಬ ಸೀಕ್ರೆಟ್ ಸರ್ವಿಸ್ ಅಧಿಕಾರಿಗೆ ಗುಂಡು ತಗುಲಿದೆ. ಆದರೆ, ಅವರು ಧರಿಸಿದ್ದ ಬುಲೆಟ್ ಪ್ರೂಫ್ ಜಾಕೆಟ್‌ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net