ಯುಎಇ ಕೈಗಾರಿಕಾ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ ಬಳಿಕ ಅಗ್ನಿ ಅವಘಡ; ಐವರು ಭಾರತೀಯರಿಗೆ ಗಂಭೀರ ಗಾಯ | Iranian drone attack

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್​​ನ ಕೈಗಾರಿಕಾ ಘಟಕದ ಮೇಲೆ ಶನಿವಾರ(ಮಾ. 28) ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಬಳಿಕ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಐವರು ಭಾರತೀಯರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಯುಎಇ ಸರ್ಕಾರಿ ಮಾಧ್ಯಮ ಕಚೇರಿ, ಇರಾನ್‌ನಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಬಳಿಕ ಶನಿವಾರ ಮುಂಜಾನೆ ಕೈಗಾರಿಕಾ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಐವರು ಭಾರತೀಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿ ಅಧಿಕಾರಿಗಳು ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದೆ. 
ಇನ್ನೂ  ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪ್ರತಿಬಂಧದಿಂದ ಬಿದ್ದ ಅವಶೇಷಗಳಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಇರಾನ್ ಹಾರಿಸಿದ ಕ್ರೂಸ್ ಕ್ಷಿಪಣಿಗಳು & ಡ್ರೋನ್​ಗಳಿಗೆ ವಾಯು ರಕ್ಷಣಾ ಪಡೆಗಳು ಪ್ರತಿಕ್ರಿಯಿಸುತ್ತಿವೆ ಎಂದು ತಿಳಿಸಿದೆ. 
ಇರಾನ್ ತನ್ನ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ಜಂಟಿಯಾಗಿ ದಾಳಿ ಮಾಡಿ ಯುದ್ಧ ಶುರು ಮಾಡಿ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ, ಅದಕ್ಕೆ ಪ್ರತೀಕಾರವಾಗಿ ನೆರೆಯ ದುಬೈ, ಅಬುಧಾಬಿ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಅನೇಕ ಗಲ್ಫ್ ಪ್ರದೇಶಗಳಲ್ಲಿರುವ ಅಮೆರಿಕ ಮಿಲಿಟರಿ ಬೇಸ್ ಗುರಿಯಾಗಿಸಿ ಕ್ಷಿಪಣಿಗಳನ್ನು ಉಡಾಯಿಸುತ್ತಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net