ನಿರ್ದೇಶಕ ರಾಬ್ ರೀನರ್ ದಂಪತಿ ಶವವಾಗಿ ಪತ್ತೆ!...ದೇಹದ ಮೇಲಿವೆ ಗಾಯದ ಗುರುತು Hollywood
ಚಿತ್ರ Instagram
Published on:
Copied
Follow Us
ಕ್ಯಾಲಿಫೋರ್ನಿಯಾ: ಹಾಲಿವುಡ್ನ (Hollywood) ಖ್ಯಾತ ನಿರ್ದೇಶಕ ರಾಬ್ ರೀನರ್ ಮತ್ತು ಅವರ ಪತ್ನಿ ಮೈಕೆಲ್ ಲಾಸ್ ಏಂಜಲೀಸ್‌ನ ಬ್ರೆಂಟ್ವುಡ್ನಲ್ಲಿರುವ ಅವರ ನಿವಾಸದಲ್ಲಿ ಭಾನುವಾರ (ಡಿ.14) ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು, ಈ ಘಟನೆಯು ಚಿತ್ರರಂಗವನ್ನೇ ತಲ್ಲಣಗೊಳಿಸಿದೆ.
ಮೃತದೇಹದ ಮೇಲೆ ಗಾಯಗಳಿದ್ದವು ಎಂದು ಮೂಲಗಳು ತಿಳಿಸಿದ್ದು. ಪ್ರಕರಣದ ಕುರಿತಂತೆ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ (LAPD) ದರೋಡೆ-ನರಹತ್ಯೆ ವಿಭಾಗವು ಪ್ರಸ್ತುತ ತನಿಖೆ ನಡೆಸುತ್ತಿದೆ. ಹತ್ಯೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಅಧಿಕಾರಿಗಳು ಹಾಗೂ ಕುಟುಂಬಸ್ಥರಿಂದ ಅಧಿಕೃತ ಮಾಹಿತಿ ಪಡೆಯಲು ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಬ್ ರೀನರ್ ಯಾರು?
ರಾಬ್ ರೀನರ್ 70 ರ ದಶಕದಲ್ಲಿ ಸಿಬಿಎಸ್ ಸಿಟ್‌ಕಾಮ್ ಆಲ್ ಇನ್ ದಿ ಫ್ಯಾಮಿಲಿಯಲ್ಲಿ ಮೈಕ್ "ಮೀಟ್‌ಹೆಡ್" ಸ್ಟಿವಿಕ್ ಆಗಿ ಖ್ಯಾತಿ ಗಳಿಸಿದರು. ಇವರು ಜನಪ್ರಿಯ ಹಾಲಿವುಡ್ ನಿರ್ದೇಶಕರಾಗಿದ್ದರು. ರೀನರ್ಆಧುನಿಕ ಅಮೇರಿಕನ್ ಸಿನಿಮಾವನ್ನು ರೂಪಿಸುವಲ್ಲಿ ಅವರು ದೊಡ್ಡ ಪಾತ್ರ ವಹಿಸಿದ್ದಾರೆ. ರಾಬ್ ರೀನರ್ ಸ್ಟ್ಯಾಂಡ್ ಬೈ ಮಿ, ದಿ ಪ್ರಿನ್ಸೆಸ್ ಬ್ರೈಡ್ ಮತ್ತು ವೆನ್ ಹ್ಯಾರಿ ಮೆಟ್ ಸ್ಯಾಲಿನಂತಹ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಇವರು ಸ್ಲೀಪ್‌ಲೆಸ್ ಇನ್ ಸಿಯಾಟಲ್, ಬುಲೆಟ್ಸ್ ಓವರ್ ಬ್ರಾಡ್‌ವೇ, ಇಡಿಟಿವಿ, ಎವ್ರಿವನ್ಸ್ ಹೀರೋ ಮತ್ತು ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ ನಂತಹ ಸಿನಿಮಾಗಳಲ್ಲಿ ಕೆಲಸ ಮಾಡುವ ಮೂಲಕ ಚಿತ್ತರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ರಾಬ್ ರೀನರ್ ವೆನ್ ಹ್ಯಾರಿ ಮೆಟ್ ಸ್ಯಾಲಿ ಚಿತ್ರೀಕರಣದ ಸಮಯದಲ್ಲಿ ಛಾಯಾಗ್ರಾಹಕಿ ಮೈಕಲ್ ಅವರನ್ನು ಭೇಟಿಯಾದರು. ನಂತರ ಪ್ರೀತಿಸಿ 1989 ರಲ್ಲಿ ವಿವಾಹವಾದರು. ಅವರು ಮೂರು ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ಇವರು ತಮ್ಮ ಬ್ರೆಂಟ್‌ವುಡ್ ಮನೆಯಲ್ಲಿ ವಾಸಿಸುತ್ತಿದ್ದರು (ಏಜೆನ್ಸೀಸ್).