ಕ್ವೆಟ್ಟಾ: ಕಳೆದ ಎರಡು ದಿನಗಳಿಂದ ಪಾಕಿಸ್ತಾನ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಲೂಚ್ ದಂಗೆಕೋರರು ಮತ್ತು ಪಾಕ್ ಸೇನೆ ನಡುವೆ ಘರ್ಷಣೆ ನಡೆದಿದ್ದು, ಸೈನಿಕರು ಸೇರಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಆಘಾತಾಕಾರಿ ಮಾಹಿತಿಯೊಂದು ಹೊರ ಬಿದ್ದಿದ್ದು, ದಂಗೆಕೋರರ ಬಲೂಚ್ ಆರ್ಮಿಯಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್ಗಳಿರುವುದು ಕಂಡು ಬಂದಿದೆ.