ಬಾಂಗ್ಲಾ ಕೊಲೆ ಆರೋಪಿಗಳು ಮೇಘಾಲಯದಲ್ಲಿದ್ದಾರೆ ಎಂಬುದು ಸುಳ್ಳು ಸುದ್ದಿ: ಮೇಘಾಲಯ ಖಾಕಿ ಪಡೆ | Bangladesh

Bangladesh
Bangladesh
Published on

ಪ್ರಮುಖ ಮುಖ್ಯಾಂಶಗಳು

  • ಉಸ್ಮಾನ್ ಹಾದಿ ಹತ್ಯೆ ಪ್ರಕರಣದ ಆರೋಪಿಗಳು ಮೇಘಾಲಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದಿದ್ದ ಢಾಕಾ ಪೋಲಿಸರು
  • ಇದೊಂದು ಸುಳ್ಳು ಆರೋಪವಾಗಿದ್ದು ಮೇಘಾಲಯದ ಗಡಿ ಮೂಲಕ ಯಾರು ಭಾರತವನ್ನು ಪ್ರವೇಶಮಾಡಿಲ್ಲ : ಮೇಘಾಲಯ ಪೊಲೀಸ್
  • ಆರೋಪಿಗಳು ಹಲುಘಾಟ್ ವಲಯದಿಂದ ಮೇಘಾಲಯಕ್ಕೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ: ಬಿಎಸ್​ಎಫ್​ ಅಧಿಕಾರಿ
ಮೇಘಾಲಯ: ಬಾಂಗ್ಲಾದೇಶ(Bangladesh)ದ ವಿದ್ಯಾರ್ಥಿ ನಾಯಕ ಮತ್ತು 2024ರ ಬಾಂಗ್ಲಾ ದಂಗೆಯ ಪ್ರಮುಖ ನಾಯಕ ಉಸ್ಮಾನ್ ಹಾದಿ ಹತ್ಯೆ ಪ್ರಕರಣದ ಆರೋಪಿಗಳು ಮೇಘಾಲಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಢಾಕಾ ಪೋಲಿಸರು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೇಘಾಲಯ ಪೊಲೀಸ್ ಮತ್ತು ಗಡಿ ಭದ್ರತಾ ಪಡೆಗಳು ಇದೊಂದು ಸುಳ್ಳು ಆರೋಪವಾಗಿದ್ದು ಮೇಘಾಲಯದ ಗಡಿ ಮೂಲಕ ಯಾರು ಭಾರತವನ್ನು ಪ್ರವೇಶಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಉಸ್ಮಾನ್ ಹಾದಿ ಹತ್ಯೆಯ ಇಬ್ಬರು ಆರೋಪಿಗಳಾದ ಫೈಸಲ್ ಕರೀಮ್ ಮಸೂದ್ ಮತ್ತು ಅಲಂಗೀರ್ ಶೇಖ್, ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯ ಹಲುಘಾಟ್ ಗಡಿಯಿಂದ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಮತ್ತು ಪ್ರಸ್ತುತ ಭಾರತದಲ್ಲಿದ್ದಾರೆ ಎಂಬ ನೆರೆಯ ದೇಶದ ಹೇಳಿಕೆಯನ್ನು ಮೇಘಾಲಯ ಪೊಲೀಸ್ ಪ್ರಧಾನ ಕಚೇರಿಯ ಉನ್ನತ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶದ ದಿನಪತ್ರಿಕೆಯೊಂದು ಪ್ರಕಟಿಸಿದ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳಾಗಿದೆ. ಬಾಂಗ್ಲಾದೇಶ ಪೊಲೀಸರಿಂದ ಯಾವುದೇ ಔಪಚಾರಿಕ ಅಥವಾ ಅನೌಪಚಾರಿಕ ಸಂವಹನ ನಡೆದಿಲ್ಲ ಹಾಗೂ ವರದಿಯಲ್ಲಿ ಹೆಸರಿಸಲಾದ ಯಾವುದೇ ಆರೋಪಿಗಳ ಬಂಧನ ಇನ್ನುವರೆಗೆ ನಡೆದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸರ ನಿಲುವನ್ನು ಬೆಂಬಲಿಸುತ್ತಾ, ಗಡಿ ಭದ್ರತಾ ಪಡೆ ಇನ್ಸ್‌ಪೆಕ್ಟರ್ ಜನರಲ್ ಒ.ಪಿ. ಉಪಾಧ್ಯಾಯ ಬಾಂಗ್ಲಾ ಪೋಲಿಸರ ಹೇಳಿಕೆಯನ್ನು ನಿರಾಕರಿಸುತ್ತಾ, ಆರೋಪಿಗಳು ಹಲುಘಾಟ್ ವಲಯದಿಂದ ಮೇಘಾಲಯಕ್ಕೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಂತಹ ಯಾವುದೇ ಘಟನೆಯನ್ನು ಬಿಎಸ್‌ಎಫ್ ಪತ್ತೆ ಮಾಡಿಲ್ಲ ಅಥವಾ ವರದಿ ಮಾಡಿಲ್ಲ. ಈ ಹೇಳಿಕೆಗಳು ಆಧಾರರಹಿತ ಮತ್ತು ದಾರಿತಪ್ಪಿಸುವಂತಿವೆ ಎಂದು ಹೇಳಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net