ಯುಎಇಯಿಂದ ಪಾಕಿಸ್ತಾನಿ ಕಾರ್ಮಿಕರ ಉಚ್ಚಾಟನೆ: 5,000 ಶಿಯಾಗಳ ಗಡಿಪಾರು; ಆರ್ಥಿಕ ದಿವಾಳಿತನದತ್ತ ಭಿಕಾರಿಸ್ತಾನ್! Pakistan Economic Crisis
5,000 ಪಾಕಿಸ್ತಾನಿ ಶಿಯಾ ಕಾರ್ಮಿಕರ ಗಡಿಪಾರಿಗೆ ಮುಂದಾದ ಯುಎಇ ಸರ್ಕಾರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
5,000 ಪಾಕಿಸ್ತಾನಿ ಶಿಯಾ ಕಾರ್ಮಿಕರ ಗಡಿಪಾರಿಗೆ ಮುಂದಾದ ಯುಎಇ ಸರ್ಕಾರ
ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿಕ್ಕೆ ಈ ಪರಿಣಾಮ
ಆರ್ಥಿಕ ದಿವಾಳಿತನದತ್ತ ಪಾಕಿಸ್ತಾನ!
ಯುಎಇ: ಒಂದೆಡೆ ಸಾಲದ ಸುಳಿ; ಇನ್ನೊಂದೆಡೆ ಆರ್ಥಿಕ ದಿವಾಳಿತನ, ಇದರ ನಡುವೆ ಪಾಕಿಸ್ತಾನಕ್ಕೆ(Pakistan Economic Crisis) ಈಗ ಮತ್ತೊಂದು ಬಾರೀ ಆಘಾತ ಎದುರಾಗಿದೆ. ತನ್ನ ಮಿತ್ರ ರಾಷ್ಟ್ರ ಎಂದು ನಂಬಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಈಗ ಪಾಕಿಸ್ತಾನದ ಮೇಲೆ ಕೆಂಗಣ್ಣು ಬೀರಿದೆ.
ಕೇವಲ 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಪಟ್ಟು ಹಿಡಿದಿರುವುದು ಮಾತ್ರವಲ್ಲದೆ, ಈಗ ಅಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಪಾಕಿಸ್ತಾನಿ ಶಿಯಾ ಕಾರ್ಮಿಕರನ್ನು ದೇಶದಿಂದ ಹೊರಹಾಕುತ್ತಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳ ಮಧ್ಯಭಾಗದಿಂದಲೇ ಯುಎಇ ಸರ್ಕಾರ ಈ ಕಾರ್ಯಾಚರಣೆ ಶುರು ಮಾಡಿದೆ. ಯುಎಇಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಶಿಯಾ ಸಮುದಾಯದ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ವಾಪಸ್ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.
ಇಸ್ಲಾಮಾಬಾದ್‌ನ ಧರ್ಮಗುರುಗಳೊಬ್ಬರ ಪ್ರಕಾರ, ಈಗಾಗಲೇ ಸುಮಾರು 5,000 ಕುಟುಂಬಗಳು ಈ ಗಡಿಪಾರು ಪಟ್ಟಿಗೆ ಸೇರಿದ್ದು, ಅತ್ತ ಪಾಕಿಸ್ತಾನದ ವಾಯುವ್ಯ ಭಾಗದ ಹಳ್ಳಿಗಳಿಗೆ ಕಳೆದ ಕೆಲವು ವಾರಗಳಲ್ಲಿ 900ಕ್ಕೂ ಹೆಚ್ಚು ಯುವಕರು ಕೆಲಸ ಕಳೆದುಕೊಂಡು ಬರಿಗೈಲಿ ವಾಪಸ್ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನಕ್ಕೆ ಬೀಳುತ್ತಾ ಆರ್ಥಿಕ ಹೊರೆ?
ಪಾಕಿಸ್ತಾನದ ಪಾಲಿಗೆ ಇದು ಕೇವಲ ರಾಜತಾಂತ್ರಿಕ ಹಿನ್ನಡೆಯಲ್ಲ, ಬದಲಿಗೆ ಆರ್ಥಿಕ ಮರಣಶಾಸನವಾಗುವ ಸಾಧ್ಯತೆ ಇದೆ. ಸದ್ಯ ಯುಎಇಯಲ್ಲಿ ಸುಮಾರು 20 ಲಕ್ಷ ಪಾಕಿಸ್ತಾನಿಗಳು ನೆಲೆಸಿದ್ದಾರೆ. ಕಳೆದ ವರ್ಷವೊಂದರಲ್ಲೇ ಇವರು ಸುಮಾರು 8 ಬಿಲಿಯನ್ ಡಾಲರ್ ಹಣವನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದರು.
ಈಗ ಕಾರ್ಮಿಕರನ್ನು ಹೊರಹಾಕುತ್ತಿರುವುದರಿಂದ, ಪಾಕಿಸ್ತಾನಕ್ಕೆ ಹರಿದು ಬರುತ್ತಿದ್ದ ವಿದೇಶಿ ಹಣದ ಮೂಲವೇ ನಿಂತು ಹೋಗುವ ಆತಂಕ ಎದುರಾಗಿದೆ. ಕೇವಲ ಪಾಕಿಸ್ತಾನಿಗಳನ್ನು ಗುರಿಯಾಗಿಸಿಕೊಂಡಿರುವ ಯುಎಇ ಸರ್ಕಾರ ಇರಾಕ್ ಅಥವಾ ಲೆಬನಾನ್ ದೇಶದ ಶಿಯಾ ಕಾರ್ಮಿಕರಿಗೆ ಯಾವುದೇ ತೊಂದರೆ ಕೊಡುತ್ತಿಲ್ಲವೆಂದು ತಿಳಿದು ಬಂದಿದೆ.
ಪಾಕಿಸ್ತಾನ ಮಾಡಿದ ತಪ್ಪೇನು?
ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ಸಂಬಂಧದಲ್ಲಿ ಪಾಕಿಸ್ತಾನ ವಹಿಸುತ್ತಿರುವ ಪಾತ್ರವೇ ಯುಎಇ ಕೆಂಗಣ್ಣಿಗೆ ಕಾರಣ ಎನ್ನಲಾಗುತ್ತಿದೆ. ಇರಾನ್ ವಿಷಯದಲ್ಲಿ ಯುಎಇ ಕಠಿಣ ನಿಲುವು ಹೊಂದಿದ್ದರೂ, ಪಾಕಿಸ್ತಾನ ಮಾತ್ರ ಇರಾನ್ ಪರವಾಗಿ ಮೃದು ಧೋರಣೆ ತೋರುತ್ತಿದೆ.
ಅದರಲ್ಲೂ ಪಶ್ಚಿಮ ಏಷ್ಯಾ ಯುದ್ಧದ ಸಮಯದಲ್ಲಿ ಯುಎಇ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದಾಗ ಪಾಕಿಸ್ತಾನ ಅದನ್ನು ಖಂಡಿಸದೆ ಕದನ ವಿರಾಮದ ಬಗ್ಗೆ ಮಾತನಾಡಿದ್ದು ಅಬುಧಾಬಿ ದೊರೆಗಳ ಕೋಪಕ್ಕೆ ಕಾರಣವಾಗಿದೆ.
ಯುಎಇ ಪಾಕಿಸ್ತಾನಕ್ಕೆ ತಾನು ನೀಡಿದ್ದ ಸಾಲ ವಾಪಸ್ ಕೇಳಿದಾಗ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ನೀಡಿ ಸಹಾಯಕ್ಕೆ ಬಂದಿತ್ತು. ಯುಎಇ ಮತ್ತು ಸೌದಿ ನಡುವೆ ಎಲ್ಲವೂ ಸರಿಯಿಲ್ಲದ ಈ ಸಮಯದಲ್ಲಿ, ಪಾಕಿಸ್ತಾನ ಸೌದಿಯತ್ತ ವಾಲುತ್ತಿರುವುದು ಯುಎಇಗೆ ಇಷ್ಟವಾಗುತ್ತಿಲ್ಲ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಮತವಾಗಿದೆ, (ಏಜನ್ಸೀಸ್).