2021ರ ಮೇ ತಿಂಗಳಲ್ಲಿ ಆಗ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರು ಸೌದಿ ಆರೇಬಿಯಕ್ಕೆ ಭೇಟಿ ನೀಡಿದ ಸಂದರ್ಭ ತಮಗೆ ಉಡುಗೊರೆಯಾಗಿ ನೀಡಿದ್ದ ಬುಲ್ಗಾರಿ ಆಭರಣವನ್ನು ಅಕ್ರಮವಾಗಿ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು. ಒಂದು ರಿಂಗ್, ಬ್ರೇಸ್‌ಲೆಟ್, ಕತ್ತಿನ ಸರ ಹಾಗೂ ಒಂದು ಜೋಡಿ ಕಿವಿಯೋಲೆಗಳನ್ನು ಈ ಆಭರಣದ ಸೆಟ್ ಒಳಗೊಡಿದ್ದು, ಅವುಗಳ ಒಟ್ಟು ಮೌಲ್ಯ 7.50 ಕೋಟ ಪಾಕಿಸ್ತಾನಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಆದರೆ ದಂಪತಿ ತಮ್ಮ ವಶದಲ್ಲಿ ಇರಿಸಿದ್ದರಿಂದ ಪಾಕಿಸ್ತಾನದ ಬೊಕ್ಕಸಕ್ಕೆ 3.29 ಕೋಟಿ ರೂ.ನಷ್ಟವಾಗಿತ್ತು.