ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ: ಯುರೋಪ್​ ಮತ್ತು ಬ್ರಿಟನ್‌​ ತೈಲಕ್ಕಾಗಿ ಭಿಕ್ಷೆ ಬೇಡಲಿವೆ; ರಷ್ಯಾ ಸ್ಫೋಟಕ ಭವಿಷ್ಯ! Russia on Oil Crisis

ನಮ್ಮನ್ನು ವಿರೋಧಸಿದ ದೇಶಗಳು ನಮ್ಮಲ್ಲಿ ತೈಲ ಪೂರೈಕೆಗಾಗಿ ಭಿಕ್ಷೆ ಬೇಡಲಿವೆ: ಕಿರಿಲ್ ಡಿಮಿಟ್ರಿವ್
ನಮ್ಮನ್ನು ವಿರೋಧಸಿದ ದೇಶಗಳು ನಮ್ಮಲ್ಲಿ ತೈಲ ಪೂರೈಕೆಗಾಗಿ ಭಿಕ್ಷೆ ಬೇಡಲಿವೆ: ಕಿರಿಲ್ ಡಿಮಿಟ್ರಿವ್
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದ ಮುಂದುವರಿದ ಸಂಘರ್ಷ
  • ಪರಿಸ್ಥಿತಿ ಹೀಗೆ ಮುಂದುವರಿದರೆ ಯುರೋಪಿಯನ್​ ದೇಶಗಳಲ್ಲಿ ತೈಲದ ಅಭಾವ ಸೃಷ್ಟಿಯಾಗಲಿದೆ
  • ನಮ್ಮನ್ನು ವಿರೋಧಸಿದ ದೇಶಗಳು ನಮ್ಮಲ್ಲಿ ತೈಲ ಪೂರೈಕೆಗಾಗಿ ಭಿಕ್ಷೆ ಬೇಡಲಿವೆ: ಕಿರಿಲ್ ಡಿಮಿಟ್ರಿವ್
  • ಜಾಗತಿಕ ರಾಜಕಾರಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ರಷ್ಯಾದ ಅಧಿಕಾರಿ
ರಷ್ಯಾ: ಯುದ್ಧದ ಕಾರ್ಮೋಡ ಮತ್ತು ಆರ್ಥಿಕ ನಿರ್ಬಂಧಗಳ ನಡುವೆ ಜಾಗತಿಕ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಉಕ್ರೇನ್ ಸಂಘರ್ಷದ ಬಳಿಕ ರಷ್ಯಾದ ಮೇಲೆ ನಿರ್ಬಂಧ ಹೇರಿ ಅಂತರ ಕಾಯ್ದುಕೊಂಡಿದ್ದ ಯುರೋಪ್ ಮತ್ತು ಬ್ರಿಟನ್‌ಗೆ ಈಗ ರಷ್ಯಾ (Russain on Oil Crisis) ಶಾಕ್ ನೀಡಿದೆ.
ಶೀಘ್ರದಲ್ಲೇ ಯುರೋಪ್ ಮತ್ತು ಬ್ರಿಟನ್ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸಲಿವೆ ಮತ್ತು ಅನಿಲಕ್ಕಾಗಿ ರಷ್ಯಾದ ಮುಂದೆ ಕೈಯೊಡ್ಡಲಿವೆ ಎಂದು ರಷ್ಯಾದ ಹಿರಿಯ ಅಧಿಕಾರಿ ಕಿರಿಲ್ ಡಿಮಿಟ್ರಿವ್ ಎಚ್ಚರಿಸಿದ್ದಾರೆ.

ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡ ಪಶ್ಚಿಮ ರಾಷ್ಟ್ರಗಳು

ವಿದೇಶಿ ಹೂಡಿಕೆ ಮತ್ತು ಆರ್ಥಿಕ ಸಹಕಾರಕ್ಕಾಗಿ ರಷ್ಯಾ ಅಧ್ಯಕ್ಷರ ವಿಶೇಷ ಪ್ರತಿನಿಧಿಯಾಗಿರುವ ಡಿಮಿಟ್ರಿವ್, ಪಾಶ್ಚಿಮಾತ್ಯ ರಾಷ್ಟ್ರಗಳ ಇಂದಿನ ಸ್ಥಿತಿಯನ್ನು ಕಟುವಾಗಿ ಟೀಕಿಸಿದ್ದಾರೆ. ರಷ್ಯಾದ ಇಂಧನ ಪೂರೈಕೆಯ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಹೋಗಿ ಯುರೋಪ್ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಬ್ಯಾರೆಲ್‌ಗೆ 150 ರಿಂದ 200 ಡಾಲರ್​ ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಸಂಭವಿಸಿದರೆ ಯುರೋಪ್ ಇದನ್ನು ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ ಎಂಬುದು ರಷ್ಯಾದ ಅಧಿಕಾರಿಯ ಅಭಿಪ್ರಾಯವಾಗಿದೆ.

ರಷ್ಯಾದ ಮುಂದೆ ಕೈಚಾಚಲಿವೆ ಯುರೋಪಿಯನ್ ದೇಶಗಳು

ಮುಂದಿನ ದಿನಗಳಲ್ಲಿ ಇಂಧನ ಸಂಪನ್ಮೂಲಗಳನ್ನು ಪೂರೈಸುವಂತೆ ಯುರೋಪ್ ಮತ್ತು ಬ್ರಿಟನ್‌ನಿಂದ ನಮಗೆ ನೂರಾರು ವಿನಂತಿಗಳು ಬರುವುದು ಖಚಿತ. ಆಗ ಅವರಿಗೆ ಇಂಧನ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನಾವು ನಿರ್ಧರಿಸುತ್ತೇವೆ. ಅವರು ರಷ್ಯಾದ ಇಂಧನಕ್ಕಾಗಿ ನಮ್ಮ ಮುಂದೆ ಬೇಡಿಕೊಳ್ಳುವ ಕಾಲ ಹತ್ತಿರದಲ್ಲಿದೆ, ಎಂದು ಡಿಮಿಟ್ರಿವ್ ಈ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬ್ರಿಕ್ಸ್ (BRICS) ಬಲ ಮತ್ತು ರಷ್ಯಾದ ಪ್ರಾಬಲ್ಯ
ಒಂದೆಡೆ ಯುರೋಪ್ ಸಂಕಷ್ಟಕ್ಕೆ ಸಿಲುಕುತ್ತಿದ್ದರೆ, ರಷ್ಯಾ ಮಾತ್ರ ಅಬಾಧಿತವಾಗಿ ಮುನ್ನುಗ್ಗುತ್ತಿದೆ. ಚೀನಾ, ಭಾರತ ಸೇರಿದಂತೆ ಬ್ರಿಕ್ಸ್ ಗುಂಪಿನ ದೇಶಗಳೊಂದಿಗೆ ರಷ್ಯಾ ತನ್ನ ವ್ಯಾಪಾರವನ್ನು ವಿಸ್ತರಿಸುತ್ತಿದೆ. ತೈಲ, ಅನಿಲ ಮಾತ್ರವಲ್ಲದೆ ರಸಗೊಬ್ಬರಗಳ ಪೂರೈಕೆಯಲ್ಲೂ ರಷ್ಯಾ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ರಷ್ಯಾದ ಸ್ಥಾನ ಈಗ ಮೊದಲಿನಿಗಿಂತಲೂ ಹೆಚ್ಚು ಬಲಗೊಂಡಿದೆ, ಎಂದು ಡಿಮಿಟ್ರಿವ್ ಹೇಳಿದ್ದಾರೆ.

ಗಗನಕ್ಕೇರಿದ ತೈಲ ಬೆಲೆ: ಜರ್ಮನಿಯಲ್ಲಿ ಸಾಮಾಜಿಕ ಅಶಾಂತಿ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯ ಭೀತಿಯಿಂದಾಗಿ ಈಗಾಗಲೇ ಇಂಧನ ಬೆಲೆಗಳು ಗಗನಕ್ಕೇರಿವೆ. ಜರ್ಮನಿ ಸೇರಿದಂತೆ ಪ್ರಮುಖ ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2 ಡಾಲರ್​ ಏರಿಕೆ ಕಂಡಿದೆ.
ಇದು ಕೇವಲ ಆರ್ಥಿಕ ಹೊರೆಯಾಗಿ ಉಳಿದಿಲ್ಲ, ಬದಲಾಗಿ ಅಲ್ಲಿನ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿ ಸಾಮಾಜಿಕ ಅಶಾಂತಿ ಸೃಷ್ಟಿಸುತ್ತಿದೆ. ಇಂಧನ ಅವಲಂಬಿತ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ಹೇಳಲಾಗುತ್ತಿದೆ.

ಪುಟಿನ್ ಕಿವಿಮಾತು ಮತ್ತು ರಷ್ಯಾದ ಹೊಸ ನಡೆ

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ತೈಲ ಬೆಲೆ ಏರಿಕೆಯಿಂದ ಬಂದಿರುವ ಹೆಚ್ಚಿನ ಆದಾಯವನ್ನು ಎಚ್ಚರಿಕೆಯಿಂದ ಬಳಸುವಂತೆ ರಷ್ಯಾದ ಉದ್ಯಮಿಗಳಿಗೆ ಸೂಚಿಸಿದ್ದಾರೆ. ಅತಿಯಾದ ಖರ್ಚು ಮಾಡದೆ ಆರ್ಥಿಕತೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅವರು ಕರೆ ನೀಡಿದ್ದಾರೆ. ಇತ್ತ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಕೂಡ ರಷ್ಯಾದ ತೈಲಕ್ಕೆ ಜಾಗತಿಕವಾಗಿ ಭಾರಿ ಬೇಡಿಕೆಯಿದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net