ಮಾರ್ಚ್ 23 ರಂದು ಇಬ್ಬರೂ ಪರಸ್ಪರ ಭೇಟಿಯಾದಾಗ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು. ತನ್ನ ತಮ್ಮನನ್ನು ಕರೆದೊಯ್ಯಲು ಬಂದ ಲೀ ಲಿನ್, ಪೊಲೀಸ್ ಠಾಣೆಗೆ ಚೀಲ ತುಂಬ ಬ್ರೆಡ್ ಪ್ಯಾಕೆಟ್‌ಗಳನ್ನು ತಂದಿದ್ದರು. "ಒಂದು ಬ್ರೆಡ್ ತುಂಡಿಗಾಗಿ ನಾನು ಅವನನ್ನು ಕಳೆದುಕೊಂಡೆ, ಇನ್ನು ಮುಂದೆ ಅವನು ಎಂದಿಗೂ ಹಸಿವಿನಿಂದ ಇರಬಾರದು" ಎಂದು ಹೇಳುವಾಗ ಆಕೆಯ ಕಣ್ಣಲ್ಲಿ ನೀರಿತ್ತು.