ನಂತರ ಫೆಡರಲ್ ಕೋರ್ಟ್ ನ್ಯಾಯಮೂರ್ತಿ ಮೈಕೆಲ್ ವೇಲನ್ ಅವರು ಎಕ್ಸ್ ಪಾವತಿಸಬೇಕಅದ ಒಟ್ಟು ದಂಡವನ್ನು ಸುಮಾರು A$650,000 ಗೆ ಹೆಚ್ಚಿಸಿದರು. ಇದರ ಜೊತೆಗೆ, ನಿಯಂತ್ರಕರ ಕಾನೂನು ವೆಚ್ಚಗಳಿಗೆ ಹೆಚ್ಚುವರಿಯಾಗಿ A$100,000 ಪಾವತಿಸಲು ನ್ಯಾಯಾಲಯ ಆದೇಶಿಸಿತು. ಕಂಪನಿಯ ಕಾನೂನು ಉಲ್ಲಂಘನೆಯನ್ನು ಕೇವಲ ವ್ಯವಹಾರ ವೆಚ್ಚವೆಂದು ಕ್ಷುಲ್ಲಕಗೊಳಿಸದಿರಲು ಇಷ್ಟು ದೊಡ್ಡ ದಂಡದ ಅಗತ್ಯವಿದೆ ಎಂದು ನ್ಯಾಯಾಲಯ ಗಮನಿಸಿತು.