ಮತ್ತೊಂದೆಡೆ, ಮಸ್ಕ್ ಅವರು ತಮ್ಮ ಮೇಲೆ ಆಶ್ಲೇ ಮಾಡಿರುವ ಆರೋಪಗಳನ್ನು ಈ ಹಿಂದೆಯೇ ನಿರಾಕರಿಸಿದ್ದಾರೆ. ಆ ಮಗು ತಮ್ಮದೇ ಎಂಬುದು ಖಚಿತವಾಗದಿದ್ದರೂ ಸಹ, ಮಸ್ಕ್ ಈಗಾಗಲೇ ಆಶ್ಲೇ ಅವರಿಗೆ $2.5 ಮಿಲಿಯನ್ (ಸುಮಾರು 20 ಕೋಟಿ ರೂ.) ಪಾವತಿಸಿದ್ದಾರೆ. ಇದರ ಜೊತೆಗೆ, ತಾವು ವರ್ಷಕ್ಕೆ $500,000 (ಸುಮಾರು 4 ಕೋಟಿ ರೂ.) ಪಾವತಿಸುತ್ತಿರುವುದಾಗಿ 2025ರ ಮಾರ್ಚ್‌ನಲ್ಲಿ ಮಸ್ಕ್ ಹೇಳಿದ್ದರು. ಪ್ರಸ್ತುತ ಇಬ್ಬರೂ ಈ ವಿಷಯವಾಗಿ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಈ ರಹಸ್ಯ ಒಪ್ಪಂದವನ್ನು ತಿರಸ್ಕರಿಸಿದ ನಂತರ ತಾವು ಮಸ್ಕ್ ಜೊತೆ ನೇರವಾಗಿ ಮಾತನಾಡಿಲ್ಲ ಎಂಬುದನ್ನು ಆಶ್ಲೇ ಅವರು ಡಾನ್ ಲೆಮನ್ ಎದುರು ಖಚಿತಪಡಿಸಿದ್ದಾರೆ. ವಿಶೇಷವೆಂದರೆ, ಎಲಾನ್ ಮಸ್ಕ್ ವಿಶ್ವದ ಮೊದಲ 'ಟ್ರಿಲಿಯನೇರ್' (ಲಕ್ಷ ಕೋಟಿ ಒಡೆಯ) ಎಂದು ಹೊರಹೊಮ್ಮಿರುವ ಬೆನ್ನಲ್ಲೇ ಈ ಹೊಸ ವಿವಾದಗಳು ಮುಂಚೂಣಿಗೆ ಬಂದಿವೆ, (ಏಜೆನ್ಸೀಸ್).