ಜಗತ್ತಿನ ಹಡಗುಗಳೇ, ನಿಮ್ಮ ಎಂಜಿನ್ ಸ್ಟಾರ್ಟ್ ಮಾಡಿ. ತೈಲ ಮುಕ್ತವಾಗಿ ಹರಿಯಲಿ ಎಂದು ಟ್ರಂಪ್ ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು, ಹಲವಾರು ಮಾಜಿ ಅಧ್ಯಕ್ಷರು ಇರಾನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಯತ್ನಿಸಿ ಸೋತಿದ್ದರು. ಆದರೆ ಮುಂಬರುವ ಶುಕ್ರವಾರದಿಂದ ಜಲಸಂಧಿ ಮುಕ್ತವಾಗಲಿದ್ದು, ಜಗತ್ತಿನಾದ್ಯಂತ ತೈಲ ಸರಬರಾಜು ಸುಗಮವಾಗಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇತ್ತ ಇರಾನ್‌ನ ಉಪ ವಿದೇಶಾಂಗ ಸಚಿವರೂ ಸಹ ಒಪ್ಪಂದದ ಕರಡು ಅಂತಿಮಗೊಂಡಿರುವುದನ್ನು ಖಚಿತಪಡಿಸಿದ್ದಾರೆ.