

'ಒಂದು ದಿನ ನಮ್ಮೆಲ್ಲರಿಗೂ ಸಾವು ಖಂಡಿತ..ಮೊಬೈಲ್ ಸ್ಕ್ರಾಲ್ ಮಾಡುವ ಬದಲು ದೇವರ ಬಳಿ ಸಮಯ ಕಳೆಯಿರಿ'
ಸಾವಿನ ಧರ್ಮೋಪದೇಶ ನೀಡುತ್ತಲೇ ಪಾದ್ರಿ ತಲೆ ಮೇಲೆ ಬಿದ್ದ ಭಾರವಾದ ಶಿಲುಬೆ
ಲೇಡಿ ಆಫ್ ಪರ್ಪೆಚುಯಲ್ ಹೆಲ್ಪ್ ಚರ್ಚ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಪ್ಯಾಟ್ರಿಸಿಯೊ ಆಲ್ಫ್ರೆಡೊ ಸ್ಯಾಂಚೆಜ್ ಮೊಲಿನಾರಿ ನಿಧನ
ಇಕ್ವೆಡಾರ್: ಜೀವನದ ಅಸ್ಥಿರತೆ ಬಗ್ಗೆ ಧರ್ಮೋಪದೇಶ ನೀಡುತ್ತಿದ್ದ ವೇಳೆ ಬೃಹತ್ ಯೇಸು ಕ್ರಿಸ್ತನ ಶಿಲುಬೆ ನೇರವಾಗಿ ಪಾದ್ರಿಯ ತಲೆಮೇಲೆ ಬಿದ್ದ ಪರಿಣಾನ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಕ್ವೆಡಾರ್ನ ಕ್ಯಾಥೋಲಿಕ್ ಚರ್ಚ್ನಲ್ಲಿ ಬೆಳಕಿಗೆ ಬಂದಿದೆ. ಧರ್ಮಪ್ರವಚನದ ಲೈವ್ಸ್ಟ್ರೀಮ್ ಆಗುತ್ತಿದ್ದಾಲೇ ಘಟನೆ ಸಂಭವಿಸಿದ್ದು, ದೃಶ್ಯಗಳು ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುವಾಕ್ವಿಲ್ನಲ್ಲಿರುವ ಅವರ್ ಲೇಡಿ ಆಫ್ ಪರ್ಪೆಚುಯಲ್ ಹೆಲ್ಪ್ ಚರ್ಚ್ನಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಪ್ಯಾಟ್ರಿಸಿಯೊ ಆಲ್ಫ್ರೆಡೊ ಸ್ಯಾಂಚೆಜ್ ಮೊಲಿನಾರಿ ಮೃತರು.
ಶನಿವಾರ ಎಂದಿನಂತೆ ಚರ್ಚ್ನಲ್ಲಿ ಧರ್ಮ ಪ್ರವಚನ ನೀಡುತ್ತಿದ್ದರು. ಜೀವನದ ಅಸ್ಥಿರತೆ, ಹುಟ್ಟು -ಸಾವುಗಳ ಬಗ್ಗೆ ಅವರು ಮಾತನಾಡುತ್ತಿದ್ದರು. ಇದು ನೇರ ಪ್ರಸಾರವಾಗುತ್ತಿತ್ತು. ಸದ್ಯ ವೈರಲ್ ಆದ ವೀಡಿಯೊದಲ್ಲಿ ಕಾಣಿಸುವಂತೆ, ಫಾದರ್ ಪ್ಯಾಟ್ರಿಸಿಯೊ ಆಲ್ಫ್ರೆಡೊ ಸ್ಯಾಂಚೆಜ್ ಮೊಲಿನಾರಿ,ಜೀವನದ ಅಸ್ಥಿರತೆ, ಹುಟ್ಟು ಸಾವಿನ ಬಗ್ಗೆ ಮಾತನಾಡುತ್ತಿದ್ದಾಗ ಅವರ ಹಿಂದೆ ಇದ್ದ ಯೇಸು ಕ್ರಿಸ್ತನ ಶಿಲುಬೆ ಅವರ ತಲೆ ಮೇಲೆ ನೇರವಾಗಿ ಬಿದ್ದಿದೆ. ಅವರು ತಾವು ನಿಂತಿದ್ದ ಮೇಜಿನಿಂದ ಕೆಳಕ್ಕೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹಲವಾರು ಭಕ್ತರು ಆಂಬ್ಯುಲೆನ್ಸ್ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಕಿರುಚಾಡಿದ್ದಾರೆ. ಅತ್ತಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.
ದುರದೃಷ್ಟಕರ ಕಾಕತಾಳೀಯವೆಂಬಂತೆ, ಈ ಅಪಘಾತ ಸಂಭವಿಸುವುದಕ್ಕೆ ಕೆಲವೇ ಕ್ಷಣಗಳ ಮೊದಲು ಮೊಲಿನಾರಿ ಅವರು ಸಾವು ಮತ್ತು ಜೀವನದ ಅಲ್ಪಾಯುಷ್ಯದ ಬಗ್ಗೆ ಧರ್ಮೋಪದೇಶ ನೀಡಿದ್ದರು. ಭಕ್ತರು ಮೊಬೈಲ್ ಫೋನ್ಗಳಲ್ಲಿ ಸ್ಕ್ರೋಲಿಂಗ್ ಮಾಡುವುದರಲ್ಲಿ ಜೀವನವನ್ನು ವ್ಯರ್ಥ ಮಾಡದೆ, ಬದಲಾಗಿ ದೇವರೊಂದಿಗೆ ಮತ್ತು ತಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಂತೆ ಒತ್ತಾಯಿಸಿದರು.
'ಒಂದು ದಿನ ನಮ್ಮೆಲ್ಲರಿಗೂ ಸಾವು ಖಂಡಿತ, ಅನಾವಶ್ಯಕ ವಿಷಯಗಳಿಗಾಗಿ ಸಮಯ ಕಳೆಯುವ ಬದಲು ದೇವರೊಂದಿಗೆ ಕಳೆಯುವ ಸಮಯಕ್ಕೆ ಹೆಚ್ಚಿನ ಅರ್ಥವಿರುತ್ತದೆ ಎಂದರು. ನಂತರ ಅವರು ಮತ್ತೊಂದು ಪ್ರವಚನ ಆರಂಭಿಸಿ, ಅಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ದೇವರು ಆಶೀರ್ವದಿಸಲಿ ಎಂದು ಬೇಡಿಕೊಳ್ಳುತ್ತಿದ್ದಂತೆ, ಅವರ ಹಿಂದೆ ಗೋಡೆಗೆ ಅಳವಡಿಸಿದ್ದ ಶಿಲುಬೆಯು ಹಠಾತ್ತನೆ ಕಳಚಿ ಅವರ ಮೇಲೆ ಬಿತ್ತು
ಗುವಾಕಿಲ್ನ ಆರ್ಚ್ಡಯಾಸೀಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಲೇಡಿ ಆಫ್ ಪೆರ್ಪೆಚುವಲ್ ಹೆಲ್ಪ್ ಚರ್ಚ್ನ ಪಾಲನಾ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಪ್ಯಾಟ್ರಿಸಿಯೊ ಆಲ್ಫ್ರೆಡೊ ಸ್ಯಾಂಚೆಜ್ ಮೊಲಿನಾರಿ ಭಗವಂತನ ದಿವ್ಯ ಸನ್ನಿಧಿಯಲ್ಲಿ ಆನಂದಿಸಲು ದೇವರ ಮನೆಗೆ ತೆರಳಿದ್ದಾರೆ ನಾವು ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ಓ ದೇವರೆ ಅವರಿಗೆ ಶಾಂತಿ ಕರುಣಿಸಿ...ಪ್ರಶಾಂತತೆಯಿಂದ ಅವರು ವಿಶ್ರಮಿಸಲಿ. ಅಮೆನ್ ಎಂದು ಪ್ರಾರ್ಥನೆಯೊಂದಿಗೆ ಪೋಸ್ಟರ್ ಹಂಚಿಕೊಳ್ಳಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಾದಿ ಮೃತಪಟ್ಟಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಕೆಲವರು ಇದನ್ನು ಎಐ ವಿಡಿಯೋ ಎನ್ನುತ್ತಿದ್ದಾರೆ. ಆದರೆ, CARDENAL ARZOBISPO DE GUAYAQUIL ಈ ಬಗ್ಗೆ ಅಧಿಕೃತ ಪೋಸ್ಟರ್ ಹಂಚಿಕೊಂಡು ಸಂತಾಪ ಸೂಚಿಸಿರುವ ಕಾರಣ...ಇದು ನೈಜ ಘಟನೆ ಎಐ ವಿಡಿಯೋ ಅಲ್ಲ ಎನ್ನಲಾಗುತ್ತಿದೆ.