1976 ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ವೈರಸ್, ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳ ಬಳಿಯ ಹಳ್ಳಿಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ 2014-2016 ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದ ಗಿನಿ, ಸಿಯೆರಾ ಲಿಯೋನ್ ಮತ್ತು ಲೈಬೀರಿಯಾ ದೇಶಗಳಲ್ಲಿ ಹರಡಿದ್ದ ಎಬೋಲಾ ಸಾಂಕ್ರಾಮಿಕವು ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಹಾಗೂ ಸಂಕೀರ್ಣವಾದ ಬಿಕ್ಕಟ್ಟಾಗಿತ್ತು. ಪ್ರಸ್ತುತ ಕಾಂಗೋದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಜಾಗತಿಕ ವೈದ್ಯಕೀಯ ವಲಯ ತೀವ್ರ ನಿಗಾ ವಹಿಸಿದೆ,(ಏಜೆನ್ಸೀಸ್).