ಬಾಯಂಗಳಕ್ಕೆ ಕಾಲಿಟ್ಟ ಕೃತಕ ಬುದ್ಧಿಮತ್ತೆ: 47 ಸಾವಿರದ ಟೂತ್​ಬ್ರಶ್​ ಬಿಡುಗಡೆ ಮಾಡಿದ Dyson; ನೆಟ್ಟಿಗರ ರಿಯಾಕ್ಷನ್​ ಹೇಗಿದೆ? Dyson Ai Toothbrush

ಡೈಸನ್ ಕಂಪನಿಯ AI ಹಾಗೂ ಕ್ಯಾಮೆರಾ ಚಾಲಿತ ಎಲೆಕ್ಟ್ರಿಕ್ ಟೂತ್‌ಬ್ರಶ್
ಡೈಸನ್ ಕಂಪನಿಯ AI ಹಾಗೂ ಕ್ಯಾಮೆರಾ ಚಾಲಿತ ಎಲೆಕ್ಟ್ರಿಕ್ ಟೂತ್‌ಬ್ರಶ್
Published on
ವೈರಲ್​: ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಫೋನ್‌ನಿಂದ ಹಿಡಿದು ಕಛೇರಿ ಮತ್ತು ಮನೆಯಲ್ಲಿರುವ ಬಹುತೇಕ ವಸ್ತುಗಳಲ್ಲಿ ಕಂಡುವರುವ ಕೃತಕ ಬುದ್ಧಿಮತ್ತೆ (AI) ಈಗ ನಮ್ಮ ಬಾಯೊಳಗೆ ನುಗ್ಗಲು ಸಜ್ಜಾಗಿದೆ.
ಹೌದು, ವಿಶ್ವವಿಖ್ಯಾತ ಡೈಸನ್ (Dyson Ai Toothbrush) ಕಂಪನಿ ತನ್ನ ಹೊಸ ಹೈಟೆಕ್ ಟೂತ್​ಬ್ರಶ್​​ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಡೈಸನ್ ಅಧಿಕೃತವಾಗಿ ಈ ಎಲೆಕ್ಟ್ರಿಕ್ ಟೂತ್ ಬ್ರಷ್ ಮತ್ತು ಫ್ಲೋಸರನ್ನು ಬರೋಬ್ಬರಿ 500 ಡಾಲರ್(ಭಾರತೀಯ ರೂಪಾಯಿನಲ್ಲಿ ಸುಮಾರು 47 ಸಾವಿರ) ಬೆಲೆಗೆ ಬಿಡುಗಡೆ ಮಾಡಿದೆ. ಇದನ್ನು ನೋಡಿರುವ ಜನ ಇದೇ ಬೆಲೆಗೆ ಚಿನ್ನದ ಹಲ್ಲನ್ನೇ ಹೊಂದಬಹುದೆಂದು ಹೇಳುತ್ತಿದ್ದಾರೆ.

ಏನಿದರ ವಿಶೇಷತೆ?

ಇದು ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ಹೊಂದಿರುವ ಟೂತ್​ ಬ್ರಶ್​ಆಗಿರುವುದು ಇದರ ಮೊದಲ ವಿಶೇಚತೆಯಾಗಿದೆ. ಹಾಗೂ ಹಲ್ಲುಜ್ಜುವಾಗ ಎರಡು ಹಲ್ಲುಗಳ ನಡುವೆ ಎಷ್ಟು ಅಂತರವಿದೆ ಎಂದು ಅಂದಾಜಿಸಿ, ಅದರೊಳಗೆ ಸಿಲುಕಿರುವ ಆಹಾರಗಳನ್ನು ಎಐ ಕ್ಯಾಮರಾ ಬಳಸಿ ಇದು ಸ್ವಚ್ಛಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಹಾಗೂ ಈ ಎಐ ಟೂತ್​ ಬ್ರಶ್​ 15 ಮಿಲಿ ಸೆಕೆಂಡ್​ಗೆ ನೀರನ್ನು ಜೆಟ್​​ನಂತೆ ಸ್ಪ್ರೇ ಮಾಡುತ್ತಾ ಸಿಂಪಡಿಸುತ್ತಾ, ಹಲ್ಲಿನಲ್ಲಿ ಅಂಟಿಕೊಂಡಿರುವ ಕೊಳಕನ್ನು ಕೂಡ ಇದು ತೆಗೆದು ಹಾಕುತ್ತೆಂದು ಕಂಪನಿ ಮಾಹಿತಿ ಹಂಚಿಕೊಂಡಿದೆ. ಹಾಗೂ ಇದರೊಳಗೆ ಅತ್ಯಾಧುನಿಕ, ಕ್ಯಾಮರಾ ಹಾಗೂ ವೈ-ಫೈ ಕನೆಕ್ಟ್​ ಸೌಲಭ್ಯವಿರುವ ಕಾರಣ ಇದು ಇಷ್ಟೊಂದು ದುಬಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಸೋಷಿಯಲ್​ ಮೀಡಿಯಾನಲ್ಲಿ ಟ್ರೋಲಿಂಗ್​!

ಈ ಎಐ ಟೂತ್​ ಬ್ರಶ್​​ನ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಲ್ಲೆಡೆ ಟ್ರೋಲಿಂಗ್​ ಆರಂಭವಾಗಿದೆ. ಈ ಕ್ಯಾಮರಾವನ್ನು ಬಳಸಿ ನಾವು ಯೂಟ್ಯೂಬ್​ ವಿಡಿಯೋ ಮಾಡಬಹುದೇ? ಎಂದು ಒಬ್ಬರು ಕೇಳಿದರೆ. ಕ್ಯಾಮಾರಾ ಮೂಲಕ ನಿನ್ನೆ ಏನು ತಿಂದಿದ್ದರೆಂದು ಫೋಟೊ ತೆಗೆದುಕೊಳ್ಳಬಹುದೆಂದು ಇನ್ನೊಬ್ಬರು ಹೇಳುತ್ತಿದ್ದಾರೆ. 10 ರೂಪಾಯಿಗೆ ದೊರೆಯುವ ಸಾಧನಕ್ಕೆ ಯಾರಾದರೂ 50 ಸಾವಿರ ಕೊಟ್ಟು ಖರೀದಿಸುತ್ತಾರಾ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಗೌಪ್ಯತೆಗೆ ಡೈಸನ್ ಸ್ಪಷ್ಟನೆ ಏನು?

ಬಾಯಿಯೊಳಗೆ ಕ್ಯಾಮೆರಾ ಇರುವುದರಿಂದ ನಮ್ಮ ವೈಯಕ್ತಿಕ ದೃಶ್ಯಗಳು ಸೋರಿಕೆಯಾಗಬಹುದೇ ಎಂಬ ಆತಂಕ ಬಳಕೆದಾರರಲ್ಲಿ ಮೂಡಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಡೈಸನ್, ಈ ಕ್ಯಾಮೆರಾ ಕೇವಲ ಹಲ್ಲುಗಳ ಅಂತರವನ್ನು ಗುರುತಿಸಲು ಮಾತ್ರ ಬಳಕೆಯಾಗುತ್ತದೆ. ಇದು ಬೇಕಾದಾಗ ಮಾತ್ರ ಆನ್ ಆಗುತ್ತದೆ, ಬಳಕೆಯಲ್ಲಿಲ್ಲದಿದ್ದಾಗ ಆಫ್ ಆಗಿರುತ್ತದೆ. ಕ್ಯಾಮೆರಾ ಆನ್ ಇದ್ದಾಗ ಬಿಳಿ ಬಣ್ಣದ ಬೆಳಕು ಕಾಣಿಸುತ್ತದೆ ಎಂದಿದೆ.
ಅಲ್ಲದೆ, ಲೈವ್ ವೀಕ್ಷಣೆ ಮಾಡುವಾಗ ಚಿತ್ರಗಳು ನೇರವಾಗಿ ನಿಮ್ಮ ಫೋನ್ ಆಪ್‌ಗೆ ಮಾತ್ರ ಹೋಗುತ್ತವೆ. ಅವುಗಳನ್ನು ಯಾವುದೇ ಕಾರಣಕ್ಕೂ ಡೈಸನ್ ಸರ್ವರ್‌ನಲ್ಲಿ ಸ್ಟೋರ್ ಮಾಡುವುದಿಲ್ಲ ಅಥವಾ ಕ್ಲೌಡ್‌ಗೆ ಅಪ್‌ಲೋಡ್ ಮಾಡುವುದಿಲ್ಲ. ನಮಗೂ ಅಥವಾ ಬೇರೆ ಯಾರಿಗೂ ನಿಮ್ಮ ಬಾಯಿಯೊಳಗಿನ ದೃಶ್ಯಗಳನ್ನು ನೋಡಲು ಅವಕಾಶವಿರುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net